ಬೆವೊರು: ಬಾಗಲಕೋಟೆ ತಾಲೂಕಿನ ಬೆವೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಮಲ್ಲಿಕಾರ್ಜುನ ,ಬಿ,ಘಂಟಿ ಅವರು ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾಯಾಗಿ ಬಂದ ನಂತರ ಸಂಘದಲ್ಲಿ ಭಾರಿ ಪ್ರಮಾಣದ ವ್ಯವಹಾರ ಮಾಡಿದ್ದಾರೆ ಸುಮಾರು ಮೂರುವರಿ ಕೋಟಿ ರೂಪಾಯಿ ಅಧಿಕ ಮೊತ್ತದ ಹಣ ವ್ಯವಹಾರ ನಡೆದಿದೆ ಈ ಬಗ್ಗೆ ನನ್ನ ಬಳಿ ಸೂಕ್ತ ದಾಖಲೆ ಲಭ್ಯ ಇದೆ, ಬೆಳೆ ವಿಮೆ, ಸಾಲಮನ್ನ, ವಿವಿಧ ಸಾಲ ನೀಡುವಲ್ಲಿ ನಕಲಿ ದಾಖಲೆ ಸೃಷ್ಟಿಸಲಾಗಿದೆ ಈ ಬಗ್ಗೆ ನನ್ನ ಬಳಿ ಎಲ್ಲಾ ದಾಖಲೆಗಳು ಲಭ್ಯವಿದ್ದು ಇಲಾಖೆ ಸೂಕ್ತ ತನಿಖೆ ಕೈಗೊಳ್ಳಬೇಕೆಂದು ಪತ್ರಿಕೆ ಮೂಲಕ ನ್ಯಾಯವಾದಿ ವಿರೇಶ ಕಲ್ಲುಗುಡಿ ಆರೋಪಿಸಿರು.
ಇದೇ ವಿಚಾರವಾಗಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಮಲ್ಲಿಕಾರ್ಜುನ ಘಂಟಿ ಅವರನ್ನು ಪ್ರಶ್ನೆ ಮಾಡಿದಾಗ ವಕೀಲರು ಒಬ್ಬ ಸುದ್ದ ಸುಳ್ಳಗಾರ,ತನ್ನ ವೈಯಕ್ತಿಕ ಕೆಲಸ ಮಾಡಿ ಕೊಡದೇ ಇದ್ದಾಗ ಜನರ ಬಳಿ ಈ ತರ ಸುಳ್ಳು ಹೇಳುತ್ತಾ ಊರ ತುಂಬಾ ತಿರುಗುತ್ತಿದ್ದಾರೆ ಸಾಲ ಇದ್ದರೂ ಸಹ,ಕಟಬಾಗಿ ಮೇಲೆ ಕ್ಲಿಯರನ್ಸ್ ಕೇಳಿದ್ದ ನಾ ಅದನ ಕೊಡಲಿಲ್ಲ ಹೀಗಾಗಿ ಅನಾವಶ್ಯಕ ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾನೆ.
ಸಂಘದಲ್ಲಿ ಮೂರುವರಿ ಕೋಟಿ ರೂಪಾಯಿ ಅವ್ಯವಹಾರ ನಡೆದಿದ್ದರೆ ಇಲಾಖೆ ಯಾವುದೇ ವಿಷಯದಲ್ಲಿ ತನಿಖೆ ನಡೆಸಲಿ ನಾನು ಎಲ್ಲದಕ್ಕೊ ಸಹಕಾರ ಕೊಡುತ್ತೇನೆ ರೈತರು ಯಾವುದೇ ಸಂದರ್ಭದಲ್ಲಿ ಬಂದು ಬೇಕಾದ ಮಾಹಿತಿ ಬಗ್ಗೆ ಬಂದು ಕೇಳಿ ,ಪೂರ್ಣ ಮಾಹಿತಿ ಪಡೆಯಲಿ ನಾನು ಇಷ್ಟು ವರ್ಷ ಹಗಲು ರಾತ್ರಿ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮ ಪಟ್ಟು ಸಂಘವನ್ನು ಬೆಳೆಸಿದ್ದೇವೆ ಇಂತಹ ಮೂರ್ಖ ವಕೀಲರ ಮಾತಿಗೆ ನಾನು ಕಿವಿ ಕೋಡಲ್ಲ ತಾನೊಬ್ಬ ನ್ಯಾಯವಾದಿ ತನ್ನ ಬಳಿ ದಾಖಲೆ ಇದ್ದರೆ ,ತಾಕತ್ತಿದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳಲು ಹೋರಾಟ ಮಾಡಲಿ ಅದು ಬಿಟ್ಟು ಸಂಘಕ್ಕೆ ಕೆಟ್ಟ ಹೆಸರು ತರಲು ವಯಕ್ತಿಕ ದ್ವೇಷ ಇಟ್ಟುಕೊಂಡು ನನ್ನ ಹಾಗೂ ಸಂಘದ ಹೆಸರು ಕೆಡೆಸುವ ಪ್ರಯತ್ನ ಮಾಡಿದರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ.
ಹಾಗೆ ನನ್ನನು ಹಾಗೂ ನಮ್ಮ ಸಂಘದ ಮೇಲೆ ಅಧಿಕಾರಿಗಳು ಇದ್ದಾರೆ ಇಲ್ಲಿ ಏನೇ ಅವ್ಯವಹಾರ ನಡೆದರೂ ಸಹ ಇಲಾಖೆ ತನಿಖೆ ಮಾಡಲಿದೆ ದಾಖಲೆ ಇದ್ದರೆ ಅದು ಸಾಭಿತಾದರೆ ನನ್ನ ಮೇಲೆ ಕ್ರಮ ಕೈಗೊಳ್ಳಲಿ ಎಂದರು, ಇವರಿಬ್ಬರ ಈ ಆರೋಪ ಮತ್ತು ಪ್ರತ್ಯಾರೋಪದ ಬಗ್ಗೆ ಇಲಾಖೆ ತನಿಖೆ ಕೈಗೊಂಡು ರೈತರಿಗೆ ಸೂಕ್ತ ನ್ಯಾಯ ಒದಗಿಸಲು ಜನತೆಯ ಆಗ್ರವಾಗಿದೆ.