
ಅಮೀನಗಡ : ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲ್ಲೂಕಿನ ಗುಡೂರುsc ಗ್ರಾಮದ ಆರಾಧ್ಯದೈವ ಶ್ರೀ ಹುಲ್ಲೇಶ್ವರ ದೇವಸ್ಥಾನ ಗ್ರಾಮದ ಪ್ರಮುಖ ದೇವಸ್ಥಾನ, ಪ್ರತಿ ವರ್ಷ ಬಹಳ ವಿಶೇಷವಾಗಿ ಇಲ್ಲಿ ಜಾತ್ರೆ ಪ್ರಸಿದ್ದಿ ಪಡೆದಿದೆ.

ಗ್ರಾಮದ ಮಾಜಿ,ಜಿಲ್ಲಾ ಪಂಚಾಯತ ಸದಸ್ಯರಾದ ಮಲ್ಲಣ್ಣ ಹುಲಗೇರಿ ಈ ದೇವಸ್ಥಾನದ ಮುಖ್ಯಸ್ಥರಾಗಿ ಇಲ್ಲಿನ ಅಭಿವೃದ್ಧಿ ಹಾಗೂ ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದರು. ಕಳೆದ ೯ ವರ್ಷಗಳಿಂದ ಈಗ ಹುನಗುಂದ ತಾಲೂಕಿನ ಅಮೀನಗಡ ಕಂದಾಯ ಇಲಾಖೆ ಉಪ ತಹಶಿಲ್ದಾರರ ಶ್ರೀ ಎಮ್,ಆರ್,ಹೆಬ್ಬಳ್ಳಿ ಅವರು ಈಗ ಈ ದೇವಸ್ಥಾನದ ಆಡಳಿತ ಅಧಿಕಾರಿಯಾಗಿ ಕೂಡ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕಾರಣ : ಸಾಮಾಜಿಕ ಹೋರಾಟಗಾರ್ತಿ ಶ್ರೀಯುತ ಸಹನಾ ಅಂಗಡಿ ಅವರು ಈ ದೇವಸ್ಥಾನದ ಆಡಳಿತ ಮಾಡುತ್ತಿರುವ ಮಲ್ಲಣ್ಣ ಹುಲಗೇರಿ ಅವರು ಸಾಕಷ್ಟು ಭ್ರಷ್ಟಾಚಾರ ಮಾಡಿದ್ದಾರೆ,ದೇವಸ್ಥಾನದ ಸಾರ್ವಜನಿಕ ದೇಣಿಗೆ ಹಣ ದುರುಪಯೋಗ ಆಗಿದೆ ಇದು ನಿಲ್ಲಬೇಕು, ಗ್ರಾಮದ ಪ್ರಮುಖರು ಹೊಸ ಕಮಿಟಿ ರಚನೆ ಮಾಡಿ ದೇವಸ್ಥಾನದ ಅಭಿವೃದ್ಧಿ ಮಾಡಬೇಕೆಂದು ಅಹೋರಾತ್ರಿ ಉಪವಾಸ ಸತ್ಯಾಗ್ರಹವನ್ನು ಮಾಡಿದ್ದಳು. ಇದರ ಪರಿಣಾಮವಾಗಿ ಸರಕಾರ ಮಧ್ಯಸ್ಥಿಕೆ ವಹಿಸಿ ಆಡಳಿತ ಅಧಿಕಾರಿ ನೇಮಕ ಮಾಡಿತ್ತು.. ನಂತರ ಈ ಪ್ರಕರಣ ಈಗ ನ್ಯಾಯಾಲಯ ಮೆಟ್ಟಿಲ್ಲು ಏರಿದೆ.

