ಅಮೀನಗಡ:
ಇಂದು ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ಬೀದಿಬದಿ ವ್ಯಾಪಾರಸ್ಥರ ಸಂಘ ದಿಂದ ಕನ್ನಡ ರಾಜ್ಯೋತ್ಸವನ್ನು ಸಂಘದ ಕಾರ್ಯಾಲದಲ್ಲಿ ಸರಳವಾಗಿ ಆಚರಿಸುವ ಮೂಲಕ ಕನ್ನಡ ರಾಜೋತ್ಸವ ದ , ಧ್ವಜಾರೋಹಣವನ್ನು ಪಟ್ಟಣದ ಅಧ್ಯಕ್ಷರಾದ ಶ್ರೀ ದವಲಸಾಬ ಬಾಗೇವಾಡಿ ಧ್ವಜಾರೋಹಣ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ, ಸಿದ್ರಾಮ ತತ್ರಾನಿ ಅವರು ಒಂದು ದಿನ ಅಷ್ಟೇ ಕನ್ನಡ ಎನ್ನುವುದುದಲ್ಲ ಪ್ರತಿಕ್ಷಣ ನಮ್ಮ ಉಸಿರಿನಲ್ಲಿ ಕನ್ನಡ ಅಭಿಮಾನ,ಜಲ,ನೆಲದ ಬಗ್ಗೆ ಅಭಿಮಾನ ಕನ್ನಡ ಭಾಷೆಯ ಮೇಲೆ ಅನೇಕ ಭಾಷೇಗಳು ಬೆರೆತುಕೊಂಡು ಕನ್ನಡ ಮರೆತು ಅವರದೇ ಭಾಷೆಯಲ್ಲಿ ವ್ಯಾಪಾರ ವಹಿವಾಟುಗಳನ್ನು ಮಾಡುತ್ತಾ ಕನ್ನಡ ಪದ ಬೇರೆಯಬೇಕು ಎಂದು ಚಿತ್ರನಟ ಸಿದ್ರಾಮ ತತ್ರಾಣಿ ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ಬೀದಿಬದಿ ವ್ಯಾಪಾರಸ್ಥರ ಸಂಘಟನೆಗಳ ಒಕ್ಕೊಟದ ಅಮೀನಗಡ ಘಟಕದ ಸದಸ್ಯರುಗಳಾದ ಶ್ರೀ ಚಾಂದಬಿ ಜಂಗಿ, ಶ್ರೀ ಬಸಯ್ಯ ನಿರಂಜನ ಮಠ, ಶ್ರೀ ರಾಜ ಬಾಗವಾನ, ಶ್ರೀ ಶಿವಾನಂದ ಪುರತಗೇರಿ, ಶ್ರೀ ನಾಗೇಶ, ಚೌಕಿಮಠ ,ಬಾಪೂಜಿ ಹಾಗೂ ಅನೇಕರು ಉಪಸ್ಥಿತಿ ಇದ್ದರು.