Breaking News

ಹುಟ್ಟುಹಬ್ಬಕ್ಕೆ ಶುಭ ಕೋರಿದವರಿಂದ ಪ್ರಧಾನಿ ಮೋದಿ ಕೇಳಿದ ಉಡುಗೊರೆ ಏನು ಗೊತ್ತಾ?

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಸೆಪ್ಟೆಂಬರ್ 17 ರಂದು ತಮ್ಮ 70 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಅವರಿಗೆ ದೇಶದ ಹಾಗೂ ವಿದೇಶಗಳಿಂದ ಗಣ್ಯರು, ಜನರು ಶುಭಾಶಯ ಕೋರಿ ಜಗತ್ತಿನ ಪ್ರಬಲ ನಾಯಕನನ್ನು ಕೊಂಡಾಡಿದ್ದರು.

ಇದೀಗ ಪ್ರಧಾನಿ ಮೋದಿಯವರು ತಮಗೆ ಶುಭಕೋರಿದ ಜನರಲ್ಲಿ ಉಡುಗೊರೆಯೊಂದನ್ನು ಕೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಹಲವರು ನನ್ನ ಬಳಿ ಉಡುಗೊರೆ ಏನು ಬೇಕೆಂದು ಕೇಳಿದ್ದೀರಿ, ಮಾಸ್ಕ್‌ ಧರಿಸುವುದು ಹಾಗೂ ಅಂತರಕಾಯ್ದುಕೊಳ್ಳುವುದನ್ನು ನೀವು ಪಾಲಿಸುವುದೇ ನನಗೆ ನೀವು ನೀಡುವ ಉಡುಗೊರೆ ಎಂದಿದ್ದಾರೆ.

ಗುರುವಾರ ತಡ ರಾತ್ರಿ ಶುಭ ಕೋರಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದ ಪ್ರಧಾನಿ ಮೋದಿ, ‘ಜನ್ಮದಿನದ ಉಡುಗೊರೆಯಾಗಿ ನನಗೆ ಏನು ಬೇಕೆಂದು ಬಹಳಷ್ಟು ಜನ ಕೇಳಿದ್ದೀರಿ.

ಹೀಗಾಗಿ ನನಗೇನು ಬೇಕು ಎಂಬುದನ್ನು ಕೇಳುತ್ತಿದ್ದೇನೆ. 1. ಯಾವಾಗಲೂ ಮಾಸ್ಕ್‌ ಧರಿಸಿರಿ ಹಾಗೂ ಅದನ್ನು ಸರಿಯಾದ ರೀತಿಯಲ್ಲಿ ಧರಿಸಿ.

2. ಒಬ್ಬರಿಗೊಬ್ಬರು ಅಂತರ ಕಾಯ್ದುಕೊಳ್ಳಿ. ದೋ ಗಜ್‌ ಕಿ ದೂರಿ (2 ಗಜಗಳ ಅಂತರ) ನೆನಪಿಟ್ಟುಕೊಳ್ಳಿ. ಜನಸಂದಣೆಯ ಜಾಗಗಳಿಂದ ದೂರವಿರಿ

3. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

4. ನಮ್ಮ ಜಗತ್ತನ್ನು ಆರೋಗ್ಯ ಪೂರ್ಣಗೊಳಿಸೋಣ’ ಎನ್ನುವ ನಾಲ್ಕು ಉಡುಗೊರೆಯನ್ನು ಪ್ರಧಾನಿ ಮೋದಿ ಕೇಳಿದ್ದಾರೆ.

Since many have asked, what is it that I want for my birthday, here is what I seek right now:

Keep wearing a mask and wear it properly.

Follow social distancing. Remember ‘Do Gaj Ki Doori.’

Avoid crowded spaces.

Improve your immunity.

Let us make our planet healthy.

— Narendra Modi (@narendramodi)

About vijay_shankar

Check Also

AICC ಕಾರ್ಯದರ್ಶಿಯಾಗಿ ಡಾ: ಆರತಿ ಕೃಷ್ಣ ಆಯ್ಕೆ

ನವದೆಹಲಿ: ಅನಿವಾಸಿ ಭಾರತೀಯ ನಿಕಟಪೂರ್ವ ಕರ್ನಾಟಕ ಸರ್ಕಾರದ (ಎನ್ಆರ್ಐ ಫೋರಂ) ಉಪಾಧ್ಯಕ್ಷೆಯದ ಡಾಕ್ಟರ್ ಆರತಿಕೃಷ್ಣ ರವರನ್ನು ಅಖಿಲ ಭಾರತ ರಾಷ್ಟ್ರೀಯ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.