ಆಗ ಮಲ್ಲಣ್ಣ ಹುಲಗೇರಿ ಅವರ ಭ್ರಷ್ಟಾಚಾರ ಪ್ರಶ್ನೆ ಮಾಡಿದ ಗ್ರಾಮದ ಅನೇಕರು ನಿಜವಾದ ಆಡಳಿತ ಬಯಸುವವರು ಈಗ ದೇವಸ್ಥಾನದ ಅಭಿವೃದ್ಧಿ ಹಾಗೂ ಒಳಗಡೆ ಏನ್ ನಡಿತಾ ಇದೆ ಎಂಬುದನ್ನು ಯಾರು ಪ್ರಶ್ನೆ ಮಾಡಿಲ್ಲ ಯಾಕೆ ?
ಈ ದೇವಸ್ಥಾನದ ಸುಫರ್ಧಿಯಲ್ಲಿ ೫ ಕಮರ್ಷಿಯಲ್ ಕಾಂಪ್ಲೆಕ್ಸ್ ಹಾಗೂ ೬ ಭೂ ಬಾಡಿಗೆ ಪ್ರತಿ ವರ್ಷಕ್ಕೆ ೪ ಕಾಂಪ್ಲೆಕ್ಸ್ ೩೭೦೦೦ ಸಾವಿರ ,ಹಾಗೂ ಒಂದು ೧ ಕಾಂಪ್ಲೆಕ್ಸ್ ೮೦,೦೦೦ ಸಾವಿರ ದಂತೆ ಪ್ರತಿ ವರ್ಷ ಬಾಡಿಗೆ ಪಡೆಯಲಾಗುತ್ತಿದೆ. ಇದು ಪ್ರತಿ __೫ ವರ್ಷಕ್ಕೊಮ್ಮೆ ಟೆಂಡರ್ ಕರೆಯಬೇಕು ಆದರೆ ಕಳೆದ ೧೦ ವರ್ಷಗಳಿಂದ ಟೆಂಡರ್ ಕರೆದೇ ಇಲ್ಲ ,! ಇದಕಿಂತ ಪೂರ್ವದಲ್ಲಿ ಮೊದಲು ಯಾರು ಇವುಗಳನ್ನು ಬಾಡಿಗೆ ಪಡೆದಿದ್ದರೋ ಇವರಿಗೂ ಅವರೇ ಮುಂದು ವರಿಸಿದ್ದಾರೆ.
ಅಧಿಕಾರಿಗಳೂ ಕೂಡ ಇಲ್ಲಿ ಶಾಮಿಲಾದ್ರಾ ? ಕಳೆದ ೯ ವರ್ಷಗಳಿಂದ ದೇವಸ್ಥಾನದ ಬಹಿರಂಗ ಲೆಕ್ಕಪತ್ರ ನಡೆದಿಲ್ಲ, ಇಲ್ಲಿಯ ವರೆಗೂ ಇದಕ್ಕೆ ಒಂದು ತಾತ್ಕಾಲಿಕ ಸಲಹಾ ಸಮಿತಿ ರಚನೆ ಮಾಡಿಲ್ಲ, ಕೆಲವು ಪ್ರಮುಖರನ್ನು ಒಳ ಹಾಕಿಕೊಂಡು ಟೆಂಡರ್ ಪ್ರತಿ ವರ್ಷ ಮುಂದೂಡತ್ತಾ ಬರಲಾಗುತ್ತಿದೆ.

ಇದಕ್ಕೆ ಕಾರಣ ಏನೂ ಸ್ವಾಮಿ ? ಈ ಬಗ್ಗೆ ಆಡಳಿತ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದಾಗ ಈ ಬರುವ ೨೦೨೫ ರ ಮಾರ್ಚ್ ತಿಂಗಳಲ್ಲಿ ಟೆಂಡರ್ ಕರೆಯುತ್ತೇವೆಂದು ಉತ್ತರ ನೀಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಪ್ರಕ್ರಿಯೆಯ ನಡೆಯುತ್ತದೆ, ಅಂತ ಕಾದು ನೋಡಬೇಕು.
ಈ ದೇವಸ್ಥಾನದ ಒಟ್ಟು ಭೂಮಿ ಎಷ್ಟು ಎಕರೆ ? ಗ್ರಾಮದ ಈ ದೇವಸ್ಥಾನದ ಚಾಕರಿ ಮಾಡುವವರು ಎಷ್ಟು ಜಾತಿ ಜನಾಂಗ ಇವಾಗ ಸೇವೆ ಮಾಡುತ್ತಿದ್ದಾರೆ. ಕೆಲವು ಪ್ರಭಾವಿಗಳು ಈ ದೇವಸ್ಥಾನದ ಭೂಮಿಯನ್ನು ಅಕ್ರಮ ನೊಂದಣಿ ಮಾಡಿಕೊಂಡಿದ್ದಾರೆ,ಎಂಬ ಆರೋಪಗಳು ಕೇಳಿ ಬಂದಿದ್ದು ಈ ನಿಟ್ಟಿನಲ್ಲಿ ಸೂಕ್ತ ತನಿಖೆಯನ್ನು ನಡೆಸಬೇಕಾಗಿದೆ.

