ಬಾಗಲಕೋಟೆ: ಇಲ್ಲಿನ ಜಿಲ್ಲಾ ಪಂಚಾಯ್ತಿ ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ವಿಭಾಗದ ಸಹಾಯಕ ಎಂಜಿನಿಯರ್ ಅಶೋಕ್ ತೋಪಲಕಟ್ಟಿ ಅವರ ಮನೆ, ಕಚೇರಿ, ಗ್ಯಾಸ್ ಏಜೆನ್ಸಿ ಮೇಲೆ ಗುರುವಾರ ಮುಂಜಾನೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿ ಪರಿಶೀಲನೆ ಆರಂಭಿಸಿದ್ದಾರೆ.
ಬಾಗಲಕೋಟೆಯ ವಿದ್ಯಾಗಿರಿ 8ನೇ ಕ್ರಾಸ್ ನಲ್ಲಿರುವ ಮನೆ, ಸಂಬಂಧಿಕರ ಹೆಸರಿನಲ್ಲಿರುವ ಮಹಾಲಕ್ಷ್ಮಿ ಗ್ಯಾಸ್ ಏಜೆನ್ಸಿ ಹಾಗೂ ಜಿಲ್ಲಾಡಳಿತ ಭವನದಲ್ಲಿರುವ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಬಾಗಲಕೋಟೆ ಎಸಿಬಿ ಡಿವೈಎಸ್ಪಿ ಗಣಪತಿ ಗೂಡಾಜಿ ನೇತೃತ್ವದಲ್ಲಿ ಧಾರವಾಡದಿಂದ ಬಂದಿರುವ ಅಧಿಕಾರಿಗಳು ಸೇರಿದಂತೆ 20 ಮಂದಿಯ ತಂಡ ಪರಿಶೀಲನೆ ನಡೆಸುತ್ತಿದೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News