Breaking News

Uncategorized

LPG ಗ್ರಾಹಕರಿಗೆ ಮುಖ್ಯ ಮಾಹಿತಿ: ಬದಲಾಯ್ತು ಸಿಲಿಂಡರ್ ಬುಕ್ಕಿಂಗ್ ಸಂಖ್ಯೆ

ಬೆಂಗಳೂರು: ಭಾರತೀಯ ತೈಲ ನಿಗಮ ದೇಶಾದ್ಯಂತ ಸಿಲಿಂಡರ್ ಬುಕಿಂಗ್ ಗಾಗಿ ಒಂದೇ ಸಂಖ್ಯೆಯ ಸೇವೆಯನ್ನು ಆರಂಭಿಸಿದೆ. ಇಂಡೇನ್ ಅಡುಗೆ ಅನಿಲ ಸಲಿಂಡರ್ ಪಡೆಯಲು ಎಲ್ಪಿಜಿ ಸಿಲಿಂಡರ್ ಬುಕ್ಕಿಂಗ್ ಸಂಖ್ಯೆ 77189 55555 ಆಗಿದ್ದು ಗ್ರಾಹಕರಿಗೆ ದಿನದ 24 ಗಂಟೆ ಸೇವೆ ಲಭ್ಯವಿರುತ್ತದೆ. ಎಲ್ಪಿಜಿ ಬುಕಿಂಗ್ ಅನ್ನು ಒಂದೇ ಸಂಖ್ಯೆಯಲ್ಲಿ ಎಸ್‌ಎಂಎಸ್ ಮತ್ತು ಐವಿಆರ್‌ಎಸ್ ಮೂಲಕ ಮಾಡಬಹುದಾಗಿದೆ. ಇಂಡೇನ್ ಎಲ್ಪಿಜಿ ಸಿಲಿಂಡರ್ ಬುಕ್ ಮಾಡುವ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. …

Read More »

ಒಳಗೆ ಸೇರಿದರೆ ಗುಂಡು ಹಾಡಿಗೆ ಸ್ಟೆಪ್ ಹಾಕಿದ ಧಾರವಾಡದ ಸ್ವಾಮೀಜಿ!

ಧಾರವಾಡ : ಕಾರ್ಯಕ್ರಮಗಳಲ್ಲಿ ಹಾಕುವ ಹಾಡುಗಳಿಗೆ ವೇದಿಕೆ ಮೇಲಿದ್ದ ರಾಜಕಾರಣಿಗಳು, ಅತಿಥಿಗಳು ಹೆಜ್ಜೆ ಹಾಕಿ, ಎಂಜಾಯ್ ಮಾಡಿದ ಹಲವು ಉದಾಹರಣೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಆದರೆ, ಧಾರವಾಡದಲ್ಲಿ ಸ್ವಾಮೀಜಿಯೊಬ್ಬರಿಗೆ ಕೂಡ ಹಾಡಿನ ನಶೆ ಏರಿತ್ತು. ‘ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು’ ಎಂಬ ಪ್ರಸಿದ್ಧ ಹಾಡು ಯಾರಿಗೆ ತಾನೇ ಗೊತ್ತಿಲ್ಲ? ಈ ಹಾಡು ಕೇಳುತ್ತಲೇ ವೇದಿಕೆ ಏರಿ ನಶೆ ಏರಿದವರಿಗಿಂಲೂ ಮಿಗಿಲಾಗಿ ಸಖತ್ ಆಗಿಯೇ ಸ್ಟೆಪ್ ಹಾಕಿದ್ದಾ‌ರೆ ಸ್ವಾಮೀಜಿ! …

Read More »

