
ಜನಪ್ರೀಯ ಶಾಸಕ ಡಾ: ವಿಜಯಾನಂದ ಎಸ್ ಕಾಶಪ್ಪನವರ ಅವರಿಂದ ಕಾರ್ಯಕ್ರಮ ಉದ್ಘಾಟನೆ ನಡೆಯಿತು.
ಹುನಗುಂದ : ಇಲಕಲ್ಲ ಹಾಗೂ ಹುನಗುಂದ ನಗರದಲ್ಲಿ ಕೊರಮ ಜನಾಮಗದ ಅಭಿವೃದ್ಧಿಗಾಗಿ ಇಲಕಲ್ಲ ನಗರದ ಕೊರಮ ಜನಾಂಗಗಕ್ಕೆ ಸಮೂದಾಯ ಭವಣದ ನಿರ್ಮಾಣದ ನಿರ್ಮಾಣಕ್ಕ ಪೂಜ್ಯ ಶ್ರೀ ನಾಗಭೂಷಣ ಮಹಾಸ್ವಾಮಿಗಳ ಮನವಿಯಂತೆ 50 ಲಕ್ಷ ರೂಪಾಯಿ ಅನುದಾನವನ್ನು ಈಗಲೇ ಘೋಷಣೆ ಮಾಡುತ್ತಿದ್ದೇನೆ ಮತ್ತು ಹುನಗುಂದ ನಗರದಲ್ಲಿ ಇರುವ ನಿಮಗೂ ಕೂಡ ಈಗಾಗಲೇ 80X100 ಜಾಗವನ್ನು ನೀಡಿದ್ದು
ತಮಗೂ ಕೂಡ 25 ಲಕ್ಷ ರೂಪಾಯಿ ಅನುದಾನ ಘೋಷಣೆ ಮಾಡುತ್ತಿದ್ದೇನೆ ಅವಳಿ ತಾಲೂಕಿನ ಈ 75 ಲಕ್ಷ ರೂಪಾಯಿಗಳ ಅನುದಾನವನ್ನು ಅತೀ ಶೀಘ್ರದಲ್ಲೇ ಬಿಡುಗಡೆ ಮಾಡಿ ಒಂದೇ ವರ್ಷದಲ್ಲಿ ಮತ್ತೆ ನಾನೇ ಬಂದು ಅದನ್ನ ಉದ್ಘಾಟನೆ ಮಾಡುತ್ತೇನೆಂದು ನಗರದಲ್ಲಿ ವಿಜಯ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ನಡೆದ ಶಿವಶರಣ ನೂಲಿ ಚಂದಯ್ಯನವರ ೯೧೮ನೇ ಜಯಂತೋತ್ಸವ ಸಮಾರಂಭ ಉದ್ಘಾಟಸಿ ಅವರು ಮಾತನಾಡಿದರು

ನಮ್ನ ತಂದೆಯವರ ಕಾಲದಿಂದಲೂ ನಿಮ್ಮ ಜನಾಂಗ ನಮ್ನೊಂದಿಗೆ ಉತ್ತಮ ಅವಿನಾಭಾವ ಸಂಭಂದವನ್ನು ಇಟ್ಟುಕೊಂಡಿದೆ,ಅವರಿಗೆ ತೋರಿಸಿದ ಪ್ರೀತಿ ,ಗೌರವ ನಬಗೂ ಕೊಟ್ಟು ಅಧಿಕಾರ ಕಿಟ್ಟಿದ್ದಿರಿ ನಾನು ಅದಕ್ಕೆ ಚಿರರುಣಿ, ನಾನು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯನಾದ ನಂತರ ಸುಮಾರು ಉಪಜಾತಿಗಳು ಇದರಲ್ಲಿ ಇದ್ದು ನೀವು ಕೂಡ ಈ ನಿಗಮದಲ್ಲಿ ಅಲವಾರು ಯೋಜನೆಗಳ ಮೂಲಕ ಸೌಲಭ್ಯ ಪಡೆಯಬಹುದು ಮಕ್ಕಳ ಉತ್ತಮ ವಿದೇಶಿ ಶಿಕ್ಣಕ್ಕೆ ಕನಿಷ್ಟ ಈಗ 50 ಲಜ್ಷ ರೂಪಾಯಿ ವರೆಗೆ ಸಹಾಯಧನ ಪಡೆಯಬಹುದು,

