
ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ವಲಯದ ಶೂಲೀಭಾವಿ ಗ್ರಾಮದಲ್ಲಿ ಶ್ರೀ ವಿಜಯಮಹಾಂತೇಶ ಮಠದಲ್ಲಿ ಇಂದು ಶ್ರೀ ಕ್ಷೇತ್ರ ಧಮ೮೯ಸ್ಥಳ ಸಂಘದಿಂದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ದೀಪ ಬೇಳಗುವ ಮೂಲಕ ಚಾಲನೆ ನೀಡಿದ ಜಿಲ್ಲಾ ಜನ ಜಾಗೃತಿ ಸಮಿತಿ ಸದಸ್ಯರಾದ ಕೃಷ್ಣಾ ರಾಮದುರ್ಗ ಅವರು ಮಾತನಾಡಿ ಈ ತಂಬಾಕು ಎಂಬುವುದು ಅತೀ ಹೇರಳವಾದ ನೀಕೋಟಿನ್ ಕ್ಯಾನ್ಸರ್ ಕಾರಕ ಅಂಶವನ್ಬು ಹೊಂದಿರುವ ಈ ತಂಬಾಕು ಇಂದು ಭಾರತದಲ್ಲಿ ಅತೀ ಹೆಚ್ಚು ಕ್ಯಾನ್ಸರ್ ನಿಂದ ಜನ ,ಮಕ್ಕಳು ಪ್ರತಿ ವರ್ಷ ನೂರಕ್ಕೆ ೩೦/ ಜನ ಸಾಯುತ್ತಿದ್ದಾರೆ.

ಹೀಗಾಗಿ ಎಲ್ಲಾ ತಾಯಂದಿರು ತಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಹಾಗೆ ನಿಮ್ಮ ಅತ್ತೆ,ಮಾವ ಹಿರಿಯರು ತಿಳಿಯದೇ ತಂಬಾಕು ಸೇವನೆ ಮಾಡುತ್ತಿದ್ದರೆ ಅವರಿಗೆ ಸಮಾಧಾನದಿಂದ ಬುದ್ದಿ ಹೇಳಿ ಈ ಮಾರನಾಂತಿಕ ತಂಬಾಕು ಸೇವನೆ ಬಗ್ಗೆ ಜಾಗೃತಿ ಮೂಡಿಸಬೇಕೆಂದರು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಬಸಮ್ಮ ಹಾಗೂ ತಾಲೂಕ ಕೃಷಿ ಇಲಾಖೆಯಿಂದ ಶ್ರೀ ಹುಚ್ಚಪ್ಪ ಹಾಗೂ ತಾಲೂಕು ಸಮನ್ವಯ ಅಧಿಕಾರಿ ಶ್ರೀಮತಿ ಸುಮಂಗಲ ಸೇರಿದಂತೆ ಸೇವಾ ಪ್ರತಿನಿಧಿಗಳು ಉಪಸ್ಥಿತಿ ಇದ್ದರು.

Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News