ಧಾರವಾಡದಲ್ಲಿ ಆರೋಗ್ಯ ಇಲಾಖೆ ಎಡವಟ್ಟು ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ. ಕೋವಿಡ್ ನಿಂದ ಸತ್ತ ವ್ಯಕ್ತಿಯ ಆರೋಗ್ಯ ವಿಚಾರಣೆಗೆ ವ್ಯಕ್ತಿಯ ಕುಟುಂಬಸ್ಥರಿಗೆ ಕಾಲ್ ಮಾಡಿ ಆರೋಗ್ಯ ವಿಚಾರಣೆಯನ್ನು ಮಾಡಿದ ಆರೋಗ್ಯ ಇಲಾಖೆ ಸಿಬ್ಬಂದಿ ಮಾತು ಕೇಳಿ ಮನೆಯವರಿಗೆ ಶಾಕ್ ಯಾಗಿದೆ. ಕೋವಿಡ್ ಸೋಂಕಿನಿಂದ ಜುಲೈ 24 ರಂದು ನಿಧನವಾಗಿದ್ದ ವ್ಯಕ್ತಿ, ಅಂದೇ ಅಂತ್ಯಸಂಸ್ಕಾರ ಸಹ ನೆರವೇರಿಸಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಅಂತ್ಯಸಂಸ್ಕಾರ ಮಾಡಿದ ಎರಡು ದಿನದ ಬಳಿಕ ಕಾಲ್ ಮಾಡಿದ ಕಿಮ್ಸ್ ಸಿಬ್ಬಂದಿ,

ಆರೋಗ್ಯವಾಗಿದ್ದಾರೆಯೇ ಎಂದು ಪ್ರಶ್ನೆಯನ್ನ ಮಾಡಿದ್ದಾರೆ. ಇಲ್ಲ ಅವರು ಮೊನ್ನೆಯೇ ನಿಧನವಾಗಿದ್ದಾರೆ ಎಂದು ಹೇಳಿದ ಮನೆ ಸದಸ್ಯರು ಆ ಬಳಿಕವೂ ಕಾಲ್ ಮಾಡಿ ಮತ್ತೆ ಆರೋಗ್ಯದ ಬಗ್ಗೆ ವುಚಾರಣೆಯನ್ನ ಮಾಡಲಾಗಿದೆ.
ಅವರು ನಿಧನವಾಗಿದ್ದಾರೆಂದು ಸ್ಪಷ್ಟಪಡಿಸಿದ ಬಳಿಕ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.
ವ್ಯಕ್ತಿ ನಿಧನರಾದ 9 ದಿನದ ಬಳಿಕ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಎಲ್ಲ ಮುಗಿದು 9 ದಿನವಾದ ಬಳಿಕ ಸೀಲ್‌ಡೌನ್ ಮಾಡಿದ ಸಿಬ್ಬಂದಿಗಳ ವಿರುದ್ಧ ಕುಟುಂಬಸ್ಥರು ಆಕ್ರೋಶವನ್ನ ವ್ಯಕ್ತ ಪಡಿಸುತ್ತಿದ್ದಾರೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News