
ಅಮೀನಗಡ : ಇಂದು ನಗರದ ಪೋಲಿಸ್ ಠಾಣೆಯಲ್ಲಿ ಗೌರಿ ಗಣೇಶ ಹಬ್ಬದ ನಿಮಿತ್ತವಾಗಿ ಶಾಂತಿ ಸಭೆಯನ್ನು ಅಮೀನಗಡ ಹಾಗೂ ರಕ್ಕಸಗಿ ಗ್ರಾಮದ ಗಜಾನನ ಯುವ ಮಂಡಳಿ ಸರ್ವ ಸದಸ್ಯರ ಸಭೆ ನಡೆಯಿತು. ಈ ಸಭೆಯಲ್ಲಿ ಠಾಣೆಯ ಆಡಳಿತ ಅಧಿಕಾರಿ ಪಿ,ಎಸ್,ಐ ಚನ್ನಯ್ಯ ದೇವೂರ ಅವರ ಅಧ್ಯಕ್ಷತೆಯಲ್ಲಿ

ಹಾಗೂ ಮುಖ್ಯ ಅಥಿತಿಗಳಾಗಿ ವಾಯ್ ಎಫ್ ,ಪಠಾಣ್ ಕ್ರೈಂ ಪಿ,ಎಸ್,ಐ, ಹನಮಂತ ಹಿರೇಮನಿ ,ದೇವರಾಜ ಕಮತಗಿ,ಯಮನೂರ ಕತ್ತಿ,ಪಾಪಣ್ಣ ಚವ್ಹಾಣ, ರಮೇಶ ಕೋಟಿಕಲ್ಲ ಅಬುಬಕರ,ಬೇಪಾರಿ,ಹುಲಗಪ್ಪ ಎಂ,ಕುರಿ, ಉಪಸ್ಥಿತಿ ಇದ್ದರು. ಈ ಸಭೆ ಉದ್ದೇಶಿಸಿ ಅಥಿತಿಗಳಾಗಿ ಮಾತನಾಡಿದ ದೇವರಾಜ ಕಮತಗಿ ಅಮೀನಗಡ ಹಾಗೂ ಸೂಳೇಭಾವಿ ಗ್ರಾಮಗಳು ಇವು ಭಾವೈಕ್ಯತಾ ಗ್ರಾಮ ಗಳಾಗಿವೆ ಹಿಂದೂ-ಮುಸ್ಲಿಂ ಇಲ್ಲಿ ಸೌಹಾರ್ದವಾಗಿ ಎಲ್ಲಾ ಹಬ್ಬಗಳಲ್ಲಿ ಪರಸ್ಪರ ಸಹಕಾರದಿಂದ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದೇವೆ.

ಮುಂದೆನೂ ಕೂಡ ಹೀಗೆ ಸರಕಾರದ ಸೂಚನೆಯಂತೆ ನಾವು ನೀವು ಶಾಂತಿಯುತವಾಗಿ ಈ ಗಣೇಶ ಹಬ್ಬವನ್ನು ಆಚರಿಸೋಣ, ಎಂದರು, ನಂತರ ಮಾತನಾಡಿದ ಬಿಜೆಪಿ ಯವ ಧುದೀಣ ಯಮನೂರ ಕತ್ತಿ ಮಾತನಾಡಿ ಈ ಗಣೇಶ ಹಬ್ಬಕ್ಕೆ ಒಂದು ರೋಚಕ ಹಿಂದೂ ಧರ್ಮದ ಇತಿಹಾಸವಿದೆ. ಸ್ವತಂತ್ರ ಹೋರಾಟದಲ್ಲಿ ೧೯೪೩ ರಲ್ಲಿ ಬಾಲ ಗಂಗಾಧರ ತಿಲಕರು ಹಿಂದೂ ಹಾಗೂ ಭಾರತೀಯರನ್ನು ಒಗ್ಗುಡಿಸಿ ಸಂಘಟನೆ ಕಟ್ಟಲ್ಲು ಈ ಗಣೇಶ ಹಬ್ಬವನ್ನು ಸಾರ್ವಜನಿಕವಾಗಿ ಇರಿಸಿ ಪೂಜಿಸಿ ಹಿಂದೂ ಧರ್ಮದ ಸಂಪ್ರದಾಯ ಹಬ್ಬವನ್ನಾಗಿ ಅಂದು ಚಾಲನೆ ನೀಡಿದರು.

