Breaking News

೭೫ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೇರವೇರಿಸಿದ ಗೃಹರಕ್ಷಕ ಪ್ರಭಾರಿ ಘಟಕಾಧಿಕಾರಿ ಶ್ರೀ ವಾಯ್,ಬಿ,ಭಜಂತ್ರಿ

ಇಲಕಲ್ಲ : ಇಂದು ನಗರದ ಮಹಾಂತೇಶ ಚಿತ್ರಮಂದಿರ ಹತ್ತಿರ ಗೃಹರಕ್ಷಕದಳ ಕಾರ್ಯಾಲಯ ದಲ್ಲಿ ೭೫ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣವನ್ನು ನಗರದ ಪ್ರಭಾರಿ ಘಟಕಾಧಿಕಾರಿಯಾದ ಶ್ರೀ ಯಮನಪ್ಪ ಬೊ ಭಜಂತ್ರಿ ಅವರು  ಜಿಲ್ಲಾ ಸಮಾದಿಷ್ಠರು ಆದ ಶ್ರೀ ಎಚ್,ಬಿ ಚೌದರಿ ಅವರ ಆದೇಶದಂತೆ ಧ್ವಜಾರೋಹಣ  ನೇರವೇರಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಅವರು ನಾವು ಪೋಲಿಸ್ ಇಲಾಖೆಯೊಂದಿಗೆ ಈ ಸಮಾಜದ ರಕ್ಷಣೆಯನ್ನು ಹಗಲು- ರಾತ್ರಿ ತುಂಬಾ ಪ್ರಾಮಾಣಿಕವಾಗಿ ಮಾಡಬೇಕು,ಈ ದೇಶವನ್ನು ನಮ್ಮ ಸೈನಿಕರು ಈ ಕೊರೆಯುವ ಚಳಿಯಲ್ಲಿ ಹಗಲು – ರಾತ್ರಿ ಗಡಿಯನ್ನು ಕಾಯುತ್ತಾರೆ,ಹಾಗೆ ನಾವು ಈ ದೇಶದ ಒಳಗ ಈ ಸಮಾಜದ ಶಾಂತಿ ಸುವ್ಯೆಸ್ಥಯನ್ನು ಕಾಪಾಡಬೇಕು ಇಲ್ಲಿ ಮಾಜಿ ಗೃಹರಕ್ಷಕ ಹಿರಿಯರು ಬಂದಿದ್ದಾರೆ ಅವರ ಸಲಹೆ ಸೂಚನೆ ನಮ್ಮಂತಹ ಯುವಕರ ಮೇಲೆ ಇರಲಿ ಈ ಸಮಾಜದ ಸಮಗ್ರ ಶಾಂತಿ ಪಾಲನೆ ನಮ್ಮ ಗುರಿ ಎಂದರು. ಅಲ್ಲದೆ ಜಿಲ್ಲಾ FDC ಶ್ರೀ ಗೀರಿಶಂಕರ ಅವರು ನನ್ನನ್ನು ಈ ಮಟ್ಟಕ್ಕೆ ಬರಲು ಅವರ ಉತ್ತಮ ಮಾರ್ಗದರ್ಶನವೇ ಕಾರಣ,

ನಮ್ಮ ಸಿಬ್ಬಂದಿ ಈ ಸಮಾಜದ ಶಿಸ್ತಿನ ಸಿಪಾಯಿಯಂತೆ ಕರ್ತವ್ಯ ಪಾಕನೆ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಮಾಜಿ ಗೃಹರಕ್ಷಕದಳ ಸಿಬ್ಬಂದಿ ಹಿರಿಯರಿಗೆ ಸುಪ್ರಸಿದ್ಧ ಕನ್ನಡ ಅನೇಕ ಕಥೆ- ಕಾದಂಬರಿ ಪುಸ್ತಕಗಳನ್ನು ಅವರಿಗೆ ಕೊಟ್ಟು ಗೌರವಿಸಲಾಯಿತು. ಈ ಸರಳ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಿಬ್ಬಂದಿಗಳಾದ ಶ್ರೀ ಪಂಪಣ್ಣ ಪಿನ್ನಾಪತಿ,ಚಂದಪ್ಪ ಕಟಾಪೂರ,ಧರ್ಮಣ್ಣ ಕೆಂದೂಳಿ,ಜಗನಾಥ ಪಿನ್ನಾಪತಿ ,ಹಾಗೂ ಭಾವಿ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತಿ ಇದ್ದರು.

ಮಾಜಿ ಗೃಹರಕ್ಷಕದಳ ಹಿರಿಯರಿಗೆ ಪುಸ್ತಕ ನೀಡಿದ ಕ್ಷೆಣ

About vijay_shankar

Check Also

ಅಮೀನಗಡ ನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘದಿಂದ ಯೋಜನೆಗಳ ಸೌಲಭ್ಯ ವಿತರಣೆ ಕಾರ್ಯಕ್ರಮ

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ವಲಯದಲ್ಲಿ ಶ್ರೀ ಕ್ಷೇತ್ರ ಗ್ರಾಮಭಿರುದ್ಧಿ ಯೋಜನೆಯ ವಿವಿಧ ಸೌಲಭ್ಯಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.