Breaking News

ಸೊಳೇಭಾವಿ ಗ್ರಾಮ ಪಂಚಾಯತ್ ವತಿಯಿಂದ ನಾರಾಯಣ ಕತ್ತಿ ಇವರಿಗೆ ಬಿಳ್ಕೋಡಿಗೆ ಹಾಗೂ ಸನ್ಮಾನ ಸಮಾರಂಭ.

ಅಮೀನಗಡ: ಹುನಗುಂದ ತಾಲೂಕಿನ ಸೊಳೇಭಾವಿ ಗ್ರಾಮ ಪಂಚಾಯತ್ ನಲ್ಲಿ ಪ್ರಸಕ್ತ ೨೦೦೪ ರಿಂದ ವಸೂಲಿ ಕ್ಲಾರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನಾರಾಯಣ ,ಬಿ,ಕತ್ತಿ ಅವರು ಕಳೆದ ೧೬ ವರ್ಷಗಳಿಂದ ಇಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದರು,

ಅವರ ಪ್ರಾಮಾಣಿಕ ಸೇವಾ ಫಲವಾಗಿ ಸರಕಾರದ ಆದೇಶದಂತೆ ಖಾಯಂ ನೌಕರರಾಗಿ (SDA) ಬಡ್ತಿ ಹೊಂದಿ ಬದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮ ಪಂಚಾಯತಿಗೆ ಪ್ರಮೋಶನ್ ಆಗಿ ವರ್ಗಾವಣೆ ಆದ ಕಾರಣ ಇಂದು ಗ್ರಾಮ ಪಂಚಾಯತಿ ವತಿಯಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ M,A, ದಖನಿ, ಅವರ ಮಾರ್ಗದರ್ಶನದಲ್ಲಿ ಇಂದು ಪಂಚಾಯತ್ ಕಾರ್ಯಾಲಯದಲ್ಲಿ ಸರಳ ಸನ್ಮಾನ ಸಮಾರಂಭ ಮಾಡಿ ಬಿಳ್ಕೋಡಲಾತು.

ಮಾಜಿ ಗ್ರಾಮ್ ಪಂಚಾಯತ್ ಅಧ್ಯಕ್ಷ ಶ್ರೀ ನಾಗೇಂದ್ರಸಾ ನೀರಂಜನ್ ಮಾತನಾಡಿ ೨೦೦೪ ರಿಂದ ಯಾವ ಕಪ್ಪು ಚುಕ್ಕೆ ಬರದೇ ಉತ್ತಮ ಕೆಲಸ ಮಾಡಿದ ಫಲವಾಗಿ ಅವರು ಅಧಿಕೃತ ಬಡ್ತಿ ಹೊಂದಿದ್ದಾರೆ ನಮಗೆ ಬಹಳ ಖುಷಿ ತಂದಿದೆ ಅವರು ಇನ್ನೂ ಉನ್ನತ ಮಟ್ಟಕೆ ಬೆಳೆಯಲಿ ಇನ್ನೂ ಅವರ ಸೇವಾ ಅವಧಿ ೧೪ ವರ್ಷ ಇದೆ ಉತ್ತಮ ಜನ ಸೇವೆ ಮಾಡಲಿ ಎಂದು ಶುಭ ಕೋರಿದರು.

ಹಾಗೂ ಮಾಜಿ ಅಧ್ಯಕ್ಷ ರಾಜಮಹಮ್ಮದ ಮುಲ್ಲಾ , ಮತ್ತು ದೇವರಾಜ್ ಕಮತಗಿ ಮಾತನಾಡಿ ಎನ್ ,ಬಿ ಕತ್ತಿ ಅವರ ಸೇವಾ ಕಾರ್ಯವನ್ನು ಮೆಚ್ಚಿ ಸರಳ,ಹಾಗೂ ಶಾಂತ ಸ್ವಭಾವದಿಂದಾಗಿ ಜನ ಮನ ಗೆದ್ದು ಉತ್ತಮ ಕೆಲಸದ ಮೂಲಕ ಗುರುತಿಸಿಕೊಂಡ ಇವರ ದಕ್ಷತೆ ಮೆಚ್ಚುಗೆಗೆ ಕಾರಣ ಅವರು ಅಲ್ಲಿಯೋ ಕೂಡ ಹೀಗೆ ಹೆಸರು ಮಾಡಲಿ ಎಂದು ಶುಭ ಕೊರಿದರು. ಸರಳ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅಭಿವೃದ್ಧಿ ಅಧಿಕಾರಿ ದಖನಿ ಅವರು ನಾರಾಯಣ ಅವರ ಸೇವಾ ಕಾರ್ಯ ಶ್ಲಾಘನೀಯ, ಅವರು ಏನೇ ಕೆಲಸ ಕೊಟ್ಟರು ಸಹ ಬಹಳ ಅಚ್ಚುಕಟ್ಟಾಗಿ ಮಾಡಿ ಮುಗಿಸಿಸುವ ವ್ಯಕ್ತಿ ,ಅವರು ಇಲ್ಲಿ ಒಳ್ಳೆಯ ಹೆಸರು ಮಾಡಿ ಜನಮಾನಸದಲ್ಲಿ ಉಳಿದ ಹಾಗೆ ಅಲ್ಲಿಯೂ ಹೀಗೆ ಉತ್ತಮ ಕೆಲಸ ಮಾಡಲಿ ಎಂದು ಶುಭ ಕೋರಿದರು.

