ಹುನಗುಂದ : ಇದೇ ಮೊಟ್ಟಮೊದಲ ಬಾರಿಗೆ ಕೂಡಲ ಸಂಗಮದಲ್ಲಿ ಶ್ರಾವಣ ಮಾಸದ ನಿಮಿತ್ತವಾಗಿ ೪೧ ದಿನಗಳ ಕಾಲ ೧೧ನೇ ಬಸವ ಪಂಚಮಿ ಹಾಗೂ ಇಷ್ಟ ಲಿಂಗ ಪೊಜಾ ೨೦೨೦,ಅಂಗವಾಗಿ ಅಗಸ್ಟ್ ೦೩ರಿಂದ ಸೆಪ್ಟೆಂಬರ್ ೧೩ ರ ವರೆಗೆ ೪೨ ದಿನಗಳ ಕಾಲ ನಿರಂತರವಾಗಿ ಇಷ್ಟ ಲಿಂಗ ಪೊಜಾ ವೃತವನ್ನು ತುಂಬಾ ವಿಷೇಶವಾಗಿ ಹಾಗೂ ಅರ್ಥಪೂರ್ಣವಾಗಿ,

ನೆರವೇರಿಸಿದರು ವಿಶ್ವ ವಿಖ್ಯಾತ ಪವಿತ್ರ ಸು ಕ್ಷೇತ್ರದಲ್ಲಿ ಸುಂದರ ತ್ರಿ ಸಂಗಮ ಪವಿತ್ರ ನದಿ ತಟದಲ್ಲಿರುವ ಈ ಕ್ಷೇತ್ರದ ಸನ್ನಿಧಿಯಲ್ಲಿ (Online ) ಅಂತರ್ಜಾಲದ ಮೂಲಕ ಆರ್ಶಿರ್ವಚನ ಸಮಾರೋಪ ಸಮಾರಂಭ ಹಾಗೂ ಸಾಮಾಜಿಕ ನ್ಯಾಯದ ಹರಿಕಾರ ಸರ್ ಸಿದ್ದಪ್ಪ ಕಂಬಳಿಯವರ ಜಯಂತಿಯನ್ನು ಸರಳವಾಗಿ ಆಚರಿಸಿ ರಾಜ್ಯ ಲಿಂಗಾಯತ ಪಂಚಮಸಾಲಿ ಯುವ ಘಟಕದ ಕಾರ್ಯ ಕಾರಿಣಿ ಸಭೆಯನ್ನು ನಡೆಸಲಾಯಿತು, ಸದರಿ ಸಭೆಯು ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಪೂಜ್ಯ ಶ್ರೀ ಬಸವ ಮೃತ್ಯುಂಜಯ ಮಹಾಸ್ವಾಮಿಗಳ ಸಾನಿಧ್ಯ ವಹಿಸಿದ್ದರು.
ಮಾಜಿ ಶಾಸಕರಾದ ಶ್ರೀ ವಿಜಯಾನಂದ ಎಸ್ ಕಾಶಪ್ಪನವರು ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿ ಸಮಾಜದ ಸಂಘಟನೆ ಹಾಗೂ ಒಗ್ಗಟ್ಟಿನ ಮೂಲ ಮಂತ್ರ ಹಾಗೂ ಪಂಚಮಸಾಲಿ ಪೀಠದಿಂದ ಸಮಸ್ತ ಲಿಂಗಾಯತ ಧರ್ಮದ ಸಾರವನ್ನು ಸಾರಿ ಧರ್ಮ ಜಾಗೃತಿ ಹಾಗೂ ಸಮಾಜದ ಬಲ ವರ್ಧನೆ ಕುರಿತು ಮಾತನಾಡಿದರು ರಾಜ್ಯದ ವಿವಿಧ ಭಾಗಗಳಿಂದ ಸಮಾಜದ ಯುವ ಘಟಕದ ಅಧ್ಯಕ್ಷರುಗಳು ಆಗಮಿಸಿದ್ದರು,