
ಅಮೀನಗಡ ಸಮೀಪದ ಕೆಲೂರು ಗ್ರಾಮದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಬಿ ವಿ ವಿ ಸಂಘದ, ಶ್ರೀ ಗುರು ಮಂಟೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿ ಆಕಾಶ ಕಬ್ಬರಗಿ, ನಿನ್ನೆ ತುಳಸಿಗೇರೆಯಲ್ಲಿ ನಡೆದ ಜಿಲ್ಲಾ ಮಟ್ಟದ ಮಲ್ಲಕಂಬದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಳ್ಳುವುದರ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಆಗಿದ್ದಾನೆ.

ಅಲ್ಲದೆ ಕರ್ನಾಟಕದ ರಾಜ್ಯೋತ್ಸವದ ಅಂಗವಾಗಿ ನಡೆದ ಇಲಕಲ್ಲ ತಾಲೂಕಾ ಮಟ್ಟದ ಕನ್ನಡ ನಾಡು ನುಡಿ ಜಲಗಳ ಕುರಿತು ರಸಪ್ರಶ್ನೆ ಕಾರ್ಯಕ್ರಮದಲ್ಲಿ ಬಸಮ್ಮ ಮಂಡಿ ಮತ್ತು ಪೂಜಾ ತೋಟದ ದ್ವಿತೀಯ ಸ್ಥಾನ ಹಾಗೂ ಕರ್ನಾಟಕ ಏಕೀಕರಣ ಕುರಿತು ಭಾಷಣ ಸ್ಪರ್ಧೆಯಲ್ಲಿ ಭೂಮಿಕಾ ಉಪ್ಪಾರ ದ್ವಿತೀಯ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸುವುದರೊಂದಿಗೆ ಕೆಲೂರ ಗ್ರಾಮದ ಗೌರವವನ್ನು ಇಮ್ಮಡಿ ಗೊಳಿಸಿದ್ದಾನೆ.

ವಿದ್ಯಾರ್ಥಿಗಳ ಈ ಸಾಧನೆಯನ್ನು ಬಾಗಲಕೋಟೆಯ ಬಿ ವಿ ವಿ ಸಂಘದ, ಕಾರ್ಯಾದ್ಯಕ್ಷರಾದ ಡಾ. ವಿರಣ್ಣ ಸಿ ಚರಂತಿಮಠ, ಶಾಲಾ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಶ್ರೀ ಮಹಾಂತೇಶ ಶೆಟ್ಟರ್,ಸೇರಿದಂತೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸಿ ಬಿ ಕೋರಿ, ಹಿರಿಯ ಶಿಕ್ಷಕರಾದ ಶ್ರೀ ಎಸ್ ಬಿ ಹೆಳವರ, ಶ್ರೀ ಎಸ್ ಬಿ ಯಾವಗಲ್ಲಮಠ, ಶ್ರೀ ಎಮ್ ಎಚ್ ಗ್ವಾಗೇರ್, ಶ್ರೀ ಬಿ ಎಸ್ ಕಮತರ, ಸೇರಿದಂತೆ ಶಿಕ್ಷಕರಾದ ಶ್ರೀ ಕೆ ಎಸ್ ಬೀಳಗಿ ಶ್ರೀ ಪಿ ಎನ್ ಸಂಗಾಣವರ್ ಶ್ರೀ ಆಯ್ ಎಸ್ ಮಂಡಿ, ಶ್ರೀ ಟಿ ಬಿ ಭಜಂತ್ರಿ ಹಾಗೂ ಗ್ರಾಮದ ಗುರು ಹಿರಿಯರು ವಿದ್ಯಾರ್ಥಿಗೆ ಅಭಿನಂದನೆ ಸಲ್ಲಿಸಿದ್ದಾರೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News