
ಧಾರವಾಡ : ರಾಘವೇಂದ್ರಸ್ವಾಮಿಗಳ ೩೫೪ ನೇ ಆರಾಧನಾ ಮಹೋತ್ಸವ ನಿಮಿತ್ತ ಧಾರವಾಡದ ಶ್ರೀನಗರದಲ್ಲಿ ಚಲನಚಿತ್ರ ನಿರ್ಮಾಪಕ ಕಿಶನರಾವ್ ಕುಲಕರ್ಣಿ ಅವರ ನಿವಾಸದಲ್ಲಿ ‘ಸಂಗೀತ ಸುರಭಿ’ ಕಾರ್ಯಕ್ರಮ ಜರುಗಿತು,
ಹುಬ್ಬಳ್ಳಿಯ ಸಾವಿರ ಹಾಡುಗಳ ಸರದಾರ ಡಾ, ಆರ್ ,ಪಿ ,ಕುಲಕರ್ಣಿ ಅವರು ದಾಸಶ್ರೇಷ್ಠರ ಹಾಡುಗಳನ್ನು ಹಾಡಿ ಅದರ ಅರ್ಥವನ್ನು ಸವಿಸ್ತಾರವಾಗಿ ಹೇಳಿದರು. ಮಸ್ಕಿಯ ಆಕಾಶವಾಣಿ ಕಲಾವಿದ ರಾಜೇಂದ್ರ ನಾಯ್ಕ್ ಅವರು ರಾಘವೇಂದ್ರ ಸ್ವಾಮಿಗಳ ಕುರಿತ ಭಕ್ತಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ನಂತರ ಎನ್ ,ಎಸ್,ಪಾಟೀಲ ಅವರು ಚಿತ್ರಗೀತೆಗಳನ್ನು , ಸ್ವಾತಿ ಭಟ್ ಅವರು ಭಾವಗೀತೆಗಳನ್ನು ಹಾಡುವ ಮೂಲಕ ಮನಸೂರೆಗೊಂಡರು

. ಇವರುಗಳಿಗೆ ಗುರುರಾಜ ಮೊಕಾಶಿ ಮತ್ತು ಬದರಿ ಕೊರ್ಲಳ್ಳಿ ಹಾರ್ಮೋನಿಯಂ, ರವೀಂದ್ರ ಪಾಟೀಲ ಮತ್ತು ಅಶೋಕ ನಿಡಗುಂದಿ ತಬಲಾಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ಕು.ಅಂಕಿತಾ ಕುಲಕರ್ಣಿ, ನಟ, ನಿರ್ಮಾಪಕರಾದ ಡಾ ಕಲ್ಮೇಶ್ ಹಾವೇರಿಪೇಟ್ ,ಶ್ರೀಮತಿ ವನಿತಾ ಮತ್ತು ಸುರೇಶರಾವ್ ಕುಲಕರ್ಣಿ , ಶ್ರೀಮತಿ ಮಂಜುಳಾ , ಚಂದ್ರಹಾಸ ಕುಲಕರ್ಣಿ, ಶ್ರೀಮತಿ ಗೀತಾ ಮತ್ತು ರಾಘವೇಂದ್ರರಾವ್ ಕುಲಕರ್ಣಿ ಶ್ರೀಮತಿ ಸುಧಾ ಮತ್ತು ಪ್ರಹ್ಲಾದರಾವ್ ಮಸ್ಕಿ , ಮಧು ಜೋಶಿ , ಸುಜಾತಾ ರವಿ ಭಟ್ , ಕೀರ್ತಿ ಅರವಿಂದ , ರೂಪಾ ಬಿಸರಳ್ಳಿ , ಶ್ರೀಮತಿ ಜಯಲಕ್ಷ್ಮಿ ಮತ್ತು ಚೆನ್ನಬಸವಂತರಾವ್ ಕುಲಕರ್ಣಿ (ಗಾಣದಾಳ), ಶ್ರೀಮತಿ ಶಾಂತಾ ಮತ್ತು ರಾಘವೇಂದ್ರರಾವ್ ಕುಲಕರ್ಣಿ (ರಾಯಚೂರು) , ಪವನ. ವ್ಹಿ ಇಟಗಿ, ಶ್ರೀಮತಿ ಮಾನಸಾ ಮತ್ತು ಹುಲಗಪ್ಪ, ಪ್ರಮೋದ್ ಜೋಶಿ ಮತ್ತು ಕಲಾವಿದರು ಉಪಸ್ಥಿತರಿದ್ದರು.

ದೀಪಕ್ ಪಿ ಮಸ್ಕಿ ,ಆನಂದ ಜೋಶಿ,ರಘು ತುಮಕೂರು, ಸಿದ್ಧಾರ್ಥ್ ಜಾಲಿಹಾಳ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ವಿನಾಯಕ ಬಸವಾ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಕಿರುಚಿತ್ರ ಮತ್ತು ಚಲನಚಿತ್ರ ನಿರ್ಮಾಪಕ ಕಿಶನರಾವ್ ಎಂ ಕುಲಕರ್ಣಿ ಆನೆಹೊಸೂರ ಎಲ್ಲರಿಗೂ ಗೌರವ ಸಮರ್ಪಿಸಿ ಕೃತಜ್ಞತೆ ಅರ್ಪಿಸಿದರು . ಕಿರುಚಿತ್ರ, ಚಲನಚಿತ್ರ ನಿರ್ದೇಶಕ ಅರವಿಂದ ಮುಳಗುಂದ ಕಾರ್ಯಕ್ರಮ ಆಯೋಜನೆ, ನಿರ್ವಹಣೆಯ ಜೊತೆಗೆ ಕೊನೆಯಲ್ಲಿ ವಂದಿಸಿದರು.
**
ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News