ಸದರಿ ಈ ಸನ್ಮಾನ ಸ್ವೀಕರಿಸಿ ಮಾತನಾಡಿದ ನಾರಾಯಣ ಕತ್ತಿ ಅವರು ನನ್ನ ಪ್ರಾಮಾಣಿಕ ಸೇವೆ ಗುರುತಿಸಿ ಅತ್ಯಂತ ಗೌರವ ಪೊರ್ವಕವಾಗಿ ನನ್ನನೂ ಸನ್ಮಾಸಿ, ಗೌರವಿಸಿದ್ದಕ್ಕಾಗಿ ಎಲ್ಲಾ ಪಂಚಾಯತ್ ಅಧಿಕಾರಿ,ಸಿಬ್ಬಂದಿ, ಹಾಗೂ ಮಾಜಿ ಸದಸ್ಯರುಗಳಿಗೆ ಧನ್ಯವಾದ ಹೇಳಿದರು. ಸದರಿ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಅಧಿಕಾರಿ ಶ್ರೀ ಎಮ್,ಎ, ದಖನಿ , ಕಾರ್ಯದರ್ಶಿ ಕುಮಾರಿ ರಂಜಿತಾ ಪ್ರಲ್ಹಾದ,ಹತ್ತಿ, ಹಾಗೂ ಮಾಜಿ ಅಧ್ಯಕ್ಷರುಗಳಾದ ಶ್ರೀ ನಾಗೇಂದ್ರಸಾ ,ನೀರಂಜನ್, ಶ್ರೀ ರಾಜಮಹಮ್ಮದ ,ಮುಲ್ಲಾ, ಮತ್ತು ಮಾಜಿ ಗ್ರಾ,ಪಂ, ಸದಸ್ಯರುಗಳಾದ ಇಬ್ರಾಹಿಮ್ ,ಮುಲ್ಲಾ,

ಪರಶುರಾಮ ,ಜಗ್ಗಲ್, ಹನಮಂತ ,ಘಂಟಿ, ಪ್ರಭು,ಭಾಫ್ರಿ, ಹಾಗೂ ಕೊರಮ ಸಮಾಜದ ಮುಖಂಡ ಯಶೋಧರ ಭಜಂತ್ರಿ , ಪಂಚಾಯತ್ ಸಿಬ್ಬಂದಿಗಳಾದ ವಾಯ್,ಎಚ್,ಕೋರಿ, ಶ್ರೀಮತಿ
ಶ್ರಿದೇವಿ,ಎಮ್,ಬೆಲ್ಲದ, ಮಹಾದೇವ, ಚಲವಾದಿ ಪರಸಪ್ಪ, ಮಡಿವಾಳರ, ರಾಮಣ್ಣ, ಚಲವಾದಿ, ಸುರೇಶ , ಚಲವಾದಿ, ಲವಾ , ಹುಣಶ್ಯಾಳ, ಈರಪ್ಪ ಚಲವಾದಿ, ನೀಲವ್ವ,ಶಾರವ್ವ,ರೇಣವ್ ಸಿಬ್ಬಂದಿಗಳು ಉಪಸ್ಥಿತಿ ಇದ್ದರು.ಕಾರ್ಯಕ್ರಮದ ನಿರೂಪಣೆ, ಹಾಗೂ ವಂದನಾರ್ಪಣೆಯನ್ನು ವಾಯ್,ಎಚ್,ಕೋರಿ ನಡೆಸಿಕೊಟ್ಟರು.

About vijay_shankar

Check Also

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಅಮೀನಗಡ : ಸಮೀಪದ ಗುಡೂರು ಎಸ್,ಸಿ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದೆ. ವಿಚಿತ್ರ ಎಂದರೆ ಈ ದುಶ್ಚಟಕ್ಕೆ ವಯಸ್ಕರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.