Breaking News

ಭರತ ನಾಟ್ಯ ಕಲಾವಿದೆ ಕುಮಾರಿ ಸೌಜನ್ಯಾ ಮೋಹರೆಗೆ ಕರ್ನಾಟಕ ಸರಕಾರದ ಬಾಲ ಗೌರವ ಪ್ರಶಸ್ತಿಗೆ ಆಯ್ಕೆ

ಬಾಗಲಕೋಟೆ 24 ಃ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಬಾಲ ಗೌರವ ಪ್ರಶಸ್ತಿಗೆ ಬೆಳಗಾವಿ ವಿಭಾಗ ಮಟ್ಟದಿಂದ ನಗರದ ನಾಟ್ಯ ಪ್ರವೀಣೆ ಕುಮಾರಿ ಸೌಜನ್ಯ ಮೋಹರೆ ಅವರು ಭಾಜನರಾಗಿದ್ದಾರೆ.

ವಿದ್ಯಾಗಿರಿಯ ಸೇಂಟ ಆ್ಯನ್ಸ ಕಾನ್ವೆಂಟ ಹೈಸ್ಕೂಲ್ನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಕುಮಾರಿ ಸೌಜನ್ಯ ಮೋಹರೆ ಈಗಾಗಲೇ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದು ಈಗ ಮತ್ತೆ ಕರ್ನಾಟಕ ಸರಕಾರದ ಬಾಲ ವಿಕಾಸ ಅಕಾಡೆಮಿಯ 2021ನೇ ಸಾಲಿನ ಬಾಲ ಗೌರವ ಪ್ರಶಸ್ತಿಯು ಅವರ ಮುಡಿಗೇರಿದೆ. ಭರತನಾಟ್ಯ ನಾಟ್ಯ ನೃತ್ಯ ಅಭ್ಯಾಸವನ್ನು ಶ್ರೀಮತಿ ಶುಭದಾ ದೇಶಪಾಂಡೆ ಅವರ ನೇತೃತ್ವದ ನಟರಾಜ ಸಂಗೀತ ನೃತ್ಯ ನೀಕೇತನದ ಅಭ್ಯಾಸ ಮಾಡುತ್ತಿದ್ದಾಳೆ.

ಧಾರವಾಡದ ಮಲ್ಲಿಕಾರ್ಜುನ ಮನ್ಸೂರ್ ಕಲಾಭವನದಲ್ಲಿ ದಿ. 28 ರಂದು ನಡೆಯುವ ಅಕಾಡೆಮಿಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸೌಜನ್ಯ ಮೋಹರೆ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದು ಸಮಾರಂಭದಲ್ಲಿ ಕೇಂದ್ರದ ಸಚಿವರಾದ ಪ್ರಹ್ಲಾದ್ ಜೋಶಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ ಮತ್ತಿತರರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

ಧಾರವಾಡ ಮನ್ಸೂರ ಕಲಾ ಭವಣದಲ್ಲಿ ನಡೆಯುವ ಈ ಕಾರ್ಯಕ್ರಮ ದಲ್ಲಿ ಅನೇಕ ಗಣ್ಯರು ಸಾಕ್ಷಿ ಆಗಲಿದ್ದಾರೆ,ರಾಜ್ಯದ ಹಲವು ಉತ್ಸವಗಳಲ್ಲಿ ಭಾಗವಹಿಸಿ ಅನೇಕ ಬೀರುದುಗಳು,ಪ್ರಶಸ್ತಿಗಳನ್ನು ಪಡೆದು ಅತೀ ಕಿರಿಯ ವಯಸ್ಸಿನಲ್ಲಿ ರಾಜ್ಯದಲ್ಲಿ ಕಲಿತ ವಿಧ್ಯಾ ಸಂಸ್ಥೆಯ ಹೆಸರು ಹಾಗೂ ಕುಟುಂಬದ ಕಿರ್ತಿಯನ್ನು ಕುಮಾರಿ ಸೌಜನ್ಯ ಬೆಳಗಿಸಿದ್ದಾಳೆ, ಎಂದು ಕೃಷ್ಣಾ ಮೋರೆ ಅವರು ತಿಳಿಸಿದರು. ಈ ಕಲೆ ಗುರುತಿಸಿ ಕರ್ನಾಟಕ ಸರಕಾರ ಈ ಬಾಲ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಿದೆ,ಆಯ್ಕೆ ಮಾಡಿದ ಎಲ್ಲರಿಗೂ ನಮ್ಮ ಕುಟುಂಬದ ಪರವಾಗಿ ಧನ್ಯವಾದಗಳು ಎಂದರು.

About vijay_shankar

Check Also

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಅಮೀನಗಡ : ಸಮೀಪದ ಗುಡೂರು ಎಸ್,ಸಿ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದೆ. ವಿಚಿತ್ರ ಎಂದರೆ ಈ ದುಶ್ಚಟಕ್ಕೆ ವಯಸ್ಕರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.