Breaking News

ಕೂಲಿ ಕಾರ್ಮಿಕರ ಬೇಡಿಕೆ ಇಡೆರಿಸಲು ರಾಷ್ಟ್ರಪತಿಗೆ ಮನವಿ.

ಇಂದು ಗುಳೇದಗುಡ್ಡ ನಗರದಲ್ಲಿ
ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯಿಂದ (ಗ್ರಾಕೂಸ್) ವಿವಿಧ ಬೇಡಿಕೆಯನ್ನು ಮಂಡಿಸಲು ಮಾನ್ಯ ರಾಷ್ಟ್ರಪತಿ ಅವರಿಗೆ ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.
ಸಂಘನೆಯ ಜಿಲ್ಲಾ ಅಧ್ಯಕ್ಷ ಶಂಕರ ಹೂಗಾರ ಇವರ ಸಾರಥ್ಯದಲ್ಲಿ ಅನೇಕ ಕೂಲಿ ಕಾರ್ಮಿಕರು ಪಾಲ್ಗೊಂಡಿದ್ದರು, ಕರೋನದಿಂದ ಸಾಮಾನ್ಯ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಇದೇ ಸಮಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಹಲವಾರು ಕಾನೂನು ತಿದ್ದುಪಡಿಗೆ ಕೈ ಹಾಕಿರೊದು ದುರದೃಷ್ಟಕರ ಇಂತಹ ಪರಿಸ್ಥಿತಿಯಲ್ಲಿ ನಿತ್ಯ ಜೀವನ ನಡೆಸೊದು ಕಷ್ಟವಾಗಿದೆ
ಒಂದು ಕಡೆ ಸಾಲಗಾರರ, ಹಾಗೂ ಬ್ಯಾಂಕ್ ನವರ ಅನೇಕ ಕಿರುಕುಳಗಳ ಮಧ್ಯ ಮಾನಸಿಕವಾಗಿ ಕೂಲಿ ಕಾರ್ಮಿಕರು ಬದುಕು ದೂಡುತ್ತಿದ್ದಾರೆ ಸರಕಾರ ಕಾರ್ಪೊರೇಟ್ ವಲಯಕ್ಕೆ ಸಂಬಂಧಿಸಿದಂತೆ ರೈತ ಹಾಗೂ ಕೂಲಿ ಕಾರ್ಮಿಕರ ವಿರೋದಿ ಕಾನೂನು ತಿದ್ದುಪಡಿ ಸುಗ್ರಿವಾಜ್ಞೆಯನ್ನು ವಾಪಾಸ್ ಪಡೆಯಬೇಕು .

ಬಿದಿಪಾಲಾದ ಅಸಂಘಟಿತ ಕಾರ್ಮಿಕರ ವರ್ಗಕ್ಕೆ ಸಾಮಾಜಿಕ
ಭದ್ರತೆ ಒದಗಿಸಬೇಕು. ತೆರಿಗೆ ರಹಿತ ಹೊರಗಿರುವ ಕೂಲಿ ಕಾರ್ಮಿಕರ ಪ್ರತಿ ಕುಟುಂಬಕ್ಕೆ ಎಪ್ರಿಲ್ ನಿಂದ ಡಿಸೆಂಬರ್ ವರೆಗೂ ೭,೫೦೦,/₹. ಕೋವಿಡ್ ಪರಿಹಾರ ನೇರ ನಗದು ವರ್ಗಾವಣೆ ಮೂಲಕ ನೀಡಬೇಕು.
ಪಂಚಾಯತ ಕೂಲಿ ಕಾರ್ಮಿಕರಿಗೆ ೨೦೦,ದಿನ ಕೆಸಲ ಖಾಯಂ ಗೊಳಿಸಬೇಕು. ಹೀಗೆ ಅನೇಕ ಬೇಡಿಕೆಯನ್ನು ಹಿಡೆರಿಸಲು ತಹಶಿಲ್ದಾರ ಗುರುರಾಜ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು. ಈ ಸಂಧರ್ಭದಲ್ಲಿ ಸಂಘಟನೆಯ ಸದಸ್ಯರಾದ ಬಸವರಾಜ ದಳವಾಯಿ ,ಚನ್ನಪ್ಪ ಕಂಬಳಿ,ಎನ್ ,ವಾಯ್ ಅಬಕಾರಿ ,ಆರ್,ಎನ್ ಹೊಸಮನಿ, ಜೈನಾಬಿ, ಚಂದ್ರವ್ವ, ಎಸ್,ಎಸ್,ಕೆ,ಮಾದೇವಿ, ವೀರಮ್ಮ,ರೇಣವ್ವ, ಪುಂಡಲೀಕ ಕಂಬಳಿ,ಭೀಮಸಿ ಗೌಡರ್,ಬಸಪ್ಪ ಕಳ್ಳಿಮನಿ ಅನೇಕ ಕೂಲಿ ಕಾರ್ಮಿಕರು ಪಾಲ್ಗೊಂಡಿದ್ದರು. ವರದಿ : ಬಸವರಾಜ್.

About vijay_shankar

Check Also

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಆನಂದ ಪರಾಳದ

ಶ್ರೀ ಆನಂದ ಪರಾಳದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮ ಪಂಚಾಯತಿ ಸದಸ್ಯರು ಇವರಿಂದ ನಾಡಿನ ಸಮಸ್ತ ಜನತೆಗೆ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.