Breaking News
ಬಾಗಲಕೋಟೆ ಜಿಲ್ಲಾ ಬೋಧಕರಾದ ಅಹಮ್ಮದ ಸಾಹುಕಾರ್ ಅವರಿಗೆ ಅತ್ಯುತ್ತಮ ಕರ್ತವ್ಯ ಮೆಚ್ಚಿ ಸಿ,ಎಂ ಚಿನ್ನದ ಪದಕಕ್ಕೆ ಆಯ್ಕೆ ,

ಬಾಗಲಕೋಟೆ ಜಿಲ್ಲಾ ಬೋಧಕರಾದ ಅಹಮ್ಮದ ಸಾಹುಕಾರ್ ಅವರಿಗೆ ಅತ್ಯುತ್ತಮ ಕರ್ತವ್ಯ ಮೆಚ್ಚಿ ಸಿ,ಎಂ ಚಿನ್ನದ ಪದಕಕ್ಕೆ ಆಯ್ಕೆ ,

ಬಾಗಲಕೋಟೆ:
ಇಂದು ನಗರದ ಗೃಹ ರಕ್ಷಕ ದಳದ ಜಿಲ್ಲಾ ಬೋಧಕರಾದ ಅಹಮ್ಮದ ಸಾಹುಕಾರ ಅವರಿಗೆ ಅತ್ಯುತ್ತಮ ಬೋಧಕರಾಗಿ ರಾಜ್ಯ ಸಿ,ಎಮ್ ಪದಕ ಅವಾರ್ಡ ಘೋಷಣೆಯಾಗಿದೆ. ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿ ಉತ್ತಮ ಕರ್ತವ್ಯ ನಿರ್ವವಹಿಸಿ ಸಮಾಜದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮೆನ್ ಹಾಗೂ ಸಕಾಲಕ್ಕೆ ಪೊಲೀಸ್ ಇಲಾಖೆಕೆ ಸೂಕ್ತ ಬಂದುಬಸ್ತ್ ನೀಡುವಲ್ಲಿ ಗೃಹ ರಕ್ಚಕ ದಳ ಸಿಬ್ಬಂದಿಗಳನ್ನು ನೇಮಿಸುವ ಮೂಲಕ ಪ್ರಾಮಾಣಿಕ ಹಾಗೂ ಹಾನೇಸ್ಟಾಗಿ ಕರ್ತವ್ಯ ನಿರ್ವಹಿಸಿದ ಸಾಹುಕಾರ್

ಅವರ ಪ್ರಾಮಾಣಿಕ ಸೇವೆಗೆ ಸಂದ ಗೌರವ ಇದಾಗಿದೆ ಎಂದು ಗೃಹ ರಕ್ಷಕ ದಳದ ನೂರಾರು ಸಿಬ್ಬಂಗಳು ಹರ್ಷ ವ್ಯಕ್ತಪಡಿಸಿದ್ದಾರೆ. 2021 ರಲ್ಲಿ ಕರ್ತವ್ಯಕ್ಕೆ ಹಾಜರಾದ ಇವರು ಈ ವರೆಗೂ ಒಂದು ಕಪ್ಪು ಚುಕ್ಕೆಯಿಲ್ಲದೆ ಜಿಲ್ಲೆಯಲ್ಲಿ ಹೆಸರು ಮಾಡಿದ್ದಾರೆ. ಸಾಹುಕಾರ್ ಎಂದರೆ ಅವರು ವಿಳಾಸದಲ್ಲಿ ಮಾತ್ರ ಅಲ್ಲ ಹೃದಯ ಶ್ರೀಮಂತಿಕೆ ಹೊಂದಿದ ನಿಜವಾದ ಸಾಹುಕಾರ್ ! ಎಂದರೆ ತಪ್ಪಾಗಲಾರದು. ಹಾಗೆ ಎಷ್ಟೊ ಸಿಬ್ಬಂದಿಗಳಿಗೆ ಮನೆ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಎಷ್ಟೊ ಸಿಬ್ಬಂದಿಗಳಿಗೆ ವಯಕ್ತಿಕ ಆರ್ಥಿಕ ಸಹಾಯ, ಆರೋಗ್ಯ ವಿಚಾರದಲ್ಲಿ ಆಸ್ಪತ್ರೆಗೆ ಸಹಾಯ, ಮಾಡಿದ್ದಾರೆ, ನಿಜವಾದ ಕರ್ತವ್ಯ ನಿರ್ವವಹಿಸಿದ ಸಿಬ್ಬಂದಿಗಳಿಗೆ ಪ್ರೋತ್ಸಾಹ ,ಮಾಡಿದ್ದಾರೆ.

