
ಬೀಳಗಿ : ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ, ನಾಗರಾಳ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿನ ಕೋಂತಿಕಲ್ ಗ್ರಾಮಗಳಲ್ಲಿ ಮಹಾತ್ಮ ಗಾಂಧೀಜಿಯವರ ಜಯಂತ್ಯೋತ್ಸವದ ಅಂಗವಾಗಿ ಗ್ರಾಮದ ಪ್ರಮುಖ ಸ್ಥಳದಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಪ್ರಮುಖರು ಸೇರಿ ಆಯಾ ಕಟ್ಟಿನ ಸ್ಥಳಗಳನ್ನು ಸ್ವಚ್ಛಗೊಳಿಸುವ ಸ್ವಚ್ವ ಮಾಡಲಾಯಿತು. ಈ ಸರಳ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯರು/ ಸಮಾಜ ಸೇವಕರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಶ್ರೀ ರಾಜೇಂದ್ರ ದೇಶಪಾಂಡೆ ಅವರು ಮಹಾತ್ಮ ಗಾಂಧೀಜಿ ನಮಗೆ ಬರಿ ಸ್ವತಂತ್ರ ತಂದು ಕೊಡಲಿಲ್ಲ ಅವರು ಶಾಂತಿ ಮತ್ತು ಅಹಿಂಸೆಯ ಜೊತೆಗೆ ಪ್ರತಿ ಗ್ರಾಮಗಳು ಸ್ವಚ್ಚತೆಯಿಂದ ಕುಡಿರಬೇಕು ಎಂದರು.
ಸನ್ನಾನ್ಯ ಶ್ರೀ ರಾಜೇಂದ್ರ ಎಸ್ ದೇಶಾಂಡೆ ಗ್ರಾಮ ಪಂಚಾಯತಿ ಸದಸ್ಯರು ನಾಗರಾಳ

ಮಹಾತ್ಮಗಾಂಧೀಜಿ ಅವರ ಈ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಮ್ಮ ಸ್ನೇಹಿತರ ಸಲಹೆ ಮೇರೆಗೆ ನಾನು ಇದರಲ್ಲಿ ಪಾಲ್ಗೊಂಡಿದ್ದು ಖುಷಿ ತಂದಿದೆ ಎಂದರು
ಈ ಕಾರ್ಯಕ್ರಮಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ನಿಂಗವ್ವ ಚಂದ್ರಶೇಖರ ಹೊಸಮನಿ, ಉಪಾಧ್ಯಕ್ಷರಾದ ಶ್ರೀಮತಿ ದೊಡ್ಡವ್ವ ಪ್ರಭು ಚಲವಾದಿ, ಹಾಗೂ ನಾಗರಾಳ ಗ್ರಾಮದ ಕಾಂಗ್ರೆಸ್ ಪಕ್ಷದ. ಹಿರಿಯರು ಮುಖಂಡರು ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರಾದ ಸನ್ಮಾನ್ಯ ಶ್ರೀ ರಾಜೇಂದ್ರ ಎಸ್ ದೇಶಪಾಂಡೆಯವರು ಭಾಗ ವಹಿಸಿದ್ದರು. ಗ್ರಾಮ ಪಂಚಾಯಿತಿಯ ಕೆಲವು ಸದಸ್ಯರು ಸೇರಿದಂತೆ ಸಿಬ್ಬಂದಿ ಹಾಗೂ ಸಮಾಜ ಸೇವಕರು ಪತ್ರಕರ್ತರು ಆದ ಕೃಷ್ಣಾ ಮೋಹರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
