ದುಬೈ (ಯುಎಇ), ಆ. 5: ಎಲ್ಲ ಪ್ರಕಾರಗಳ ವೀಸಾ ಹೊಂದಿರುವವರು ಭಾರತದಿಂದ ಯುಎಇಗೆ ಪ್ರಯಾಣಿಸಲು ಅವಕಾಶ ನೀಡುವುದಕ್ಕೆ ಸಂಬಂಧಿಸಿದ ನಿರ್ಧಾರವೊಂದನ್ನು ಶೀಘ್ರವೇ ನಿರೀಕ್ಷಿಸಲಾಗಿದೆ ಎಂದು ಯುಎಇಗೆ ಭಾರತದ ರಾಯಭಾರಿ ಪವನ್ ಕಪೂರ್ ಹೇಳಿದ್ದಾರೆ.

”ಹೊಸ ವೀಸಾಗಳ ವಿತರಣೆಯನ್ನು ಯುಎಇ ಇತ್ತೀಚೆಗೆ ಆರಂಭಿಸಿರುವುದರಿಂದ, ಸೂಕ್ತ ವೀಸಾಗಳನ್ನು ಹೊಂದಿರುವ ಭಾರತೀಯರಿಗೆ ಯುಎಇಗೆ ಪ್ರಯಾಣಿಸಲು ಅವಕಾಶ ನೀಡುವ ಬಗ್ಗೆ ಪರಿಶೀಲಿಸುವಂತೆ ನಾವು ಭಾರತದ ಅಧಿಕಾರಿಗಳಿಗೆ ಶಿಫಾರಸು ಮಾಡಿದ್ದೇವೆ. ಈ ಬಗ್ಗೆ ಶೀಘ್ರ ನಿರ್ಧಾರ ಹೊರಬೀಳುವ ವಿಶ್ವಾಸವನ್ನು ನಾವು ಹೊಂದಿದ್ದೇವೆ” ಎಂಬುದಾಗಿ ಪವನ್ ಕಪೂರ್ ಬುಧವಾರ ಟ್ವೀಟ್ ಮಾಡಿದ್ದಾರೆ.
ಈ ಕುರಿತ ನಿರ್ಧಾರ ಹೊರಬಿದ್ದ ಬಳಿಕ, ಯುಎಇಯಲ್ಲಿ ಕುಟುಂಬ ಸದಸ್ಯರನ್ನು ಹೊಂದಿರುವವರಿಗೆ ಮತ್ತು ಇನ್ನೂ ಪಾಸ್ಪೋರ್ಟ್ಗಳಿಗೆ ಜೋಡಣೆಯಾಗದ ನೂತನ ವಾಸ್ತವ್ಯ ವೀಸಾಗಳನ್ನು ಹೊಂದಿರುವವರಿಗೆ ಯುಎಇಗೆ ಪ್ರಯಾಣಿಸಲು ಅವಕಾಶ ನೀಡಲಾಗುವುದು ಎಂದು ದುಬೈಯಲ್ಲಿರುವ ಭಾರತೀಯ ಕೌನ್ಸುಲ್ ಜನರಲ್ ಡಾ.
ಅಮನ್ ಪುರಿ ಹೇಳಿದರು. ಆದರೆ, ಈ ವಿನಾಯಿತಿಯು ‘ಕೆಲಸ ಹುಡುಕುವ’ ಉದ್ದೇಶದಿಂದ ಯುಎಇಗೆ ಬರುವವರಿಗೆ ಅನ್ವಯಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಈಗಲೂ ಭಾರತದಲ್ಲಿ ಸಿಕ್ಕಿಹಾಕಿಕೊಂಡಿರುವ ಯುಎಇ ವಲಸಿಗರಿಗೆ ರಾಯಭಾರಿಯ ಈ ಘೋಷಣೆಯು ವರದಾನವಾಗಿದೆ. ಯುಎಇಯಲ್ಲಿರುವ ತಮ್ಮ ಕುಟುಂಬ ಸದಸ್ಯರನ್ನು ಭೇಟಿಯಾಗುವುದನ್ನು ಹಾಗೂ ತಮ್ಮ ಕೆಲಸಕ್ಕೆ ಮರಳುವುದನ್ನು ಅವರು ಹತಾಶೆಯಿಂದ ಎದುರು ನೋಡುತ್ತಿದ್ದಾರೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News