
ಅಮೀನಗಡ : ಸರಕಾರ ಕಡ್ಡಾಯವಾಗಿ DJ ಬ್ಯಾನ್ ಮಾಡಿದೆ,ಗಜಾನನ ಸಂಘದ ಸರ್ವ ಸದಸ್ಯರು ಎಚ್ಚೆತುಕೊಂಡು ಪರಿಸರ ಸ್ನೇಹಿ ಗಣಪತಿ ಇರಿಸಿ ಸರಳತೆಯಿಂದ ಮತ್ತು ಇತರರಿಗೆ ಮಾದರಿಯಾಗಿ ವಾಧ್ಯಗೊಷ್ಟೀಯೊಂದಿಗೆ ಗಣಪತಿ ವಿಸರ್ಜನೆ ಮಾಡಬೇಕೆಂದು
ಇಂದು ಸಾಯಂಕಾಲ ೪;೩೦ ರ ಸುಮಾರಿಗೆ ಅಮೀನಗಡ ಪೊಲೀಸ್ ಠಾಣೆಯಲ್ಲಿ ಗಣೇಶ ಚತುರ್ಥಿ ಹಾಗೂ ಇದ್ ಮಿಲಾದ್ ಹಬ್ಬದ ಆಚರಣೆ ಕುರಿತು ಶಾಂತಿ ಪಾಲನೆ ಸಭೆ ಉದ್ದೇಶಿಸಿ ಠಾಣಾ ಅಧಿಕಾರಿ ಶ್ರೀಮತಿ ಜ್ಯೋತಿ ವಾಲಿಕಾರ ಮಾತನಾಡಿದರು.
ಠಾಣಾ ಅಧಿಕಾರಿ ಪಿ,ಎಸ್,ಐ ಶ್ರೀಮತಿ ಜ್ಯೋತಿ ವಾಲಿಕಾರ ಅವರು ಸಭೆ ಉದ್ದೇಶಿಸಿ ಮಾತನಾಡಿದ ಕ್ಷಣ
ಈ ಸಭೆಯಲ್ಲಿ ಉಪಸ್ಥಿತರಿದ್ದ ನಗರದ ಪಟ್ಟಣ ಪಂಚಾಯತಿ ಸದಸ್ಯ ಶ್ರೀ ವಿಜಯಕುಮಾರ್ ಕನ್ನೂರು,ಹಾಗೂ ಶ್ರೀ ಅಮರೇಶ ಮಡ್ಡಿಕಟ್ಟಿ, ಶ್ರೀ ಯಮನೂರ ಕತ್ತಿ, ಶ್ರೀ ದೇವರಾಜ್ ಕಮತಗಿ, ಶ್ರೀ ಪಾಯಾಜ್ ಮಸಳಿ, ಶ್ರೀ ಬಸವರಾಜ್ ನೀಡಗುಂದಿ, ಶ್ರೀ ಡಿ ಬಿ ವಿಜಯಶಂಕರ್, ಎಲ್ಲರು ಮಾತನಾಡಿ ಹಿಂದೂ – ಮುಸ್ಲಿಂಮರು ನಗರದಲ್ಲಿ ಸಹೋದರಂತೆ ಭಾವೈಕ್ಯತೆಯಿಂದ ಹಬ್ಬ ಆಚರಿಸುತ್ತಾ ಬಂದಿದ್ದೇವೆ.

ಸಮಾಜದಲ್ಲಿ ಶಾಂತಿ ಸುವ್ಯವಸ್ಥಿತೆಗೆ ಧಕ್ಯೆಯಾಗದಂತೆ ಸರಳತೆಯಿಂದ ಗಣೇಶ ಚತುರ್ಥಿ ಆಚರಿಸಲು ಮನವಿ ಮಾಡಲಾಯಿತು ಹಾಗೆ ಅತ್ಯಂತಹ ಸರಳತೆ ಹಾಗೂ ಮಾದರಿಯಾಗಿ ಯಾರು ಗಣಪತಿ ವಿಸರ್ಜನೆ ಮಾಡುತ್ತಾರೊ ಅವರಿಗೆ ಆ ಸಂಘದ ಅಧ್ಯಕ್ಷರಿಗೆ / ಕಾರ್ಯದರ್ಶಿ ಅವರಿಗೆ ಗೌರವದಿಂದ ಸನ್ಮಾನಿಸಿ 5000/ ಸಾವಿರ ರೂಪಾಯಿ ಬಹುಮಾನವನ್ನು ಸೂಳೇಭಾವಿ ಗ್ರಾಮದ ಶ್ರೀ ಶೂಲೇಶ್ವರ ಸೇವಾ ಸಮಿತಿ ನೀಡುವುದಾಗಿ ಪತ್ರಕರ್ತ ಶ್ರೀ ಡಿ ಬಿ ವಿಜಯಶಂಕರ್ ಅವರು ಘೋಷಿಸಿದರು.