ಮೇಲಾಧಿಕಾರಿಗಳೊಂದಿಗೆ ಉತ್ತಮ ವಡನಾಟ, ಕರ್ತವ್ಯ ಅಂತ ಬಂದಾಗ ನೇರ ಮತ್ತು ನಿಷ್ಠುರತೆಯಿಂದ ಕೆಲಸ ತೆಗೆದುಕೊಂಡು ಸೈ ಎನ್ಲಿಸಿಕೊಂಡ ಇಲಾಖೆಗೆ ದೊಡ್ಡ ಹಿರಿಮೆ ತಂದು ಕೊಟ್ಟ ಸಿಂಗಂ ಅಹಮ್ಮದ ಸಾಹುಕಾರ್ ಅವರಿಗೆ ಬಾಗಲಕೋಟೆ ಇಡೀ ಅಧಿಕಾರಿ ವರ್ಗ ಹಾಗೂ ಜಿಲ್ಲೆಯ ಅನೇಕ ರಾಜಕೀಯ ಮುಖಂಡರು ಅಭಿನಂದನೆಯ ಮಹಾ ಪೂರ ಹರಿದು ಬಂದಿದೆ.
ಈ ಬರುವ ಅಗಸ್ಟ್ ೧೫ ರಂದು ಸಿ,ಎಂ ಪದಕ ಹಾಗೂ ೫೦೦೦/ ಸಾವಿರ ನಗದು ನೀಡಕಾಗುತ್ತದೆ. ಈ ವಿಚಾರದಲ್ಲಿ ಇಂದು ಬಾಗಲಕೋಟೆ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀ ಡಿ,ಬಿ,ವಿಜಯಶಂಕರ್ ಹಾಗೂ ಸದಸ್ಯರೊಂದಿಗೆ ಅಭಿನಂದನೆ ಸಲ್ಲಿಸಿ ಶುಭ ಕೋರಿದರು.

ಸಣ್ಣ ವಯಸ್ಸಿನಲ್ಲಿ ಉತ್ತಮ ಹೆಸರು ಮಾಡುತ್ತಿರುವ ಸಾಹುಕಾರ್ ಅವರ ಸೇವೆ ಶ್ಲಾಘನೀಯವಾದದ್ದು, ಹೀಗೆ ರಾಜ್ಯದಲ್ಲಿ ಇನ್ನೂ ದೊಡ್ಡ ಹೆಸರು ಮಾಡುವ ಶಕ್ತಿಯನ್ನು ಭಗವಂತ ನೀಡಲೆಂದು ಶುಭ ಕೋರಿದರು. ಈ ಸಂದರ್ಭದಲ್ಲಿ ಶ್ರೀ ರಮೇಶ ಸೂರಪುರ, ಶ್ರೀ ಯಮನಪ್ಪ ಭಜಂತ್ರಿ, ಶ್ರೀ ರುದ್ರಪ್ಪ ಹೊಸಕೋಟಿ, ಶ್ರೀ ಭೀಮಸಿಂಗ ರಾಠೋಡ ,ಹಾಗೂ ಇತರರು ಇದ್ದರು.

About vijay_shankar

Check Also

ಕೈಯಲ್ಲಿ ಲಾಠಿ,ಬಾಯಲ್ಲಿ ಬಸವಣ್ಣ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ  ನಡೆಗೆ ಬೇಸರ ವ್ಯಕ್ತ ಪಡಿಸಿದ                 ನಿಂಗಪ್ಪ ಪಿರೋಜಿ !

ಕೈಯಲ್ಲಿ ಲಾಠಿ,ಬಾಯಲ್ಲಿ ಬಸವಣ್ಣ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ನಡೆಗೆ ಬೇಸರ ವ್ಯಕ್ತ ಪಡಿಸಿದ ನಿಂಗಪ್ಪ ಪಿರೋಜಿ !

ಮೂಡಲಗಿ: ಇದೆ ಡಿ,೩೦-ಪಂಚಮಸಾಲಿ ಸಮಾಜದ ಮೇಲೆ ಲಾಠಿ ನಡೆಸಿದ, ಕೈಯಿಂದಲೇವಿಜಯಪುರದಲ್ಲಿ ರಾಣಿ ಚೆನ್ನಮ್ಮಳ ಪುತ್ತಳಿ ಅನಾವರಣ ಮಾಡುತ್ತಿರೋದುಗೌರವವಲ್ಲ, ಶುದ್ಧ ದ್ವಂದ್ವ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.