ಪೆಟ್ರೋಲ್ ಡೀಸೆಲ್ ಮೇಲೆ 5₹ ಸುಂಕ ಎರಿಕೆಗೆ ಸಿದ್ದತೆ

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ₹5ರವರೆಗೆ ಏರಿಕೆ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಕೋವಿಡ್ ವಿರುದ್ಧದ ಹೋರಾಟಕ್ಕೆ ಹಣ ಸಂಗ್ರಹಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಆದರೆ ತೆರಿಗೆ ಏರಿಕೆಯು ತಕ್ಷಣದಿಂದಲೇ ಗ್ರಾಹಕರಿಗೆ ವರ್ಗವಾಗುವುದಿಲ್ಲ ಎಂದು ಮೂಲಗಳು ಹೇಳಿವೆ. ಈಗ ₹5ರಷ್ಟು ಏರಿಕೆಯಾದರೆ ಪ್ರತಿ ಲೀಟರ್ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವು ₹37.98 ಮತ್ತು ಪ್ರತಿ ಲೀಟರ್ ಡೀಸೆಲ್ ಮೇಲಿನ ಅಬಕಾರಿ ಸುಂಕ …

Read More »

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಶ್ರೀ ವ್ಹಿ,ಜಿ,ಗಡೆದ ಅವರಿಗೆ ರಾಜ್ಯ ಪ್ರಶಸ್ತಿ ಪ್ರದಾನ,

ಕಮತಗಿ : ಹುನಗುಂದ ತಾಲೂಕಿನ ಮೂಗನೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ವ್ಹಿ,ಜಿ,ಗಡೆದ ಅವರಿಗೆ ಪ್ರತಿ ವರ್ಷ ಕೊಡಮಾಡುವ ಪ್ರಸಕ್ತ ೨೦೨೦ನೇ ವರ್ಷದ ಅತ್ಯುತ್ತಮ ಮುಖ್ಯ ಕಾರ್ಯನಿರ್ವಾಹಕ ರಾಜ್ಯ ಪ್ರಶಸ್ತಿಯನ್ನು ನೀಡಿ ಇಂದು ಅವರ ಸಂಘದ ಕಾರ್ಯಾಲಯದಲ್ಲಿ ನೀಡಿ ಗೌರವಿಸಲಾಯಿತು. ಕರೋನ ಮುಂಜಾಗ್ರತಾ ಸಲುವಾಗಿ ಸರಳ ಸಮಾರಂಭದ ಮೂಲಕ ಸಂಘದ ಸದಸ್ಯರುಗಳ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ಸರಳ ಸಮಾರಂಭದ ಮೂಲಕ ನೀಡಲಾಯಿತು. …

Read More »

ಶಾಸಕ ಎಂ.ಪಿ. ರೇಣುಕಾಚಾರ್ಯ ಪ್ರೇರಣೆ? ಎರಡನೇ ಬಾರಿ ಅಮಾನತಾದ ಪಿಎಸ್‌ಐ!

ಬೆಂಗಳೂರು,: ಪ್ರವಾಹ ಸಂತ್ರಸ್ತರ ಜೀವದೊಂದಿಗೆ ಚೆಲ್ಲಾಟವಾಡಿದ್ದ, ವಿಲಕ್ಷಣ ವ್ಯಕ್ತಿತ್ವದ ಪೊಲೀಸ್‌ ಸಬ್‌ಇನ್ಸಪೆಕ್ಟರ್ ಮಲ್ಲಣ್ಣ ಯಲಗೋಡ್ ಅವರನ್ನು ಅಮಾನತು ಮಾಡಿ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಮಾಡಿದ್ದಾರೆ. ಕಳೆದ ಆರು ತಿಂಗಳುಗಳಲ್ಲಿ ಮಲ್ಲಣ್ಣ ಯಲಗೋಡ್ ಅಮಾನತಾಗುತ್ತಿರುವುದು ಇದು ಎರಡನೇ ಬಾರಿ. ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್ ಠಾಣೆಯ ಪಿಎಸ್‌ಐ ಮಲ್ಲಣ್ಣ ಯಲಗೋಡ್ ಅವರು ಪ್ರವಾಹದಿಂದ ಮುಳುಗಡೆ ಆಗಿದ್ದ ಕೂಡಲಗಿ ಗ್ರಾಮದ ಸಂತ್ರಸ್ತರ ಜೀವದೊಂದಿಗೆ ಚೆಲ್ಲಾಟವಾಡಿರುವ ಆರೋಪ ಎದುರಿಸುತ್ತಿದ್ದಾರೆ. …

Read More »

