
ಉತ್ತರ ಪ್ರದೇಶ: ದ ಕೇಸರಗಂಜ್ ಸಂಸದ ಬ್ರಿಜ ಭೂಷಣ ಶರಣ್ ಸಿಂಗ್ ಇವರು ಒಲಂಪಿಕ್ ನಲ್ಲಿ ಕುಸ್ತಿ ಕ್ರೀಡೆಯಲ್ಲಿ ಪದಕಗಳನ್ನು ಪಡೆದ ಸಾಕ್ಷಿ ಮಲ್ಲಿಕ್, ವಿನೇಶ್ ಫೋಗಾಟ್ ಇವರೊಂದಿಗೆ ಅತ್ಯಾಚಾರವೆಸಗಲು ಇವರ ಗುಪ್ತ ಅಂಗಾಂಗಗಳನ್ನು ಮುಟ್ಟುತ್ತಿದ್ದರೆಂದು ಅಲ್ಲದೇ ಅವರಿಗೆ ಕ್ರೀಡೆಯನ್ನು ಗೆಲ್ಲಲು ಅನುವು ಮಾಡಿಕೊಡುವುದು ಅಂತಾ ಆಮಿಷ ನೀಡುತ್ತಿದ್ದರು.
ಇದನ್ನು ಸಹಿಸದೇ ಈ ಕುಸ್ತಿ ಕ್ರೀಡಾಪಟುಗಳು ತಮಗೆ ಆಗುತ್ತಿರುವ ಅಳಲನ್ನು ಪ್ರಧಾನಿ ನರೇಂದ್ರ.ಮೋದಿ ಇವರಲ್ಲಿ ತೋಡಿಕೊಂಡರೂ ಪ್ರಯೋಜನಯಾಗದಿದ್ದಾಗ ಅವರು ದಿಲ್ಲಿ ಪೊಲೀಸರಿಗೆ ದೂರು ನೀಡಿದ್ದರೂ ಅದಕ್ಕೆ ಕ್ಯಾರೇಯನ್ನದ ದಿಲ್ಲಿ ಪೋಲಿಸ್ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ.
ಪ್ರತಿಭಟನೆಯಲ್ಲಿ ನಗರ ಯೋಜನಾ ಪ್ರಾಧಿಕಾರದ ಮಾಜಿ ಸಭಾಪತಿ ಎ.ಎ.ದಂಡಿಯಾ,
ಇದನ್ನು ಪ್ರತಿಭಟಿಸಿ ಕುಸ್ತಿ ಕ್ರೀಡಾ ಪಟುಗಳು ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿಕೊಂಡಾಗ ಮುಖ್ಯ ನ್ಯಾಯಮೂರ್ತಿಗಳ ಆದೇಶದ ಹಿನ್ನೆಲೆಯಲ್ಲಿ ಪೋಸ್ಕೊ ಕಾಯ್ದೆ
ಅಡಿಯಲ್ಲಿ ಪ್ರಕರಣವನ್ನು ದಾಖಿಸಿಕೊಂಡರೂ ಈ ವರೆಗೆ ಬ್ರಿಜ್ ಭೂಷಣ್ ಬಂಧನ ವಾಗಿರುವುದಿಲ್ಲ.
ಕೆಂದ್ರ ಸರಕಾರ ಈ ಆರೋಪಿಯನ್ನು ಸಂಪೂರ್ಣ ರಕ್ಷಿಸುತ್ತಿದೆ ಅಂತಾ ಪ್ರತಿಭಟನೆ ಮಾಡಲಾಗಿದೆ.

ಇದನ್ನು ಖಂಡಿಸಿ ಇಂದು ಜನತೆಯ ಪರವಾಗಿ ದೇಶದ ರಾಷ್ಟ್ರಾಧ್ಯಕ್ಷ ಆದರಣೀಯ ಶ್ರೀಮತಿ. ದ್ರೌಪದಿ. ಮುರ್ಮು ಇವರಿಗೆ ಮಾನ್ಯ ಜಿಲ್ಲಾಧಿಕಾರಿ,
ಬಾಗಲಕೋಟ ಇವರ ಮುಖಾಂತರ ಮನವಿ ಸಲ್ಲಿಸಿ
ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಅದರಂತೆ ಈ ಮಹಿಳಾ ಕುಸ್ತಿ ಪಟುಗಳ ರಕ್ಷಣೆ ಹಾಗೂ ಮುಂದೆ ಇಂತಹ ಪೈಚಾಸಿಕ ಕೃತ್ಯ ಯಾರೊಂದಿಗೂ ಆಗದಂತೆ ಗೃಹ ಸಚಿವಾಲಯ, ಕ್ರೀಡಾ ಸಚಿವಾಲಯ ಕಟ್ಟು ನಿಟ್ಟಿನ ಕ್ರಮಗಳನ್ನು ಜರುಗಿಸಿ ಕ್ರೀಡಾ ಜಗತ್ತಿಗೆ ರಕ್ಷಣೆ ನೀಡಬೇಕು ಅಂತಾ ಮನವಿಯಲ್ಲಿ ಅರಿಕೆ ಮಾಡಿಕೊಳ್ಳಲಾಗಿದೆ.
ಈ ಪ್ರತಿಭಟನೆಯಲ್ಲಿ ನಗರ ಯೋಜನಾ ಪ್ರಾಧಿಕಾರದ ಮಾಜಿ ಸಭಾಪತಿ ಎ.ಎ.ದಂಡಿಯಾ,
ಡಾ. ವೈ.ಜೈ.ಪಠಾಣ್, ನಿವೃತ ಮುಖ್ಯ ಗರುಗಳಾದ
ಎ ಎಸ್ ಖಾಜಿಬೂದಿಹಾಳ, ಎ ಎಂ ಮಿರಜಕರ, ರಫೀಕ ಹಣಮಸಾಗರ, ಎಸ್ ಎಸ್ ಝೀಂಗಾಡೇ, ಸುನಿಲ್ ಕೋಟಬಾಗಿ, ಜಿಯಾವುಲ್ಲಾ ಗೋವೆ, ಇಲಿಯಾಸ್ ಮದರಖಂಡಿ, ಜಾಫರ್ ಇನಾಮದಾರ, ರಫೀಕ ಕೆರೂರ, ರಿಯಾಜ್ ಜಮಖಂಡಿ,
ಇಸಾಕ ದಂಡಿಯಾ, ಆಯಾಜ್ ಮನಿಯಾರ, ತೊಹಿದ್ ಮನಿಯಾರ, ನವಾಜ ಇನಾಮದಾರ, ಮೆಹೆಬೂಬ ಕಲೈಗಾರ, ಶಾಬಾಜ ಖಾಜಿ,
ಮತ್ತಿತ್ತರರು ಭಾಗವಹಿಸಿದ್ದರು…

ವರದಿ : ಜಾವೇದ್ ಮನಿಯಾರ್
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News