
ಅಮೀನಗಡ : ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ನಗರದ ಶ್ರೀ ಶಾಂತಾದೇವಿ ಗ್ರಾಮೀಣ ಅಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ವತಿಯಿಂದ ಗಣರಾಜೋತ್ಸವದ ಅಂಗವಾಗಿ ಹೆತ್ತವರ ನೆರಳು ಎಂಬ ಶೀರ್ಷಿಕೆ ಅಡಿಯಲ್ಲಿ ಹೆತ್ತವರ ಮನಸ್ಸು ಗೆದ್ದ ಮಕ್ಕಳ ಸಾಧನೆಯ ಸತ್ಕಾರ ಸಮಾರಂಭವನ್ನು ಗಣಿ ಉದ್ಯಮಿಗಳಾದ ಶ್ರೀ ರಾಚಪ್ಪ ಸರಡಗಿ ಅವರು ಉದ್ಘಾಟನೆ ಮಾಡಿದರು.

ಈ ಸಮಾರಂಭದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಪಾಲಕರಿಗೂ ಅವರ ಮಕ್ಕಳಿಗೂ ಈ ವೇದಿಕೆಯಲ್ಲಿ ಸನ್ಮಾನ ಮಾಡಲಾಯಿತು, ಕೆಲವು ಪಾಲಕರು ತಮ್ಮ ಜೀವನದ ಕಷ್ಟದ ನೈಜ ಸ್ಥಿತಿಯನ್ನು ಹಂಚಿಕೊಂಡರು. ಉದ್ಘಾಟನೆ ಭಾಷಣ ಮಾಡಿದ ಖ್ಯಾತ ಗಣಿ ಉದ್ಯಮಿ ಶ್ರೀ ರಾಚಪ್ಪ ಸರಡಗಿಯವರು ಇದೊಂದು ಅತ್ಯಂತಹ ಭಾವಪೂರ್ಣ ಕಾರ್ಯಕ್ರಮ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಅವರಿಗೊಂದು ವೇದಿಕೆ ಕಲ್ಪಿಸಿಕೊಟ್ಟ ಈ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು. ನಾನು ಬಡವನಾಗಿ ಇವತ್ತು ಬಹಳ ಕಷ್ಟ ಪಟ್ಟು ಕಳೆದ ೨೦ ವರ್ಷಗಳಲ್ಲಿ ಇವತ್ತು ಸಾವಿರಾರು ಕೋಟಿ ರೂಪಾಯಿ ವಹಿವಾಟು ನಮ್ಮ ಮೈನ್ಸ್ ಹೊಂದಿದೆ,ಅಂತಹ ಸಾಧನೆಯನ್ನು ಮಾಡುವ ಸಂಕಲ್ಪ ಮಾಡಬೇಕು.ಇವತ್ತು ಪ್ರಶಂತ ಅವರ ಈ ಕಾರ್ಯಕ್ರಮ ಯಾರಿಗೂ ಅರ್ಥ ಆಗಿಲ್ಲ ಮುಂದೆ ಇದರ ಅರ್ಥ ಎಲ್ಲರಿಗೂ ಆಗುತ್ತೆ ಎಂದರು.

ಈ ಜನೆವರಿ ೨೬ ರ ಗಣರಾಜೋತ್ಸವದ ಅಂಗವಾಗಿ ಮಕ್ಕಳು ಡಾನ್ಸ್ ಮಾಡಿ ದೇಶಾಭಿಮಾನದ ಗೀತೆಗೆ ಟೆಪ್ಸ್ ಹಾಕಿದರು.


ಈ ಸರಳ ಸಮಾರಂಭದಲ್ಲಿ ಈ ಕಾರ್ಯಕ್ರಮ ದ ದಿವ್ಯಸಾನಿಧ್ಯವನ್ಬು ಪ,ಪೂ,ಶ್ರೀ ವಿರತೀಶಾ ನಂದ ಮಹಾಸ್ವಾಮಿಗಳು ವಹಿಸಿಕೊಂಡಿ ದ್ದರು.ಮುಖ್ಯಾಥಿತಿಗಳಾಗಿ ಶ್ರೀ ತುಕಾರಾಮ ಲಮಾಣಿ,ಶ್ರೀ ಶ್ರೀಕಾಂತ,ಜಾಧವ,ಶ್ರೀ ಶಂಕರಗೌಡ ಗೌಡರ,ಶ್ರೀ ಅಮರೇಶ ಮಡ್ಡಿಕಟ್ಟಿ,ಶ್ರೀ ಡಾ: ಪ್ರಮೋದ ಮಠಪತಿ,ಶ್ರೀ ರಾಮು ನಾಯಕ,ಶ್ರೀಮತಿ ಶಂಕ್ರಮ್ಮ ಬೆನ್ನೂರ, ಶ್ರೀಮತಿ ಡಾ: ಕಾವ್ಯ ಪಿ ನಾಯಕ,ಹಾಗೂ ಶ್ರೀ ಡಿ,ಬಿ,ವಿಜಯ ಶಂಕರ,ವಹಿಸಿಕೊಂಡಿದ್ದರು. ಕಾರ್ಯಕ್ರಮ ನಿರೂಪನೆಯನ್ನು ಡಾ: ಪ್ರಶಾಂತ ವಾಯ್ ನಾಯಕ ಅವರು ನಡೆಸಿಕೊಟ್ಟರು.