ಮತದಾರರಿಗೆ ‘ಮಹತ್ವದ ಮಾಹಿತಿ’ : ಮನೆಯಲ್ಲೇ ಕುಳಿತು ‘ವೋಟರ್ ಐಡಿ’ಗಾಗಿ ‘ಆನ್ ಲೈನ್ ನಲ್ಲಿ’ ಈ ರೀತಿ ಅರ್ಜಿ ಸಲ್ಲಿಸಿ

ಡಿಜಿಟಲ್‌ಡೆಸ್ಕ್‌: ನಾವು ಪ್ರತಿ ಸಾರಿ ಕೂಡ ಮತದಾನ ಮಾಡೋವಾಗ ಚುನಾವಣಾ ಆಯೋಗ ಮತದಾರರ ಪಟ್ಟಿಯಲ್ಲಿ ಹೆಸರು ಇರೋದು ಹಾಗೂ ಕೆಲವು ದಾಖಲಾತಿಗಳನ್ನು ಓಟು ಹಾಕೋವಾಗ ತರೋದಕ್ಕೆ ಹೇಳುತ್ತದೆ, ಅದರಲ್ಲೂ ಅನೇಕ ಸಂದರ್ಭದಲ್ಲಿ ನಮ್ಮಲ್ಲಿ ವೋಟರ್ ಐಡಿ ಕಾರ್ಡ್ ಬೇಕು ಅಲ್ವಾ? ಈ ಸಂದರ್ಭದಲ್ಲಿ, ನೀವು ಇನ್ನೂ ವೋಟರ್ ಐಡಿ ಕಾರ್ಡ್ (ವೋಟರ್ ಐಡಿ) ಮಾಡಿಲ್ಲಎಂದಾದಲ್ಲಿ, ನಂತರ ಅರ್ಜಿ ಸಲ್ಲಿಸಿ. ನಿಮ್ಮ ವೋಟರ್ ಐಡಿ ಪಡೆಯಲು ನೀವು ಎಲ್ಲಿಗೂ ಹೋಗಬೇಕಾಗಿಲ್ಲ. ಮನೆಯಲ್ಲೇ …

Read More »

ಕರ್ನಾಟಕದಲ್ಲಿ ಮುಂದುವರೆಯಲಿದೆ ವರುಣನ ಆರ್ಭಟ: 10 ಜಿಲ್ಲೆಗಳಲ್ಲಿ ಅಕ್ಟೋಬರ್ 24, 25 ರಂದು ಮಳೆ.. ಮಳೆ.. ಮಳೆ..

ಬೆಂಗಳೂರು: ಕರ್ನಾಟಕದಲ್ಲಿ ವರುಣನ ಆರ್ಭಟ ಮುಂದುವರೆಯುವ ಎಲ್ಲಾ ಮುನ್ಸೂಚನೆ ಸಿಕ್ಕಿದೆ. ಇನ್ನೆರಡು ದಿನ ಕರ್ನಾಟಕದ ಹತ್ತು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ಒಟ್ಟು ಹತ್ತು ಜಿಲ್ಲೆಗಳಲ್ಲಿ ನಾಳೆ ಮತ್ತು ನಾಡಿದ್ದು (ಶನಿವಾರ ಮತ್ತು ಭಾನುವಾರ) ಗುಡುಗ, ಮಿಂಚು ಸಹಿತ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಕರ್ನಾಟಕ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ. ಯಾವ ಯಾವ ಜಿಲ್ಲೆಗಳಲ್ಲಿ ಮಳೆ.? …

Read More »

