
ಅಮೀನಗಡ :
ಇಂದು ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದ ಶ್ರೀ ವಿಜಯ ಮಹಾಂತೇಸ್ವರ ಶಾಖಾ ಮಠದಲ್ಲಿ ಪರಮ ದಾಸೋಹಿ ಶ್ರೀ ವಿಜಯ ಮಹಾಂತ ಶಿವಯೋಗಿಗಳವರ ಹಾಗೂ ಮಹಾಂತ ಜೋಳಿಗಿಯ ಢಾ: ನಹಾಂತ ಶಿವ ಯೋಗಿಗಳವರ ಸಂಸ್ಮರಣೆಯ ೨೦೨೬ನೇ ಇಸ್ವಿ ಯ ಶ್ರಾವಣ ಮಾಸದ ನಿಮಿತ್ತವಾಗಿ
೫೧ ನೇ ಬಸವ ದರ್ಶನ ಪ್ರವಚನವನ್ನು ಮಾತೋಶ್ರಿ , ಪೂಜ್ಯ ಬಸವಗೀತಾ ತಾಯಿಯವರಿಂದ ಪ್ರವಚನ ನಡೆಯಿತು.

ಈ ಕಾರ್ಯಕ್ರಮ ಉದ್ಘಾಟನೆಯನ್ನು ಕೈಗಾರಿಕೆ ಮತ್ತು ಮೂಲ ಸೌಲಭ್ಯಗಳ ಅಭಿವೃದ್ಧಿ ನಿಮಗ ಮಂಡಳಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಎಸ್,ಜಿ,ನಂಜಯ್ಯನಮಠ ಅವರು ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಇಂದು ನಮಗೆ ೮೦ ವರ್ಷ ಸ್ವತಂತ್ರ ಸಿಕ್ಕ ದಿನ ಬಹಳ ಸಂತೋಷವಾದ ದಿನ ಅಷ್ಟೇ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವಾದ ದಿನಾ ಕೂಡ ಬ್ರಿಟಿಷರ ಬೂಟಿನ ಏಟು,ಲಾಠಿ ಏಟು,ಗುಂಡಿನ ದಾಳಿಗೆ ಎದೆ ಕೊಟ್ಟು ,ಮನೆ,ಮಠ ಕಳೆದುಕೊಂಡು, ಅಸಂಖ್ಯಾತ ಹೋರಟಗಾರ ಬಲಿದಾನದ ಮೇಲೆ ಅವರ ಹಾಗೆ ಪ್ರತಿ ಫಲದಿಂದ ನಾವು ಈಗ ನೆಮ್ಮದಿಯಿಂದ ಜೀವನ ಮಾಡುತ್ತಿದ್ದೇವೆ. ಅವರೆಲ್ಲರನ್ನು ಇಂದು ಸ್ಮರಣೆ ಮಾಡಿಕೊಂಡು ತಮ್ಮೆಲ್ಲರಿಗೂ ಸ್ವಾತಂತ್ರ ದಿನಾಚರಣೆ ಶುಭಾಯಶಗಳನ್ನು ತಿಳಿಸುತ್ತೇನೆ.

ಈ ದಿನ ನೂತನ ಕಮಿಟಿಯ ನೇತ್ರ ತತ್ವದಲ್ಲಿ ಈ ೫೧ನೇ ಶ್ರಾವಣ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪ್ರವಚನ ನಡೆಯುತ್ತದೆ. ಎಲ್ಲಾ ತಾಯಂದಿರು ಬಂದು ಅನೇಕ ವಿಚಾರಗಳನ್ನು ತಿಳಿದುಕೊಳ್ಳಿ, ಈ ಸಮಾಜದಲ್ಲಿ ಒಬ್ಬ ವ್ಯೆಕ್ತಿ ಬೆಳಿಬೇಕು ಅಂದ್ರೆ ಇಂತಹ ಆಧ್ಯಾತ್ಮಿಕ ವೇದಿಕೆ ಉತ್ತಮ ಮಾರ್ಗದರ್ಶನ ನಿಡುವುದಲ್ಲದೆ ಉತ್ತಮ ಸಂಸ್ಕಾರವಂತರಾಗಿ ಬೆಳೆಯುತ್ತಾರೆ.