ತಮಗೂ ಕೂಡ ಅವಕಾಶ ಇದೆ ,ನಮಗೆ ಎಲ್ಲಾ ಜಾತಿ ಜನಾಂಗದ ಬಗ್ಗೆ ಗೌರವ ಇದೆ ,ಸದಾಶಿವ ಆಯೋಗದ ವರದಿಯಿಂದ ಕೆಕವು ಸಮಯದ ಜನಾಂಗಗಕ್ಕೆ ಅನ್ಯಾಯವಾಗಿದೆ,ತಮ್ಮ ಹೋರಾಟಕ್ಕೆ ನಾನು ಕೂಡ ಸಾರಥಿಯಾಗಿ ಮುಂಚೂಣಿಯಲ್ಲಿದ್ದು ಮಾನ್ಯ ಮುಖ್ಯಮಂತ್ರಿಗಳ ಜೊತೆಗೆ ನಿಮ್ಮದೊಂದಿಗೆ ನಾನು ಬಂದು ಮಾತನಾಡುತ್ತೇನೆ . ಯಾರಿಗೂ ಅನ್ಯಾಯ ಆಗಬಾರದು ಅವರ ಅವರ ಹಕ್ಕುಗಳನ್ನು ನಾನು ಗೌರವಿಸಿ ತಮ್ಮೊಂದಿಗೆ ಸದಾ ಇರುತ್ತೇನೆಂದರು.

ಮುಖ್ಯ ಅಥಿಗಳಾಗಿ ಮಾತನಾಡಿದ ಮಾಜಿ ಶಾಸಕ ದೊಡ್ಡನಗೌಡ ಜಿ ಪಾಟೀಲ ಅವರು ಭಾವ ಚಿತ್ರಕ್ಕೆ ಪುಷ್ಪರ್ಚನೆ ಮಾಡಿ ಮಾತನಾಡಿದ ಅವರು ಶಿವಶರಣ ನೂಲಿ ಚಂದಯ್ಯನವರು ತಮ್ನ ಕಾಯಕದ ಮೂಲಕ ಕಲ್ಯಾಣದಲ್ಲಿ ಅಗ್ರನಾನ್ಯರಾಗಿದ್ದರು ತಮ್ಮ ಕಾಯಕದಿಂದ ಬಂದ ಹಣದಲ್ಲಿ ದಾಸೋಹ ಮಾಡಿ ಬಸವಣ್ಣನವರ ನಾಣ್ಣುಡಿಯಂತೆ ಕಾಯಕವೇ ಕಲಾಸ ಎಂಬ ವಾಕ್ಯವನ್ನು ಇಡಿ ನಾಡಿಗೆ ಸಾರಿದ ನಿಜ ಶರಣ ನೂಲಿ ಚಂದಯ್ಯನವರು

ಅವರ ತತ್ವ ಸಿದ್ದಾಂತ ಕಾಯಕದ ಮಹತ್ವ ಅರಿತು ಅವರ ತೋರಿಸಿದ ಮಾರ್ಗದಲ್ಲಿ ನಾವು ನೀವು ನಡಿಯೋಣ ಎಂದರು. ಬಾಗಲಕೋಟೆಯ ಕೊರಮ ಸಮಾಜದ ಅಧ್ಯಕ್ಷ ಅಶೋಕ ಭಜಂತ್ರಿ, ತಾಲೂಕ ಅಧ್ಯಕ್ಷ ಎಸ್ ಎಸ್, ಸಂಗಮದ ಹಾಗೂ AICC ಮಾಜಿ ಸದಸ್ಯರಾದ ಶ್ರೀಮತಿ ಶ್ರೀದೇವಿ ಉತ್ಗಾಸರ್ ,ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾದ ಶ್ರೀಮತಿ ಬಾಯಕ್ಕ ಮೇಟಿ, ಉಪನ್ಯಾಸಕ ತಮ್ಮಣೆಪ್ಪ ಬ ಭಜಂತ್ರಿ ಮಾತನಾಡಿದರು.