ಆದರೆ ಅಂದಿನ ಆ ಗಣೇಶ ಆಚರಣೆ ಹಿಂದೆ ದೇಶದ ಸ್ವಾತಂತ್ರ್ಯದ ಉತ್ತಮ ಚಿಂತನೆ ಅಡಗಿತ್ತು ಆದರೆ ಇತ್ತಿಚ್ಚಿನ ಈ ಗಣೇಶ ಹಬ್ಬ ಕೆಲವು ಕಡೆ ದಾರಿಯನ್ನು ತಪ್ಪುತ್ತಿದೆ. ಹೀಗಾಗಿ ತಾವೆಲ್ಲರೂ ಇವತ್ತಿನ ಯುವ ಸಮೋಹ ಇದರ ಹಿನ್ನಲೆಯನ್ನು ಅಧ್ಯಯನ ಮಾಡಿ ನಮ್ಮ ಪೂರ್ವಜರು ಹಾಕಿ ಕೊಟ್ಟ ಈ ಹಬ್ಬ ಶಾಂತಿ ಮತ್ತು ಸೌಹಾರ್ಧತೆಗೆ ಹೆಸರಾಗಲಿ ಕಾನೂನಿನ ಸೂಚನೆಯಂತೆ ಶಾಂತಿಯಿಂದ ಹಬ್ಬ ಆಚರಿಸಿ ಎಂದು ಕರೆ ಕೊಟ್ಟರು. ಹಾಗೆ ಪಾಪಣ್ಣ ಚವ್ಹಾಣ, ರಮೇಶ ಕೋಟಿಕಲ್ಲ,ಸೇರಿದಂತೆ

ಪತ್ರಕರ್ತ ಡಿ,ಬಿ,ವಿಜಯಶಂಕರ್ ಮಾತನಾಡಿ ಅಮೀನಗಡ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಯಾರು ಪರಿಸರ ರಹಿತವಾಗಿ ಹಾಗೂ ಶಾಂತಿ ಮತ್ತು ಉತ್ತಮ ಸಂದೇಶದೊಂದಿಗೆ ಗಣೇಶನನ್ನು ಕುಡಿಸಿ ಭಾವೈಕ್ಯತವಾಗಿ ವಿಸರ್ಜನೆ ಮಾಡಿದವರಿಗೆ ಅತ್ಯುತ್ತಮ ಸಂಘ ಎಂದು ಪರಿಗಣಿಸಿ ಆ ಸಂಘಟಕರಿಗೆ ಅಮೀನಗದ ” ನಗರ ಮತ್ತು ಗ್ರಾಮೀಣ ಡಿಜಿಟಕ್ ಸೇವಾ ಸಂಸ್ಥೆ ಅಧ್ಯಕ್ಷರಾದ ಡಿ,ಬಿ,ವಿಜಯಶಂಕರ್ ಅವರು 5000/ ಸಾವಿರ ನಗದು ಬಹುಮಾನ ಘೋಷಣೆ ಮಾಡಿದರು.

