

ಶಾಂತಿ ಪಾಲನೆ ಸಭೆ ಉದ್ದೇಶಿಸಿ ಹುನಗುಂದ CPI ಶ್ರೀ ಗುರುಕಾಂತ ದಾಶ್ಯಾಳ ಸುಧೀರ್ಘ ಮಾಹಿತಿ ನೀಡಿದರು

ಅಮೀನಗಡ :
ನಗರದ ಪೊಲೀಸ್ ಠಾಣೆಯಲ್ಲಿ ಇಂದು ಗೌರಿ ಗಣೇಶ ಹಬ್ಬದ ನಿಮಿತ್ತವಾಗಿ ಶಾಂತಿ ಪಾಲನಾ ಸಭೆ ನಡೆಯಿತು. ಠಾಣಾ ವ್ಯಾಕ್ತಿಗೆ ಒಳಪಟ್ಟ ೪೧ ಹಳ್ಳಿಗಳಿಂದ ವಿವಿಧ ಗಜಾನನ ಸಂಘಟಕರು ಹಾಗೂ ನಗರದ ಗಣ್ಯರು ಈ ಶಾಂತಿ ಪಾಲನಾ ಸಭೆಯಲ್ಲಿ ಭಾವಹಿಸಿ ಗಜಾನನ ಮೂರ್ತಿ ಪ್ರತಿಷ್ಟಾಪನೆ ಉದ್ದೇಶ ಹಾಗೂ ಈ ಸಂದರ್ಭದಲ್ಲಿ ಅನು ಸರಿಸಬೇಕಾದ ಸರಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಠಾಣಾ ಅಧಿಕಾರಿ PSI ಶಿವಾನಂದ ಅವರು ಸಭೆ ಉದ್ದೇಶಿಸಿ ಮಾತನಾಡಿದರು.

PSIಶ್ರೀ ಶಿವಾನಂದ ಸಿಂಗಣ್ಣನವರ ಅಮೀನಗಡ
ಶ್ರೀ ನಾಗೇಶ ಗಂಜಿಹಾಳ ಭಾರತೀಯ ಜನತಾ ಪಾರ್ಟಿಯ ಯುವ ಮುಖಂಡರು ಸೂಳೇಭಾವಿ
ಸೂಳೇಭಾವಿ ಗ್ರಾಮದ ಗ್ರಾಂ,ಪ,ಸದಸ್ಯ ಜಗದೇಶ ರಗಟಿ ಮಾತನಾಡಿ ಅಮೀನಗಡ ಹಾಗೂ ಸೂಳೇಭಾವಿ ಅವಳಿಗ್ರಾಮಗಳು ಭಾವೈಕ್ಯತೆ ಹೆಸರಾಗಿವೆ ನಮ್ಮಲ್ಲಿ ಹಿಂದೂ ಮುಸ್ಲಿಂ ಎಲ್ಲರೂ ಸೌಹಾರ್ಧತೆಯಿಂದ ಗಣಪ ಕುಡಿಸುತ್ತೇವೆ ,ಹಿರಿಯರ ಮಾರ್ಗದಲ್ಲಿ ಎಲ್ಲರೂ ಜಾಗರೂಕತೆಯಿಂದ ಹಬ್ಬ ಆಚರಿಸಬೇಕೆಂದು ಸಭೆ ಉದ್ದೇಶಿಸಿ ಮಾತನಾಡಿದರು .
ನಂತರ ಮಾತನಾಡಿದ SDMC ಅಧ್ಯಕ್ಷ ದೇವರಾಜ್ ಕಮತಗಿ, ಶ್ರೀ ಯಮನೂರ ಕತ್ತಿ, ಹಾಲುಮತ ಸಮಾಜದ ಮುಖಂಡರು, ಶ್ರೀ ಅಮರೇಶ ಮಡ್ಡಿಕಟ್ಟಿ ರಾಜ್ಯ KPCC ಹಿ,ವ, ಪ್ರದಾನ ಕಾರ್ಯದರ್ಶಿ, ನಾಗೇಶ ಗಂಜಿಹಾಳ BJP ಯುವ ಮುಖಂಡರು, ಎಲ್ಲರೂ ಗಣೇಶ ಪ್ರತಿಷ್ಠಾನೆ ಹಾಗೂ ಶಾಂತಿಯಿಂದ ಗಣೇಶ ವಿಸರ್ಜನೆ ಬಗ್ಗೆ ಮಾರ್ಗದರ್ಶನ ನೀಡಿದರು. ನಂತರ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀ ಗುರುಕಾಂತ ದಾಶ್ಯಾಳ ಅವರು ಸುಧೀರ್ಘವಾಗಿ ಮಾದರಿ ಗಣಪತಿ ಹೇಗೆ ಇಡಬೇಕು ಹೇಗೆ ವಿಸರ್ಜನೆ ಮಾಡಬೇಕು ಈ ಹಬ್ಬದ ಸಂದರ್ಭದಲ್ಲಿ ಆಗಬಹುದಾದ ಅನಾವುತಗಳ ಬಗ್ಗೆ ಹೇಗೆ ಜಾಗೃತಿ ವಹಿಸಬೇಕು ಸರಕಾರದ ನಿಯಮಗಳನ್ನು ಯಾಕೆ ಕಡ್ಡಾಯವಾಗಿ ಒಅಲಿಸಬೇಕು ಎಂಬ ಅನೇಕ ವಿಚಾರಗಳನ್ನು ಸುಧೀರ್ಘವಗಿ ಮಾತನಾಡಿದರು. ಈ ಸರಳ ಶಾಂತ ಪಾಲನಾ ಸಭೆಯಲ್ಲಿ ಹಿರಿಯರಾದ ಶ್ರೀ ಬಸವಂತಪ್ಪ ನಿಡಗುಂದಿ, ಶ್ರೀ ತುಕಾರಾಮ ಪವಾರ್ ಪಟ್ಟಣ ,ಪಂ, ಸದಸ್ಯರು, ಶ್ರೀ ಹುಸೇನಫೀರಾ ಖಾದ್ರಿ, ಮಾಜಿ ತಾ,ಪಂ, ಅಧ್ಯಕ್ಷರು, ಮಾಂತಯ್ಯ ಹಿರೇಮಠ ಗ್ರಾಂ,ಪ,ಸದಸ್ಯರು, ಶ್ರೀ ಡಿ,ಎಚ್ ಬಾಗೇವಾಡಿ ,ಪಟ್ಟಣ ಪಂ, ಸದಸ್ಯರು, ಹಾಗೂ ಅಮೀನಗಡ ನಗರದ ಅನೇಕ ಪ್ರಮುಖರು ಹಾಗೂ ಗಜಾನನ ಸಂಘದ ಅನೇಕ ಯುವಕರು ಈ ಗಜಾನನ ಶಾಂತಿ ಪಾಲನ ಸಭೆಯಲ್ಲಿ ಉಪಸ್ಥಿತರಿದ್ದರು.
