Breaking News
ಸರಕಾರಿ HPS ಶಾಲೆ ಮುಖ್ಯ ಶಿಕ್ಷಕ ಬಸವರಾಜ್ ಕೋಲಕರ ಅವರನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಿ ಸ್ವಾಗತ ಕೋರಿದ ಚಿಲ್ಲಾಪೂರ ಗ್ರಾಮಸ್ಥರು.

ಸರಕಾರಿ HPS ಶಾಲೆ ಮುಖ್ಯ ಶಿಕ್ಷಕ ಬಸವರಾಜ್ ಕೋಲಕರ ಅವರನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಿ ಸ್ವಾಗತ ಕೋರಿದ ಚಿಲ್ಲಾಪೂರ ಗ್ರಾಮಸ್ಥರು.

ಇಲಕಲ್ಲ ತಾಲೂಕಿನ ಅಮೀನಗಡ ಹೋಬಳಿ ವ್ಯಾಪ್ತಿಗೆ ಬರುವ ಚಿಲ್ಲಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಬಸವರಾಜ ಎನ್ ಕೋಲಕರ ಅವರನ್ನು ಇಂದು ಗ್ರಾಮಸ್ಥರು ಸನ್ಮಾನ ಮಾಡಿ ಅದ್ದೂರಿಯಾಗಿ ಬೆಳ್ಳಿ ರಥದಲ್ಲಿ ಗ್ರಾಮದ ಪ್ರಮುಖ ಬದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಎಲ್ಲಾ ಶಿಕ್ಷಕರನ್ನು ಸ್ವಾಗತಿಸಿದರು. ಇಂದು ಶಾಲಾ ಪ್ರಾರಂಭೋತ್ಸದಲ್ಲಿ

ಎಲ್ಲಾ ಮಕ್ಕಳನ್ನು ಸ್ವಾಗತ ಮಾಡಿಕೊಂಡು ಸರಕಾರಿ ಶಾಲೆಗೆ ಮಕ್ಕಳನ್ನು ಕರೆ ತರಲು ಜಾಗೃತಿ ಮೂಡಿಸಿದರು ,ಕಡ್ಡಾಯವಾಗಿ LKG ಹಾಗೂ UKG ಕನ್ನಡ ಹಾಗೂ ಇಂಗ್ಲೀಷ್ ಎರಡು ಭಾಷೆಯಲ್ಲಿ ಶಿಕ್ಷಣ ಈ ವರ್ಷದಿಂದ ತಮ್ಮ ಮಕ್ಕಳಿಗೆ ಸಿಗಲಿದೆ ಮಕ್ಕಳನ್ನು ತಪ್ಪದೇ ಶಾಲೆಗೆ ಕಳಿಸಲು CRC ಸಂಪನ್ಮೂಲ ವ್ಯಕ್ತಿಗಳಾದ ರವಿಕುಮಾರ್ ಕಾಳಗಿ ಅವರು ಮಾತನಾಡಿದರು, ಈ ಸಂದರ್ಭದಲ್ಲಿ

SDMC ಅಧ್ಯಕ್ಷರಾದ ಜಗದೇಶ ಸಜ್ಜನ , ಮಾಜಿ ಗ್ರಾಂ ಪ ಸದಸ್ಯರಾದ ಶಂಕ್ರಪ್ಪ ಅಮಾಜಿ, ಗ್ರಾಮದ ಪ್ರಮುಖರಾದ ಕೆಂಚಪ್ಪ ಗೊಣ್ಣಾಗರ, ಸರ್ವ ಸದಸ್ಯರು ಉಪಸ್ಥಿತಿ ಇದ್ದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಗುರುಗಳಾದ ಕೋಲಕರ್ ಅವರು ನಿಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರಕಾರಿ ಶಾಲೆಗೆ ಹಚ್ಚಿ ಸರಕಾರ ಮಕ್ಕಳ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ಇಲ್ಲಿ ಲಭ್ಯವಿವೆ,

ಈ ವರ್ಷ ಕನ್ನಡ ಹಾಗೂ ಇಂಗ್ಲೀಷ್ ಎರಡು ಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ಸಿಗಲಿದೆ. ಇದು ಜವಾರಿ ಶಾಲೆ , ಮಕ್ಕಳ ಭವಿಷ್ಯ ಇಲ್ಲಿ ಭದ್ರವಾಗಲಿದೆ. ಯಾರೂ ಬೇರೆ ಊರಿವೆ ಮಕ್ಕಳನ್ನು ಕಳಿಸಿ ಶ್ರಮ ಪಡಬೇಡಿ ಎಂದರು. ಬೆಳ್ಳಿ ರಥದಲ್ಲಿ ಭವ್ಯ ಸ್ವಾಗತ ಕೋರಿದ ಗ್ರಾಮಸ್ಥರಿಗೆ ಅಭಿನಂದನೆ ತಿಳಿಸಿದರು.

ವರದಿ : ಕಿರಣ್ ಎಂ,ಕಾಳಗಿ

About vijay_shankar

Check Also

ಅಮೀನಗಡ  ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶಿವಾನಂದ ಕಟ್ಟಿಮನಿ ಅವರಿಗೆ ಸದ್ಭಾವನ ರಾಜ್ಯ ಪ್ರಶಸ್ತಿ ಪ್ರಯುಕ್ತ ಅಭಿನಂದನ ಕಾರ್ಯಕ್ರಮ

ಅಮೀನಗಡ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶಿವಾನಂದ ಕಟ್ಟಿಮನಿ ಅವರಿಗೆ ಸದ್ಭಾವನ ರಾಜ್ಯ ಪ್ರಶಸ್ತಿ ಪ್ರಯುಕ್ತ ಅಭಿನಂದನ ಕಾರ್ಯಕ್ರಮ

ಅಮೀನಗಡ : ಇಂದು ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಜ ಯುವ ಸಂಘಗಳ ಒಕ್ಕೂಟ ವಿಜಯಪುರ ಹಾಗೂ ಮುದ್ದೇಬಿಹಾಳ ಘಟಕದಿಂದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.