
ಬೆಂಗಳೂರು ; ಎಂಥಾ ದುರ್ದೈವದ ವಿಚಾರ ಪ್ರಜೆಗಳೆಂಬ ಪ್ರಭುಗಳೊಂದಿಗೆ ಗೌರವದಿಂದ ನಡೆದುಕೊಳ್ಳಿ ಎಂದು ಸರಕಾರ ನೌಕರರಿಗೆ ಆದೇಶ ಹೊರಡಿಸಿದೆ . ಕಾರ್ಯ ನಿಮಿತ್ತ ಸರಕಾರಿ ಕಚೇರಿಗಳಿಗೆ ಆಗಮಿಸುವ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ. ಬಂದವರೊಂದಿಗೆ ಗೌರವದಿಂದ ಮಾತನಾಡಿ ಅವರಿಗೆ ಕುಳಿತುಕೊಳ್ಳಲು ಕುರ್ಚಿ ನೀಡಬೇಕು ಇದು ಆ ದೇಶದಲ್ಲಿನ ಪ್ರಮುಖ ಅಂಶ .
ಹೌದು ಬಹಳಷ್ಟು ಸರ್ಕಾರಿ ಕಚೇರಿಗಳಲ್ಲಿ ಸಂಬಂಧಪಟ್ಟ ಅವನು ಬಂದವರಿಗೆ ಗೌರವ ಕೊಡುವುದು ದೂರ ಉಳಿಯಿತು ,ತಿರುಗಿಯೂ ನೋಡುವುದಿಲ್ಲ ಎದುರು ಹೋಗಿ ನಿಂತಾಗ ತನ್ನ ಕೆಲಸದಲ್ಲಿ ಮಗ್ನನಾಗಿದ್ದವನ೦ತೆ ತೋರುತ್ತಾನೆ ಸರ್ ಸರ್ ಎಂದು ಕರೆದರೆ ಅವರಿಗೆ ಸಿಟ್ಟು ಬರುತ್ತದೆ .ಆತ ತಿರುಗಿ ನೋಡುವ ವರೆಗೂ ಕಾಯಲೇಬೇಕು ಅದು ಹಲವು ನಿಮಿಷಗಳ ಆಗಬಹುದು ಅಥವಾ ಅರ್ಧ ಗಂಟೆಯೂ ಆಗಬಹುದು .ನಂತರ ಕೊಟ್ಟ ಕಾಗದವನ್ನು ದೊಡ್ಡ ಉಪಕಾರ ಮಾಡುವಂತೆ ನೋಡಿ ಎಂಟೋ ಹತ್ತೋ ಇಪ್ಪತ್ತೋ ದಿವಸ ಬಿಟ್ಟು ಬರುವಂತೆ ಹೇಳುತ್ತಾನೆ.ಇದು ಒಂದೆರಡು ಅಥವಾ 4 ಬಾರಿ ಮರುಕಳಿಸುವ ಸಾಧ್ಯತೆ ಇದೆ . ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಶ್ರೀ ಸಾಮಾನ್ಯನಿಗೆ ಸಿಗುವ ಉಪಚಾರ ಇದೇ ಆಗಿರುತ್ತದೆ .
ಯಾವ ಪುಣ್ಯಾತ್ಮ ಹೋಗಿ ಸರ್ಕಾರಕ್ಕೆ ದೂರು ಸಲ್ಲಿಸಿದ್ದನು ಗೊತ್ತಿಲ್ಲ ಸರ್ಕಾರ ಈಗ ಸಾರ್ವಜನಿಕರೊಂದಿಗೆ ಗೌರವದಿಂದ ನಡೆದುಕೊಳ್ಳಿ ಎಂದು ಆದೇಶ ಹೊರಡಿಸಿದೆ .ಇದರಿಂದ ಎಷ್ಟರಮಟ್ಟಿಗೆ ಪ್ರಯೋಜನ ಆ ದೇವರೇ ಬಲ್ಲ .
ಒಂದಂತೂ ನಿಜ ಕೇವಲ ಆದೇಶ ಮತ್ತು ಸುತ್ತೋಲೆಗಳಿಂದ ಯಾವ ಪ್ರಯೋಜನವೂ ಆಗುವುದಿಲ್ಲ .ಕೆಲಸದ ಸಮಯದಲ್ಲಿ ಅವರು ತಮ್ಮ ತಮ್ಮ ಕುರ್ಚಿಗಳಲ್ಲಿ ಇರುವಂತೆ ಕಟ್ಟುನಿಟ್ಟಾದ ವ್ಯವಸ್ಥೆ ಆಗಬೇಕು.ಶಿಸ್ತು ಕ್ರಮಗಳು ಕಟ್ಟುನಿಟ್ಟಾಗಿ ಜರುಗಬೇಕು.ಅವರವರ ಕೆಲಸಗಳನ್ನು ಕಾಲಮಿತಿಯಲ್ಲಿ ಅವರು ಪೂರೈಸಲೇಬೇಕು ಹೀಗೆ ಬಹಳಷ್ಟು ವಿಚಾರಗಳನ್ನು ಸರ್ಕಾರ ಮತ್ತು ಹಿರಿಯ ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೆ ತಂದಾಗ ಮಾತ್ರ ಇಂತಹ ಆದೇಶಗಳಿಗೆ ಬೆಲೆ ಬರುತ್ತದೆ .ಇಲ್ಲವಾದಲ್ಲಿ ಅದೊಂದು ಕಾಗದ ಮಾತ್ರ !!! ಅದೊಂದು ಕಾಗದ ಮಾತ್ರ !!!!