ಠಾಣೆಯ PSI ಶ್ರೀ ಚನ್ನಯ್ಯ ದೇವೂರ ಅವರ ಅಧ್ಯಕ್ಷತೆಯಲ್ಲಿ 3 ಗಜಾನನ ಸಂಘಗಳನ್ನು ಆಯ್ಕೆ ಮಾಡಲಾಗುವುದು ಎಂದರು. ನಂತರ ಈ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಠಾಣಾ ಅಧಿಕಾರಿ ಚನ್ನಯ್ಯನವರು ಸರಕಾತದ ಆದೇಶ ಮತ್ತು ಮಾನ್ಯ ಎಸ್,ಪಿ,ಸಾಹೇಬರ ಸೂಚನೆಯಂತೆ ಕೆಲವು ಮಾಹಿತಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಮೊದಲು ತಮ್ಮೆಲ್ಲರಿಗೂ ಸ್ವಾಗತ ತಿಳಕಸುತ್ತಾ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗಣೇಶ ಹಬ್ಬ ಆಚರಿಸಲು ತಾವೆಲ್ಲರೂ ಬಹಳ ಉತ್ಸುಕರಾಗಿ ತಯಾರಿಯನ್ನು ಮಾಡುತ್ತಿದ್ದಿರಿ, ಬಹಳ ಸಂತೋಷ ಆದರೆ ತಾವು ತಮ್ಮ ಗಜಾನನ ಮಂಡಳಿ ಹೆಸರು, ಅದರಲ್ಲಿ ಎಲ್ಲಾ ಸದಸ್ಯರ ಪೂರ್ಣ ಮಾಹಿತಿ ಮತ್ತು ಗಣೇಶನನ್ನು ತರುವ ಹಾಗೂ ವಿಸರ್ಜನೆ ಮಾಡುವ ಮಾರ್ಗವನ್ನು ಒಂದು ಸಲ ಅರ್ಜಿಯಲ್ಲಿ ತಿಳಿಸಿದ ಮೇಲೆ ಮಾರ್ಗ ಬದಲಾವಣೆ ಮಾಡಬಾರದು, ಈ ಗಣೇಶನನ್ನು ಕೂಡಿಸಲು ಸಾರ್ವಜನಿಕ ಸ್ಥಳಗಳಲ್ಲಿ ಇತರರಿಗೆ ಬೈಕ್ ಹಾಗೂ ವಾಹನಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಸಾಧ್ಯವಾದರೆ. ಅಲ್ಲಿ CC TV ಕ್ಯಾಮರ ಅಳವಡಿಸಿ, ಮತ್ತು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿ, ತಮ್ಮೆಲ್ಲರಿಗೂ ಖಡಕ್ಕಾಗಿ ಹೇಳುವುದೇನೆಂದರೆ ಸಾರ್ವಜನಿಕವಾಗಿ ಪ್ರತಿ ಸಲ ಈ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಈ ಡಿ,ಜೇ, ಸೌಂಡ್ ಹೆಚ್ಚುವುದರಿಂದ ಸಾರ್ವಜನಿಕ ಅಕ್ಕ ಪಕ್ಕದ ಮನೆಗಳಿಗೆ ತೊಂದರೆ ಆಗುತ್ತಿದೆ,ಅನಾರೋಗ್ಯ ಪಿಡಿತರಿಗೆ,ಬಹಳ ತೊಂದರೆ ಆಗುತ್ತಿರವ ಕಾರಣ ಈ ಸಲ ಡಿಜೆ ಸಂಪೂರ್ಣ ನಿಷೇಧಿಸಲಾಗಿದೆ.

