ಬೆಂಗಳೂರು | ಕರೋನಾ ಮಹಾಮಾರಿ ರಾಜ್ಯದಲ್ಲಿ ತೀವ್ರವಾಗಿ ಹರಡುತ್ತಿದ್ದು, ಕೊರೊನಾ ಸೊಂಕು ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸಿಎಂ ಪರಿಹಾರ ನಿಧಿಗೆ ಇಲ್ಲಿಯ ವರೆಗೆ ಸಾಕಷ್ಟು ಜನ, ಸಂಘ ಸಂಸ್ಥೆಗಳು ಪರಿಹಾರವನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಂಚಪೀಠಗಳಲ್ಲಿ ಒಂದಾದ ಬಾಳೆಹೊನ್ನೂರಿನ ರಂಭಾಪೂರಿ ವೀರಸಿಂಹಾಸನ ಮಹಾಸಂಸ್ಥಾನದ ಒಡೆಯರಾದ ಡಾ. ವೀರಸೋಮೇಶ್ವರ ಭಗವತ್ಪಾದ ಶ್ರೀಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 21 ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿದ್ದಾರೆ.
ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಮಾಡಿದ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನದ ಶ್ರೀ ಜಗದ್ಗುರು ಡಾ. ವೀರಸೋಮೇಶ್ವರ ಭಗವತ್ಪಾದ ಶ್ರೀಗಳು, ಮುಖ್ಯಮಂತ್ರಿಗಳ ಕೋವಿಡ್ 19 ಪರಿಹಾರ ನಿಧಿಗೆ 21 ಲಕ್ಷ ರೂ.ಗಳ ದೇಣಿಗೆಯ ಚೆಕ್ ಅನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶ್ರೀಗಳ ಆಶೀರ್ವಾದವನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪಡೆದುಕೊಂಡರು. ಬಳಿಕ ಕೆಲವು ಹೊತ್ತು ಮಾತುಕತೆಯನ್ನು ನಡೆಸಿದರು.
ರಾಜ್ಯದಲ್ಲಿ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮನವಿಗೆ ಓಗೊಟ್ಟ ಸಾಕಷ್ಟು ಜನರು ಸಿಎಂ ಪರಿಹಾರ ನಿಧಿಗೆ ತಮ್ಮ ಕೈಲಾದ ದೇಣಿಗೆಯನ್ನು ನೀಡಿದ್ದಾರೆ. ಸಿನಿಮಾ ನಟರು, ಉದ್ಯಮಿಗಳು, ಜನಪ್ರತಿನಿಧಿಗಳು ಹಾಗೂ ಧಾರ್ಮಿಕ ಮುಖಂಡರು ಸಹಕಾರವನ್ನು ನೀಡುವ ಮೂಲಕ ಕೊರೊನಾದ ವಿರುದ್ಧದ ಹೋರಾಟಕ್ಕೆ ಸಾಥ್ ನೀಡಿದ್ದಾರೆ.
Check Also
ಬಾಗಲಕೋಟೆ ನಗರದಲ್ಲಿ ಭೋವಿ ಗುರು ಕುಟೀರ ,ಸಮಾವೇಶ ಸಿ,ಎಂ ಸಿದ್ದರಾಮಯ್ಯನವರಿಂದ ಉದ್ಘಾಟನೆ
ಬಾಗಲಕೋಟೆ : ಬಾಗಲಕೋಟೆ:ನವನಗರದಲ್ಲಿ ಭೋವಿ ಜನಾಂಗದ ಗುರು ಕುಟೀರವನ್ನು ಹಾಗೂ ಶ್ರೀ ಶರಣಬಸವ ಸ್ವಾಮಿಗಳ ಗದ್ದುಗೆ ಶಿಲಾನ್ಯಾಸ ಭೋವಿ ಸಮಾಜದ …
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News