“ಕಾಯಕ ಯಾರೂ ಮಾಡತಾರೋ ಅಂತವರಿಗೆ ಮಾತ್ರ ಊಟ ಮಾಡುವ ಹಕ್ಕಿದೆ,ಉಳಿದವರಿಗೆ ಅವಕಾಶ ಇಲ್ಲ.
ಪ್ರವಚನಕ್ಕಾಗಿ ಪ್ರಸಾದ, ಪ್ರಸಾದಕ್ಕಾಗಿ ಪ್ರವಚನ ಇಲ್ಲ!
ಎಂದು ಎಸ್ , ಜಿ ನಂಜಯ್ಯನಮಠ ಅವರು ಕಿವಿ ಮಾತು ಹೇಳಿದರು. ಅವರು ಶ್ರಾವಣ ಮಾಸದ ನಿಮಿತ್ಯ ಹಮ್ಮಿಕೊಂಡ ಬಸವ ದರ್ಶನ ಪ್ರವಚನ ಸಮಾರಂಭದಲ್ಲಿ ಉದ್ಘಾಟಕರಾಗಿ ಮಾತನಾಡಿದರು.


ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಸನ್ಮಾನ್ಯ ಶ್ರೀ ಆರ್,ಪಿ,ಕಲಬುರಗಿ ಅವರು ಮಾತನಾಡಿ ಈ ಒಂದು ತಿಂಗಳು ಶ್ರಾವಣ ಮಾಸ ಪೂಜೆ,ಪುರಸ್ಕಾರವನ್ನು ಮಾಡಿ ಮಾತೃಶ್ರೀ ಅಮ್ಮನವರು ಈ ವರೆಗೂ ಬಸವ ದರ್ಶನದ ಬಗ್ಗೆ ಹಾಗೂ ವಿಶ್ವ ಗುರು ಬಸವಣ್ಣನವರ ಬಗ್ಗೆ ಮತ್ತು ವಾಸ್ತವವಾಗಿ ಈ ಆಧ್ಯಾತ್ಮಿಕ ಚಿಂತನೆಗಳಿಂದ ನಮಗಾಗುವ ದಿವ್ಯ ಬಸವ ದರ್ಶನದ ಕುರಿತು ಬಹಳ ಮಾರ್ಮಿಕವಾಗಿ ಅನೇಕ ವಿಚಾರಗಳನ್ನು ಹಂಚಿಕೊಂಡರು.

ಗ್ರಾಮದ ಎಲ್ಲಾ ತಾಯಂದಿರು,ಈ ಒಂದು ತಿಂಗಳು ತಮ್ಮ ಎಲ್ಲಾ ಮನೆ ಕೆಲಸ ಬೇಗ ಮುಗಿಸಿ ಇಂತಹ ಸಂಸಾರಿಕ ಆಧ್ಯಾತ್ಮಿಕ ವಿಚಾರಗಳನ್ನು ಕೇಳಬೇಕು, ಬರೀ ದಾರಾವಾಹಿಗಳನ್ನು ನೋಡಿ ನೋಡಿ ಇಡಿ ಸಂಸಾರ ಹೇಗೆ ವಡಿಬೇಕು, ಯಾರನ್ನ ಟಾರ್ಗೆಟ್ ಮಾಡಬೇಕು ಇಂತಹ ಕೃರ ವಿಚಾರಗಳಿಂದ ಇಂದಿನ ದಾರಾವಾಹಿಗಳು ಕುಡಿಕೊಂಡಿವೆ, ಮೊದಲು ಇಂತವನ್ನು ಬಿಟ್ಟು ಇಂತಹ ಆಧ್ಯಾತ್ಮಿಕ ವಿಚಾರಗಳನ್ನು ಅಳವಡಿಕೊಳ್ಳಿ ನಾನು ಸ್ವತಹ ನಮ್ಮ ಶ್ರೀಮತಿ ಅವರಿಗೆ ಎಷ್ಟೊ ಸಲ ನಿಒಬ್ಬ ಶಿಕ್ಷಕರಾಗಿ ಈ ದಾರಾವಾಹಿ ಮೊಹ ಒಳ್ಳೆಯದಲ್ಲ ಎಂದು ಹೇಳಿದ್ದೇನೆ.