ಈ ನಿಯಮ ಮಿರಿ ಯಾರಾದರೂ ಹಚ್ಚಿದರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಿ, ಡಿಜೆ ಮಾಲಿಕರ ಮೇಲೆ ಕೇಸ್ ಕೊಡಲಾಗುತ್ತದೆ , ಈ ಹಬ್ಬವನ್ನು ಇತರರಿಗೆ ಮಾದರಿಯಾಗುವಂತೆ, ನಮ್ಮ ಗ್ರಾಮೀಣ ವಾದ್ಯಗಳ ಮೇಳದೊಂದಿಗೆ, ಕಲಾವಿದರನ್ನು ಕರಿಸಿ ಸಂಪ್ರದಾಯಕವಾಗಿ ಕಳಿಸಿ ,ಈಗಾಗಲೇ ವಿಜಯಶಂಕರ್ ಅವರು ಅತ್ಯುತ್ತಮ ಗಜಾನನ ಸಂಘಗಳಿಗೆ ಪ್ರಥಮ,ದ್ವಿತೀಯ, ತ್ರೀತಿಯ ಸಂಘಗಳಿಗೆ ನಗದು ಬಹುಮಾನವಿದ್ದು, ಮಾದರಿ ಸಂಘಗಳಾಗಿ ತಾವು ಗುರುತಿಸಿಕಿಳ್ಳಿ, ಈ ಹಬ್ಬಗಳನ್ನು ತಾವೆಲ್ಲರೂ ಭಾವೈಕ್ಯತೆಯಿಂದ, ಶಾಂತಿಯಿಂದ ಹಬ್ಬ ಆಚರಿಸಿ, ನಾವು ನಿಮ್ಮೊಂದಿಗೆ ಸದಾ ಸಹಕಾರ ಕೊಡುತ್ತೇವೆ, ಹಾಗೆ ಈ ಹಬ್ಬದಲ್ಲಿ ಯಾರಾದರೂ ಕಿಡಗೆಡಿಗಳು ಉದ್ದೇಶಪೂರ್ವಕವಾಗಿ ಶಾಂತಿ ಸುವ್ಯೆಸ್ತೆಗೆ ಧಕ್ಯೆ ತರುವಂತಹ ಅಥವಾ ಏನಾದರೂ ತೊಂದರೆ ಕೊಡುವಂತಹ ವಿಚಾರ ಯಾರ ತಲೆಯಲ್ಲಿ ಏನಾದರೂ ಇದ್ರೆ ಅದನ್ನ ಮರೆತು ಬಿಡಿ, ನನ್ನ ಠಾಣೆ ವ್ಯಾಪ್ತಿಯಲ್ಲಿ ಎಲ್ಲಾ ಗಜಾನನ ಸಂಘಗಳ ಮೇಲೆ ನಮ್ಮ ಹೊರ ಠಾಣೆಯಿಂದ ಸಿಬ್ಬಂದಿ ಕರೆದು ಮಪ್ತಿಯಲ್ಲಿ ಅಂತವರ ಮೇಲೆ ಹದ್ದಿನ ಕಣ್ಣಿಟ್ಟು ಕಾದಿರುತ್ತಾರೆ. ಹೀಗಾಗಿ ಯಾರೂ ಕೂಡ ಅದಕ್ಕೆ ಅವಕಾಶ ನೀಡಬಾರದು, ನಾನು ಈ ಠಾಣೆಗೆ ಹೊಸದಾಗಿ ಈ ವಾತದಲ್ಲಿ ಚಾರ್ಚ ಪಡೆದು ಬಂದಿದ್ದೇನೆ. ನಿಮ್ಮ ಸಹಕಾರ ನಮಗಿರಲಿ, ಸರಕಾರ ಹಾಗಃ ನಮ್ಮ ಮೇಲಾಧಿಕಾರಿಗಳ ಸೂಚನೆಯಂತೆ ಈ ನಿಯಮವನ್ನು ಎಲ್ಲಾ ಸಂಘಗಳು ಪಾಲಿಸಿ ಕಡ್ಡಾಯವಾಗಿ ಅನುಮತಿ ಪಡೆದು ಗಣೇಶ ಆಚರಿಸಲು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಅಮೀನಗಡ ಹಾಗೂ ರಕ್ಕಸಗಿ ಗ್ರಾಮದ ಗಜಾನನ ಸಂಘದ ಯುವಕರು ಹಾಗೂ ಹಿರಿಯರು, ಉಪಸ್ಥಿತಿ ಇದ್ದರು ಕಾರ್ಯಕ್ರಮ ನಿರೂಪಣೆ ಮಾಡಿದ ಸೋಮಶೇಖರ ವಿಟ್ಲಾಪೂರ ತಮ್ನ ಗ್ರಾಮದಲ್ಲಿ ಚಿಕ್ಕಹಳ್ಳಿ ಆದ್ರು ಕೂಡ ಗ್ರಾಮದಲ್ಲಿ ನಾವು ವ್ಯಾಸಂಗ ಮಾಡುವ ಸಮಯದಲ್ಲಿ ಗಜಾನನ ಸಂಘ ಹುಟ್ಟಿ ಹಾಕಿ ಇಂದು ನಾದರಿ ಸಂಘವನ್ನಾಗಿ ಮಾಡಿದ್ದೇವೆ. ಈ ಹಣದಲ್ಲಿ ದುಂದುವೆಚ್ಚ ಮಾಡದೇ ಗ್ರಾಮದಲ್ಕಿ ಉತ್ತಮ ಸುಸಜ್ಜಿತ ಗ್ರಂಥಾಲಯ ಮಾಡಿದೇವೆ. ಈಗ ಈ ಚಿಕ್ಕ ಗ್ರಾಮದಲ್ಲಿ 250 ಕ್ಕೂ ಹೆಚ್ಚು ವಿವಿಧ ಸರಕಾರಿ ನೌರರು ಇದ್ದಾರೆ. ಈ ತರ ಮಾದರಿಯಾಗಿ ಗಣಪತಿ ಕುಡಿಸಿ ಸಾರ್ವಜನಿಕರಿಗೆ ಅನುಕೂಕ ಮಾಡಿ ಎಂದು ಹೇಳಿ ಇಡೀ ಕಾರ್ಯಕ್ರಮ ನಡೆಸಿಕೊಟ್ಟರು. ಸಿಬ್ಬಂದಿಗಳಾದ ಎಚ್,ಪಿ,ಕುಕಟಿ,ಸಂಗಮೇಶ ತೋಟದ, ಆನಂದ ಮಣ್ಣಿಕಟ್ಟಿ, ಮಹಾಂತೇಶ ಭೊಳತಲೆ,ಶಿವಾನಂದ ಕಟ್ಟಿಮನಿ, ಬಸವರಾಜ ನಲತವಾಡ

Aminagad
