ನವದೆಹಲಿ, ಜುಲೈ 27: ಮೋದಿ ಸರ್ಕಾರದ ಡಿಜಿಟಲ್ ಇಂಡಿಯಾದ ಆಶಯಕ್ಕೆ ತಕ್ಕಂತೆ ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ) ತನ್ನ ಗ್ರಾಹಕರಿಗೆ ಫೇಸ್ ಬುಕ್, ಟ್ವಿಟ್ಟರ್ ಮೂಲಕ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್ ಗಳನ್ನು ಕಾಯ್ದಿರಿಸುವ ಸೌಲಭ್ಯವನ್ನು ಈಗಾಗಲೇ ನೀಡಿದೆ. ಈಗ ಕೊರೊನಾವೈರಸ್

ಸಂದರ್ಭದಲ್ಲಿ ಅಡುಗೆ ಅನಿಲ ಸಿಲಿಂಡರ್ ಕಾಯ್ದಿರಿಸಲು ವಾಟ್ಸಾಪ್ ಕೂಡಾ ಬಳಸಬಹುದಾಗಿದೆ. ಇಂಡಿಯನ್ ಆಯಿಲ್‌ನ ಇಂಡೇನ್ ಅನಿಲದ ಗ್ರಾಹಕರು, ಸುಲಭವಾಗಿ ವಾಟ್ಸಾಪ್ ಮೂಲಕ ಸಿಲಿಂಡರ್ ಬುಕ್ ಮಾಡಬಹುದು ಎಂದು ಇಂಡಿಯನ್ ಆಯಿಲ್ ಟ್ವೀಟ್ ಮಾಡಿದೆ. ಗ್ರಾಹಕರು 7588888824 ಸಂಖ್ಯೆಗೆ ಸಂದೇಶ ಕಳಿಸಿ ಬುಕ್ ಮಾಡಬಹುದು.
ಇಂಡಿಯನ್ ಆಯಿಲ್ ಬಳಿಕ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿಎಲ್) ವಾಟ್ಸಾಪ್ ಮೂಲಕ ಎಲ್‌ಪಿಜಿ ಸಿಲಿಂಡರ್‌ಗಳನ್ನು ಕಾಯ್ದಿರಿಸುವ ಸೌಲಭ್ಯ ನೀಡುತ್ತಿದೆ. ಬಿಪಿಸಿಎಲ್ ಸಂಖ್ಯೆ 1800224344 ಮೂಲಕ ವಾಟ್ಸಾಪ್ ನಲ್ಲಿ ನೋಂದಾಯಿಸಿಕೊಂಡು ಸಿಲಿಂಡರ್ ಬುಕ್ ಮಾಡಬಹುದು. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್, ಯುಪಿಐ ಮತ್ತು ಅಮೆಜಾನ್ ನಂತಹ ಪಾವತಿ ಅಪ್ಲಿಕೇಶನ್‌ಗಳ ಮೂಲಕ ಹಣ ಪಾವತಿಸಬಹುದಾಗಿದೆ.
ಇದಲ್ಲದೆ, ಫೋನ್ ಕರೆ/ಎಸ್ಎಂಎಸ್ ಮೂಲಕ ಬುಕ್ಕಿಂಗ್ ವ್ಯವಸ್ಥೆ ಈಗಾಗಲೇ ದೇಶದ ಹಲವೆಡೆ ಜಾರಿಯಲ್ಲಿದೆ.ಟ್ವಿಟ್ಟರ್ ಮೂಲಕ ಬುಕ್ ಮಾಡಲು refill @indanerefill ಎಂದು ಟ್ವೀಟ್ ಮಾಡಿ ಪಡೆಯಬಹುದು.
ಸದ್ಯ ಚಾಲ್ತಿಯಲ್ಲಿರುವ ವ್ಯವಸ್ಥೆಯಂತೆ ಗ್ರಾಹಕರು ತಮ್ಮ ಗ್ಯಾಸ್ ಏಜೆನ್ಸಿ (ಇಂಡೇನ್, ಎಚ್ ಪಿ, ಭಾರತ್) ನೋಂದಣಿ ಮಾಡಿದ ದೂರವಾಣಿ ಸಂಖ್ಯೆ ಮೂಲಕ ಕರೆ ಮಾಡಿ ಅಥವಾ ಎಸ್ಎಂಎಸ್ ಮೂಲಕ (REFILL ಎಂದು ಟೈಪಿಸಿ ನೋಂದಾಯಿತ ಸಂಖ್ಯೆಗೆ ಕಳಿಸಬಹುದು) ಅಡುಗೆ ಅನಿಲ ಸಿಲಿಂಡರ್ ಬುಕ್ ಮಾಡಬಹುದು.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News