Breaking News

ಕರುವಿಗೆ ಕೇಶ ಮುಂಡನ ಮಾಡಿಸಿ ದತ್ತು ಸ್ವೀಕರಿಸಿದ ದಂಪತಿ

ಹಿಂದೂ ಸಂಪ್ರದಾಯಗಳಲ್ಲಿ ಗೋವುಗಳಿಗೆ ಪೂಜ್ಯನೀಯ ಸ್ಥಾನಮಾನ ಇರುವುದು ಎಲ್ಲರಿಗೂ ತಿಳಿದ ವಿಚಾರ.

ಉತ್ತರ ಪ್ರದೇಶದ ರೈತರೊಬ್ಬರು ಕರುವೊಂದನ್ನು ಪುತ್ರನಂತೆ ದತ್ತು ಪಡೆದಿದ್ದಾರೆ. ವಿಜಯ್‌ಪಾಲ್ ಹಾಗೂ ರಾಜೇಶ್ವರಿ ದೇವಿ ದಂಪತಿ ಕರುವೊಂದನ್ನು ಪುತ್ರನ ರೂಪದಲ್ಲಿ ದತ್ತು ಪಡೆದಿದ್ದಾರೆ. ಮದುವೆಯಾಗಿ 15 ವರ್ಷಗಳಾದರೂ ಸಹ ಮಕ್ಕಳಾಗದೇ ಇರುವ ಕಾರಣ ಈ ದಂಪತಿ ಹೀಗೆ ಮಾಡಿದ್ದಾರೆ.

ಕರುವಿಗೆ ‘ಲಲ್ತು ಬಾಬು’ ಎಂದು ಹೆಸರಿಟ್ಟಿದ್ದು, ಕೇಶ ಮುಂಡನ ಸಂಪ್ರದಾಯವನ್ನು ಮಾಡುವ ಮೂಲಕ ಶಾಸ್ತ್ರೋಕ್ತವಾಗಿ ಈ ಕರುವನ್ನು ದಂಪತಿಗಳು ದತ್ತು ಪಡೆದುಕೊಂಡಿದ್ದಾರೆ. ಗೋಮತಿ ನದಿ ತೀರದಲ್ಲಿ ನಡೆದ ಈ ಶಾಸ್ತ್ರೋಕ್ತ ಸಮಾರಂಭಕ್ಕೆ ಸುಮಾರು 500ಕ್ಕೂ ಹೆಚ್ಚು ಅತಿಥಿಗಳು ಸಾಕ್ಷಿಯಾಗಿದ್ದಾರೆ.

“ಲಲ್ತು ಹುಟ್ಟಿದಾಗಿನಿಂದಲೂ ಮಗನಂತೆಯೇ ನಮ್ಮೊಂದಿಗೆ ಇದ್ದಾನೆ. ನಮ್ಮ ಮೇಲೆ ಲಲ್ತು ನಿಷ್ಕಲ್ಮಷವಾದ ಪ್ರೀತಿಯನ್ನು ಹೊಂದಿದ್ದಾನೆ” ಎಂದು ವಿಜಯ್‌ಪಾಲ್ ತಿಳಿಸಿದ್ದಾರೆ.

About vijay_shankar

Check Also

ಬದಾಮಿ ನಗರದಲ್ಲಿ  ಬಿ ರಾಜ್ ಶಟ್ಟಿ ಸಾರಥ್ಯದಲ್ಲಿ,,, “ಬಿ ನ್ಯೂಸ್ ಅಲರ್ಟ್ ಡಿಜಿಟಲ್ ಲೈವ್ಹ್ ಚಾನಲ್ ಅನಾವರಣ,,,!!

ಬದಾಮಿ ನಗರದಲ್ಲಿ ಬಿ ರಾಜ್ ಶಟ್ಟಿ ಸಾರಥ್ಯದಲ್ಲಿ,,, “ಬಿ ನ್ಯೂಸ್ ಅಲರ್ಟ್ ಡಿಜಿಟಲ್ ಲೈವ್ಹ್ ಚಾನಲ್ ಅನಾವರಣ,,,!!

ಬದಾಮಿ: ಇಂದು ಬದಾಮಿ ನಗರದ ಅಂಬೇಡ್ಕರ್ ಭವನದಲ್ಲಿ ಬಿ ರಾಜ್ ,,,ಶಟ್ಟಿ ಸಾರಥ್ಯದಲ್ಲಿ ” ಬಿ ನ್ಯೂಸ್ ಅಲಟ್೯ ಡಿಜಿಟಲ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.