ಬೆಳಗ್ಗೆ ಸಮಾಜದ ಲಕ್ಷ್ಮೀ ದೇವಿ ದೇವಸ್ಥಾನದಿಂದ ಹುನಗುಂದ ನಗರದ ಪ್ರಮುಖ ಬದಿಗಳಲ್ಲಿ ಸಮಾಜದ ಕುಲಗುರುಗಳಾದ ಮುನಿಪ್ರ ಪೂಜ್ಯ ಶ್ರೀ ಖುಷೆಬೇಂದ್ರ ಮಹಾಸ್ವಾಮಿಗಳನ್ನು ತರೆದ ರಥ ವಾಹಣದಲ್ಲಿ ಮೆರವಣಿಗೆ ಮೂಲಕ ಕುಂಭ ಮೇಳದೊಂದಿಗೆ ವೇದಿಕೆಗೆ ಕರೆ ತಂದರು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಖುಷೆಬೇಂದ್ರ ಮಹಾಸ್ವಾಮಿಗಳು ಶಿವಣಗಿ ನಂದಿಪೀಠ

ಹಾಗೂ ಗುಳೇದಗುಡ್ಡದ ಮುನಿಪ್ರ ಶ್ರೀ ನಾಗಭೂಷಣ ಶ್ರೀಗಳು ಮತ್ತು ಸುಕ್ಷೇತ್ರ ಸಿದ್ದನಕೊಳ್ಳದ ಡಾ: ಶಿವಕುಮಾರ್ ಮಹಾಸ್ವಾಮಿಗಳು ವಹಿಸಿದ್ದರು ಮುಖ್ಯ ಅಥಿತಿಗಳಾಗಿ ಶ್ರೀಮತಿ ಸುಧಾರಾಣಿ ಸಂಗಮ ಹಾಗೂ ಶ್ರೀಮತಿ ಭಾಗ್ಯಶ್ರೀ ರೇವಡಿ, ಶ್ರೀ ರಾಜಕುನಾರ ಬಾದವಾಡಗಿ, ವಿಜಯ ಗದ್ದನಕೇರಿ ಹಾಗೂ ಸಮಾಜದ ಮುಖಂಡರಾದ ಶ್ರೀ ಮಹಾಂತೇಶ ಭಜಂತ್ರಿ, ಬಸವರಾಜ್ ಹುನಕುಂಟಿ, ಯಶೋಧರ ಭಜಂತ್ರಿ, ಬಸವರಾಜ್ ಭಜಂತ್ರಿ ( ಅಮರಾವತಿ) ಮುತ್ತಣ್ಣ ಭಜಂತ್ರಿ ( ಸಂಗಮ) ನಾಗಪ್ಪ ಭಜಂತ್ರಿ ,ಮಲ್ಲೇಶ ಭಜಂತ್ರಿ, ಬಾಬು ಭಜಂತ್ರಿ ಸುಭಾಸ್ ಭಜಂತ್ರಿ ,ಹನಮಂತ ಭಜಂತ್ರಿ, ರೋಮಣ್ಣ ಭಜಂತ್ರಿ, ಸಮಾಜದ ಎಲ್ಲಾ ಮುಖಂಡರು ಉಪಸ್ಥಿತಿ ಇದ್ದರು. ಪ್ರಾಸ್ತಾವಿಕ ನುಡಿಯನ್ನು ಸಮಾಜಾದ ಯುವ ಮುಖಂಡ ಬಸವರಾಜ್ ಹುನಕುಂಟಿ ಪ್ರಸ್ತಾಪಿಸಿದರು.



ಮಾಜಿ ಶಾಸಕರಾದ ದೊಡ್ಡನಗೌಡ ಜಿ ಪಾಟೀಲ ಅವರಿಂದ ಭಾವಚಿತ್ರಗಳಿಗೆ ಪುಷ್ಪಾರ್ಚಣೆ ಮಾಡಿದರು.

ಸನಾಜದ ಮುಖಂಡರು ಹಾಗೂ ಶಿಕ್ಷಕರು,ಸಾಹಿತಿಗಳಾದ ಶ್ರೀ ತಮ್ಮಣೆಪ್ಪ ಬಸಪ್ಪ ಭಜಂತ್ರಿ ಇವರಿಂದ ಉಪನ್ಯಾಸ
ವರದಿ: ಭೀಮಸಿಂಗ್ ನಾಯಕ / ಎಡಿಟಿಂಗ & ಪೊಟೊ ಗ್ರಫಿ ಕಿರಣ ಕಾಳಗಿ
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News