ಬಾಗಲಕೋಟೆ: ಎಂಜಿನಿಯರ್ ನಿವಾಸದ ಮೇಲೆ ಎಸಿಬಿ ದಾಳಿ

ಬಾಗಲಕೋಟೆ: ಇಲ್ಲಿನ ಜಿಲ್ಲಾ ಪಂಚಾಯ್ತಿ ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ವಿಭಾಗದ ಸಹಾಯಕ ಎಂಜಿನಿಯರ್ ಅಶೋಕ್ ತೋಪಲಕಟ್ಟಿ ಅವರ ಮನೆ, ಕಚೇರಿ, ಗ್ಯಾಸ್ ಏಜೆನ್ಸಿ ಮೇಲೆ ಗುರುವಾರ ಮುಂಜಾನೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿ ಪರಿಶೀಲನೆ ಆರಂಭಿಸಿದ್ದಾರೆ. ಬಾಗಲಕೋಟೆಯ ವಿದ್ಯಾಗಿರಿ 8ನೇ ಕ್ರಾಸ್ ನಲ್ಲಿರುವ ಮನೆ, ಸಂಬಂಧಿಕರ ಹೆಸರಿನಲ್ಲಿರುವ ಮಹಾಲಕ್ಷ್ಮಿ ಗ್ಯಾಸ್ ಏಜೆನ್ಸಿ ಹಾಗೂ ಜಿಲ್ಲಾಡಳಿತ ಭವನದಲ್ಲಿರುವ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಬಾಗಲಕೋಟೆ …

Read More »

ಹುತಾತ್ಮ ಪೊಲೀಸ್ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡಿ;ಕುಟುಂಬಗಳಿಗೆ ನೆರವಾಗಿ: ನ್ಯಾ.ಅಸೋಡೆ

ಬಳ್ಳಾರಿ : ಪೊಲೀಸರ ತ್ಯಾಗ, ಸೇವಾ ಮನೋಭಾವ ಶ್ರೇಷ್ಠವಾದುದು. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಕುಟುಂಬ, ಮಕ್ಕಳನ್ನದೇ ಜನರ ಸೇವೆಗಾಗಿ ಕರ್ತವ್ಯ ನಿರ್ವಹಿಸಿದ್ದಾರೆ.ಇಂತಹ ತ್ಯಾಗ ಮನೋಭಾವ, ಸೇವೆ ಎಲ್ಲರಿಂದಲೂ ಸಾಧ್ಯವಿಲ್ಲ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಕೃಷ್ಣ ಬಿ.ಅಸೋಡೆ ಅವರು ಹೇಳಿದರು. ಪೊಲೀಸ್ ಹುತಾತ್ಮರ ದಿನಾಚರಣೆ ನಿಮಿತ್ತ ಬಳ್ಳಾರಿ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಪೊಲೀಸ್ ಡಿಎಆರ್ ಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹುತಾತ್ಮರಾದ ಪೊಲೀಸರಿಗೆ ಪುಷ್ಪಗುಚ್ಛ ಗೌರವ …

Read More »

ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಬಸವರಾಜ ಭಜಂತ್ರಿ ಅವರಿಗೆ ಕೊರಮ ಸಮಾಜದಿಂದ ಸನ್ಮಾನ

ಅಮೀನಗಡ: ಇತ್ತೀಚೆಗೆ ಕೃಷಿ ಇಲಾಖೆಯಲ್ಲಿ ೧೯೮೫ ರಿಂದ ಸಹಾಯಕ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಕಳೆದ ವಾರ ನಿವೃತ್ತಿ ಹೊಂದಿದ ಬಸವರಾಜ್ ಭಜಂತ್ರಿ ಅವರಿಗೆ ಸೊಳೇಭಾವಿ ಗ್ರಾಮದ ಶ್ರೀ ದುರ್ಗಾದೇವಿ ಕೊರಮ ಸಮಾಜದಿಂದ ಅವರ ಸೇವೆಯನ್ನು ಗುರುತಿಸಿ ನಿನ್ನೆಯ ದಿನ ದುರ್ಗಾದೇವಿ ದೇವಲಯದಲ್ಲಿ ಸರಳ ಸಮಾರಂಭದ ಮೂಲಕ ಗೌರವ ಸನ್ಮಾನ ಮಾಡಲಾಯಿತು. ತಮ್ಮ ಸೇವಾ ಅವಧಿಯಲ್ಲಿ ಸಮಾಜದ ಬಲಾಢ್ಯ ಸಂಘಟನೆ ಹಾಗೂ ಸಮಾದ ಅಧ್ಯಕ್ಷರಾಗಿ ಹಾಗೂ ಗೌರವ ಅಧ್ಯಕ್ಷರಾಗಿ ಸಮಾಜದ …

Read More »