Breaking News

ನ್ಯಾಯವಾದಿ ರವಿಕುಮಾರ್ ಪಟ್ಟದಕಲ್ಲ ಅವರಿಗೆ ಉತ್ತಮ ಕಾನೂನು ಸೇವೆಗಾಗಿ ತಾಲೂಕ ಪ್ರಶಸ್ತಿ ಪ್ರದಾನ

ಹುನಗುಂದ : ಇತ್ತೀಚೆಗೆ ನಡೆದ ರಾಣಿ ಚನ್ನಮ ಜಯಂತೋತ್ಸವ ಹಾಗೂ ಉತ್ತಮ ಕಾನೂನು ಸೇವೆಗಾಗಿ ಕಾರ್ಯಕ್ರಮ ನಗರದ ಶ್ರೀ ಬಸವ ಕಲ್ಯಾಣ ಮಂಟಪದಲ್ಲಿ ತಾಲ್ಲೂಕಿನ ಆಡಳಿತ ಮಂಡಳಿ ವತಿಯಿಂದ ನಡೆಯಿತು. ಈ ಸಂದರ್ಭದಲ್ಲಿ ಅಮೀನಗಡ ನಗರದ ಹಿರಿಯ ನ್ಯಾಯವಾದಿಗಳಾದ ಶ್ರೀ ರವಿಕುಮಾರ್ ಎಸ್ ಪಟ್ಟದಕಲ್ಲ ಇವರಿಗೆ ತಾಲೂಕಿನ ಉತ್ತಮ ಕಾನೂನು ನ್ಯಾಯವಾದಿಗಳು ಎಂದು ಸರಕಾರದ ವತಿಯಿಂದ ಸನ್ಮಾನ ಮಾಡಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಅವಳಿ ತಾಲೂಕಿನ ಹುನಗುಂದ – ಇಲಕಲ್ಲ ದಂಡಾಧಿಕಾರಿಗಳಾದ ಶ್ರೀ ಬಸವರಾಜ್ ನಾಯ್ಕೋಡಿ, ಹಾಗೂ ಬಸವರಾಜ್ ಎಮ್ ಬೆಳವಣಿಕೆ, ಹಾಗೂ ಇಲಕಲ್ಲಿನ ಪ,ಪೂ,ಶ್ರೀ ಡಾ: ಗುರುಮಹಾಂತ ಮಹಾಸ್ವಾಮಿಗಳು ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಮಹಾಂತೇಶ ಆವಾರಿ, ಆರ್,ಬಿ,ಬಾದವಾಡಗಿ,ಡಾ: ಕಡಪಟ್ಟಿ, ಹಾಗೂ ಅನೇಕ ಸಮಾಜದ ಹಿರಿಯ ಪ್ರಮುಖರು ಉಪಸ್ಥಿತಿ ಇದ್ದರು.ಈ ಪ್ರಶಸ್ತಿ ಪಡೆದ ರವಿಕುಮಾರ್ ಅವರಿಗೆ ಅಮೀನಗಡದ ಅನೇಕ ಸಂಘ ಸಂಸ್ಥೆಗಳು ಅಭಿನಂದನೆ ಸಲ್ಲಿಸಿದ್ದಾರೆ.
ಅಮೀನಗಡ ಸಿದ್ದರೋಡ ಸೇವಾ ಸಮಿತಿ ಯಿಂದ ಪ್ರಶಸ್ತಿ ಸಿಕ್ಕ ಕಾರಣ ಅಭಿನಂದಿಸಿದ ಕ್ಷಣ

About vijay_shankar

Check Also

೨೦೨೫ ನೇ ಸಾಲಿನ ರಾಜ್ಯಮಟ್ಟದ “ಸಂಗಮಸಿರಿ” ಪ್ರಶಸ್ತಿಗೆ ‘ಶರಣರು ಹಾಗೂ ವಚನ ಸಾಹಿತ್ಯ’ದ ಪೂರಕ ಕೃತಿಗಳಿಗೆ ಆಹ್ವಾನ

೨೦೨೫ ನೇ ಸಾಲಿನ ರಾಜ್ಯಮಟ್ಟದ “ಸಂಗಮಸಿರಿ” ಪ್ರಶಸ್ತಿಗೆ ‘ಶರಣರು ಹಾಗೂ ವಚನ ಸಾಹಿತ್ಯ’ದ ಪೂರಕ ಕೃತಿಗಳಿಗೆ ಆಹ್ವಾನ

ಹುಬ್ಬಳ್ಳಿ : ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಹಿತಿ ಡಾ. ಸಂಗಮೇಶ ಹಂಡಿಗಿ ಅವರ ಸ್ಮರಣೆಯಲ್ಲಿ ಡಾ. ಸಂಗಮೇಶ ಹಂಡಿಗಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.