ತಮಗೂ ಕೂಡ ತಾಯಂದಿರಿಗೆ ನಾ ಹೇಳುವುದು ಇಷ್ಟೇ ಈ ಪ್ರವಚನ ,ಆಧ್ಯಾತ್ಮಿಕ ಚಿಂತನೆ, ಇದರಿಂದ ಜೀವನ ಪಾವಣವಾಗುತ್ತದೆ. ಹಾಗೆ ಪ್ರತಿ ದಿನ ಇಲ್ಲೆ ಪ್ರಸಾದವನ್ನು ಮಾಡಿದ್ದು ಎಲ್ಲರೂ ಇಲ್ಲೇ ಪ್ರಸಾದ ಮಾಡಿ ಈ ಬಸವ ದರ್ಶನ ಪ್ರವಚನದ ಎಲ್ಲಾ ವಿಚಾರಗಳು ಎಲ್ಲರಿಗೂ ತಲುಪಿ ಶ್ರೀ ಗುರು ಮಹಾಂತ ಅಪ್ಪನವರ ಆರ್ಶಿವಾದ ನಮ್ಮ ನಿಮ್ನೆಲ್ಕರಿಗೂ ಇರಲೆಂದು ಹಾರೈಸುತ್ತೇನೆಂದರು,

ಈ ಧಾರ್ಮಿಕ ಸಮಾರಂಭದಲ್ಲಿ ಶ್ರೀ,ಷ,ಬ್ರ, ನೀಲಕಂಠೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು,
ಅಮರೇಶ್ವರ ಮಠ ಕೋಟೆಕಲ್ಲು/ ಗುಳೇದಗುಡ್ಡ ಆರ್ಶಿವಚನ ನೀಡಿದರು. ಹಾಗೂ

ಶ್ರೀ ಪೂಜ್ಯ ಮ.ನಿ.ಪ್ರ,ಸಿದ್ದಲಿಂಗ ಮಹಾಸ್ವಾಮಿಗಳು, ಚಿತ್ತರಗಿ ಸಂಸ್ಥಾನ ಮಠ ಚಿತ್ತರಗಿ ಮತ್ತು
ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠದ ನೂತನ ಅಧ್ಯಕ್ಷರಾದ ಶ್ರೀ ನಹಾಂತಪ್ಪ ಅ ಭದ್ರಣ್ಣನವರ, ಉಪಾಧ್ಯಕ್ಷ ಶ್ರೀ ಮಹಾಂತೇಶ ಲೂತಿಮಠ , ಪ್ರಮುಖರಾದ ಶ್ರೀ ಪ್ರಭಯ್ಯ ನಂಜಯ್ಯನಮಠ, ಗ್ರಾಮದ ಪಿ,ಕೆ,ಪಿ,ಎಸ್,ಅಧ್ಯಕ್ಷ ಶ್ರೀ ಮೈನಪ್ಪ ಸಿಂಗಾಡಿ, ಹಾಗೂ ಶ್ರೀ ಪ್ರವೀಣ ರಾಮದುರ್ಗ, ಅಧ್ಯಕ್ಷರು ಶ್ರೀ ಶಾಖಾಂಬರಿ ಕೈಮಗ್ಗ ನೇಕಾರ,ಸಹಕಾರಿ ಸಂಘ ,

ಶ್ರೀ ಹಣಮಂತ ಹೂಗಾರ ಎ,ಎಸ್,ಐ. ( ಪೊಲೀಸ್ ಇಲಾಖೆ) ಬಾಗಲಕೋಟೆ, ಉಪಸ್ಥಿತಿ ಇದ್ದರು. ಗ್ರಾಮದ ಪ್ರಮುಖರಾದ ಶ್ರೀ ಕೃಷ್ಣಾ ರಾಮದುರ್ಗ, ಶ್ರೀ ಗದಗಯ್ಯ ನಂಜಯ್ಯನಮಠ, ಶ್ರೀ ಈರಣ್ಣ ಲೂತಿಮಠ, ಮಹಾಂತೇಶ ಭದ್ರಣ್ಣನವರ, ಶ್ರೀ ನಾಗೇಶ ಗಂಜುಹಾಳ, ಶ್ರೀ ದೇವರಾಜ ಕಮತಗಿ, ಶ್ರೀ ಮಲ್ಲನಗೌಡ ಗೌಡರ, ಶ್ರೀ ಕಾಶಿಮಸಾಬ ಬೂದಿಹಾಳ ನೂತನ ಸರ್ವ ಸದಸ್ಯರು ಸೇರಿದಂತೆ ಶ್ರೀ ಮಹಾಂತಯ್ಯ, ಹಿರೇಮಠ ಅನೇಕರು ಈ ಪ್ರವಚನದಲ್ಲಿ ಪಾಲ್ಗೊಂಡಿದ್ದರು.

ವರದಿ : ಎಮ್,ಕಿರಣರಾಜ್ ,