ಈ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ವೃತ್ತ ನೀರಿಕ್ಷಕರಾದ CPI ಸುನೀಲ ಸವದಿ ಅವರು ಮಾತನಾಡಿ ಗಣಪತಿಯ ಇತಿಹಾಸವನ್ನು ಕೆನಕುತ್ತ ಹೋದರೆ ೧೮೯೦ ರಿಂದ ಸಾರ್ವಜನಿಕವಾಗಿ ಗಣೇಶನನ್ನು ಕೂಡಿಸು ಮುಂಚೆನೆ ಮನೆಯಲ್ಲಿ ಗಣೇಶನನ್ನು ಇರಿಸಿ ಪೂಜಿಸುವ ಪದ್ದತಿ ಇತ್ತು.

ಆದರೆ ಅದು ಯಾವ ಉದ್ದೇಶಕ್ಕಾಗಿ ಆಚರಣೆಗೆ ಬಂತು ನಮ್ಮ ದೇಶವನ್ನು ಉಳಿಸಿ ಬ್ರಿಟಿಷರನ್ನು ಓಡಿಸಿ ಸ್ವಾತಂತ್ರ ಪಡೆಯುವ ಉದ್ದೇಶಕ್ಕಾಗಿ ಸಮಾಜವನ್ನು ಸಂಘಟಿಸುವ ಮಹತ್ತ್ ಕಾರ್ಯಕ್ಕಾಗಿ ಒಂದೆ ಕಡೆ ಎಲ್ಲರೂ ಕೂಡಿ ಚರ್ಚೆ ಮಾಡುವ ಸಲುವಾಗಿ ಈ ಹಬ್ಬ ಮಹತ್ತರ ಪಾತ್ರ ವಹಿಸಿತ್ತು. ಆದರೆ ಈಗ ಇದರ ದಿಕ್ಕು ಬದಲಾಗಿದೆ, ಸಾರ್ವಜನಿಕರು ಹಬ್ಬವನ್ನು ಬಹಳ ಸರಳತೆಯಿಂದ ಇತರಿಗೆ ತೊಂದರೆ ಆಗದಂತೆ ಕಡ್ಡಾಯವಾಗಿ ಅನುಮತಿ ಪಡೆದು ಶಾಂತಿಯಿಂದ ಹಬ್ಬ ಆಚರಿಸಿ.DJ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಸಂಘಟಿಕರು ಸಹಕರಿಸಬೇಂದುರು

ಈ ಸಮಾಜದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಮ್ಮೊಂದಿಗೆ ತಾವೆಲ್ಲರೂ ಕೈ ಜೊಡಿಸಿ ಸಹಕಾರ ಕೋಡಬೇಕು ಅಲ್ಲದೆ, ಏನೇ ಸಲಹೆ ಬೇಕಾದರೂ ಮಾಹಿತಿ ಪಡೆದು ತಮ್ಮ ತಮ್ಮ ಮಾರ್ಗ ಸೂಚಿಯಂತೆ ಗಣೇಶ ವಿಸರ್ಜನೆ ಮಾಡಬೇಕೆಂದರು. ಈ ಸಂದರ್ಭದಲ್ಲಿ ಸೂಳೇಭಾವಿ ಅಮೀನಗಡ,ಕಮತಗಿ, ಗೂಡೂರು,ಇತರೆ ಗ್ರಾಮದ ಗಜಾನನ ಸಂಘದ ಪದಾಧಿಕಾರಿಗಳು ಉಪಸ್ಥಿತಿ ಇದ್ದರು.


ಅಮೀನಗಡ ನಗರದ ರಾಜಕೀಯ ಮುಖಂಡರಾದ ಶ್ರೀ ಯಮನೂರು ಕತ್ತಿ ಅವರು ಮಾತನಾಡಿದ ಕ್ಷಣ

Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News