ಹನುಮನಾಳ: ೧೯೮೧ ರಿಂದ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿದ ಶ್ರಿಯುತ ಮಹೇಶ್ ಜಕ್ಕಲಿ ಅವರಿಗೆ ಇಂದು ಅವರ ಸಂಘದಲ್ಲಿ ಸರಳ ಸಮಾರಂಭ
ದ,ಮೂಲಕ ಸಂಘಧ ಅಧ್ಯಕ್ಷ ಅಡೆವೆಪ್ಪ ಗೌಡರ ಹಾಗೂ ಪತ್ರಿಕೆ ಸಂಪಾದಕ ಡಿ,ಬಿ, ವಿಜಯಶಂಕರ್ ಅವರ ನೇತೃತ್ವದಲ್ಲಿ ಇಂದು ಪ್ರಶಸ್ತಿ ಪ್ರದಾನ ಮಾಡಲಾಯಿತು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅಡಿವೆಪ್ಪ ಗೌಡರ್ ೧೯೮೧ ರಿಂದ ಸಂಘದಲ್ಲಿ
ಸುಧೀರ್ಘ ೩೫ ವರ್ಷ ಸೇವೆ ಮಾಡಿ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಹಾಗೂ ರೈತರಿಗೆ ಸಕಾಲಕ್ಕೆ ತಮ್ಮ ಉತ್ತಮ ಕೆಲಸ ಕಾರ್ಯಗಳ ಮೂಲಕ ಗುರುತಿಸಿಕೊಂಡ ಮಹೇಶ ಅವರ ಸರಳ ನಡೆ ,ಅವರ ಉತ್ಸಕತೆ, ಕಂಡು ಇಂದು ಪ್ರಸಕ್ತ ೨೦೨೦ನೇ ವರ್ಷದ ಅತ್ಯುತ್ತಮ ಕಾರ್ಯನಿರ್ವಾಹಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದ್ದು ನಮ್ಮ ಆಡಳಿತ ಕಮಿಟಿಗೆ ಸಂದ ಗೌರವ ಇದಾಗಿದೆ ಅವರಿಗೆ ನಮ್ಮ ಸಂಘದ ವತಿಯಿಂದ ಧನ್ಯವಾದಗಳು ಎಂದರು,
ಈ ಸರಳ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಅಡಿವೆಪ್ಪ ಅ ,ಗೌಡರ, ಸಭೆಯ ಅಧ್ಯಕ್ಷತೆ ವಹಿಸಿದ್ದರು,ಉಪಾಧ್ಯಕ್ಷ ಶರಣಪ್ಪ ಕುಂಬಾರ ಮುಖ್ಯ ಅಥಿತಿಗಳಾಗಿ ಸಭೆ ಉದ್ದೇಶಿಸಿ ನಮ್ಮ ಆಡಳಿತ ಅವಧಿಯಲ್ಲಿ ಮಹೇಶ್ ಅವರಿಗೆ ಇಂತಹ ಪ್ರಶಸ್ತಿ ಬಂದಿದ್ದು ನಮಗೂ ಬಹಳ ಖುಷಿ ತಂದಿದೆ ನಾನು ಬಾಲ್ಯದಲ್ಲೇ ಅವರ ಕಾರ್ಯ ಚಟುವಟಿಕೆಗಳನ್ನು ನೋಡುತ್ತಾ ಬೆಳೆದವನ್ನು ಇದು ಬರೀ ಅವರಿಗೆ ಸಂದ ಗೌರವ ಅಲ್ಲ ನಮ್ಮ ಹನುಮನಾಳ ಗ್ರಾಮಕ್ಕೆ ಸಂದ ಗೌರವ ಇದೇ ತರನಾಗಿ ಮುಂದೆಯೂ ಸಹ ಅವರ ಕಾರ್ಯಗಳನ್ನು ಗುರುತಿಸಿ ಹೆಚ್ಚಿನ ಸನ್ಮಾನಗಳು ದೊರೆಯಲಿ ಎಂದು ಶುಭ ಹಾರೈಸುತ್ತೇನೆ ಎಂದರು.

ಮಂಜುನಾಥ ,ಹ,ಮುಷ್ಟಿಗೇರಿ,ಬಸವರಾಜ ,ಹ,
ಅಳ್ಳೂರ, ರಾಮಣ್ಣ,ಕ, ಕುರಬರ, ಶರಣಪ್ಪ,ಬ,ಶ್ಯಾಡ್ಲಗೇರಿ, ಶ್ರೀಮತಿ,ಶ್ರೀದೇವಿ,ಗ,ಬಡಿಗೇರ, ಶಿವಣ್ಣ,ಬಾಗಲಿ, ನಾಗಯ್ಯ,ಹಿರೇಮಠ, ಹನಮಂತ ಗೌಡರ,ಗಣೇಶ,ಕುಂಬಾರ, ಸದರಿ ಸರಳ ಸಮಾರಂಭದಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದ ನಿರೂಪನೆ,ಹಾಗೂ ವಂದನಾರ್ಪಣೆಯನ್ನು ಶರಣಪ್ಪ ಬಾಗಲಿ ಅವರು ನೆರವೇರಿಸಿದರು.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News