ಬೆಂಗಳೂರು : ಉನ್ನತ ಶಿಕ್ಷಣ ಇಲಾಖೆಯು 2020-21 ನೇ ಸಾಳಿನ ಶೈಕ್ಷಣಿಕ ವರ್ಷ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಮಹತ್ವದ ಸೂಚನೆ ನೀಡಿದೆ.
ನವೆಂಬರ್ 17 ರಿಂದ ರಾಜ್ಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿ ಆರಂಭಿಸುವುದಾಗಿ ಈಗಾಗಲೇ ಉನ್ನತ ಶಿಕ್ಷಣ ಇಲಾಖೆ ತಿಳಿಸಿದ್ದು, ಕಾಲೇಜು ಆರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಕಾಲೇಜುಗಳ ಹಾಗೂ ಎಲ್ಲ ವಿವಿಗಳ ಬೋಧಕರಿಗೆ ಸೂಚನೆ ನೀಡಿದೆ.
ಇನ್ನು ಕಾಲೇಜುಗಳಲ್ಲಿ ತುರ್ತು ಕೆಲಸಗಳನ್ನುನಿರ್ವಹಿಸಲು ಹಾಗೂ ಪರೀಕಷ ಕಾರ್ಯಗಳಿದ್ದಲ್ಲಿ ಕಡ್ಡಾಯವಾಗಿ ಹಾಜರಾಗುವಂತೆ ಪ್ರಾಂಶುಪಾಲರು ಸೂಚಿಸಿರುವ ಬೋಧಕರುಗಳಿಗೆ ನಿರ್ದೇಶಿಸಲಾಗಿದೆ.