ಚಾಕರಿ ಮಾಡಲು ಭೂಮಿ ಪಡೆದ ಕೆಲವರು ಈಗಾಗಲೇ ಭೂಮಿ ಮಾರಿಕೊಂಡು ಕೆಲವರು ಗ್ರಾಮ ತೋರೆದರೆ ಇನ್ನೂ ಕೆಲವರು ಸರಿಯಾಗಿ ಚಾಕರಿನೂ ಮಾಡತಾ ಇಲ್ಲ ಇತ್ತಿಚ್ಚಿನ ಭೂ ಕಾಯ್ದೆ ಪ್ರಕಾರ ಆ ಭಗವಂತನೆ ಭೂಮಿಯ ಆಸ್ತಿ ಮಾಲಿಕ, ಚಾಕರಿ ಮಾಡುವವರು ಭೂಮಿ ಉಳುಮೆ ಮಾಡಿ ಲಾಭ ಪಡೆಯಬಹುದು, ಅಷ್ಟೆ ಆದರೆ ಯಾರಿಗೂ ಭೂಮಿ ಮಾರಾಟ ಮಾಡುವಂತಿಲ್ಲ ಎಂಬ ನೂತನ ಕಾನೂನು ಕೇಂದ್ರ ಸರಕಾರ ಜಾರಿ ಮಾಡಿದೆ.
ಆದರೆ ವಿಪರ್ಯಾಸವೆಂದರೆ ೨೦೧೩-೨೦೧೪ ರಲ್ಲಿ ಈ ದೇವಸ್ಥಾನದ ವಿಚಾರವಾಗಿ ಗಲಾಟೆ ಆದಾಗ ಆಡಳಿತ ಅಧಿಕಾರಿ ನೇಮಕ ಮಾಡಿದ ನಂತರ ಗ್ರಾಮಸ್ಥರು ಇದರ ಜೊತೆಗೆ ಒಂದು ಕಮಿಟಿ ಕೂಡ ರಚನೆ ಮಾಡಿದ್ದರು.. ಈಗ ಈ ದೇವಸ್ಥಾನದ ಅಧ್ಯಕ್ಷ ಶ್ರೀ ನಾಗರಾಜ್ ಕಂಚೇರ, ಉಪಾಧ್ಯಕ್ಷ ಫಕೀರಪ್ಪ ತೋಟ್ಲಪ್ಪನವರ. ಒಳಗೊಂಡು ೧೫ ಜನ ಕಮಿಟಿ ರಚನೆ ಮಾಡಲಾಗಿತ್ತು.

ಇದರಲ್ಲಿ ಈಗ ೩ ಜನ ಮರಣ ಹೊಂದಿದ್ದಾರೆ. ಈ ೧೦ ವರ್ಷ ಆಡಳಿತ ಮಾಡಿದ ಅಧ್ಯಕ್ಷ ನಾಗರಾಜ್ ಅವರಿಗೆ ಈ ದೇವಸ್ಥಾನದ ಸುತ್ತಳತೆ ಹಾಗೂ ಈ ದೇವಸ್ಥಾನದ ಒಟ್ಟು ಚಾಕರಿ ಭೂಮಿ ಇದರ ಯಾವ ಮಾಹಿತಿಯು ಗೊತ್ತಿಲ್ಲ , ಹೀಗಾದರೆ ಇವರು ಅಧ್ಯಕ್ಷರಾಗಿ ಇರಲೂ ಲಾಯಕಿಲ್ಲ. ಇರ್ಲಿ ನಮಗೆ ಬಂದ ಮಾಹಿತಿ ಪ್ರಕಾರ ಈ ದೇವಸ್ಥಾನದ ಸುತ್ತಳತೆ ೪೫೦ ಮೀಟರ್ ಸುತ್ತಳತೆ ಹೊಂದಿದೆ ,ಹಾಗೂ ದೇವಸ್ಥಾನದ ಮುಂದೆ ೬೦೦ ಮೀಟರ ಉದ್ದ ವಿಶಾಲ ಜಾಗವನ್ನು ಹೊಂದಿ ಸುಮಾರು ೧೨೦ ಎಕರೆ ಚಾಕರಿ ಭೂಮಿ ಈ ದೇವಸ್ಥಾನದಿಂದ ಕಸಬುದಾರರಿಗೆ ಹಂಚಿಕೆಯಾಗಿದೆ , ಇದರಲ್ಲೂ ಕೂಡ ಕೆಲವರು ದೇವಸ್ಥಾನದ ಭೂಮಿಯನ್ನು ಅಕ್ರಮವಾಗಿ ನೊಂದು ಮಾಡಿಕೊಂಡಿದ್ದಾರೆ. ಎಂಬ ಆರೋಪಗಳು ಜೋರಾಗಿ ಕೇಳಿ ಬರುತ್ತಿವೆ ಈ ವಿಚಾರವಾಗಿ ಈಗಾಗಲೇ ತನಿಖೆ ನಡೆಯುತ್ತಿದೆ. ವಾಸ್ತವಿಕ ಸತ್ಯ ಆದಷ್ಟು ಬೇಗ ಹೋರ ಬರಲಿ.
ನೂತನ ಇಲಕಲ್ಲ ತಾಲೂಕು ಆದರೂ ಸಹ ಈ ದೇವಸ್ಥಾನದ ಆಡಳಿತ ಹುನಗುಂದ ತಾಲೂಕಿನ ಅಮೀನಗಡ ಉಪ ತಹಶಿಲ್ದಾರರು ಆಡಳಿತ ನಡೆಸುತ್ತಿದ್ದಾರೆ. ಈ ದೇವಸ್ಥಾನದ ಸಾಮಾಜಿಕ ಹಿತ ಚಿಂತಕರು ಮುಂದಿನ ಪೀಳಿಗೆಗೆ ಇದರ ಆಸ್ತಿ ಹಾಗೂ ಹಣ ಪೊಲಾಗದಂತೆ ಉತ್ತಮ ಆಡಳಿತ ನೀಡುವ ಸಾಮಾಜಿಕ ಕಳಕಳೆ ಉಳ್ಳ ಚಿಂತಕರು ಹಾಗೂ ಸಮಾನ ಮನಸ್ಕರರು ಸೇರಿ ಅಧಿಕೃತ ಈ ದೇವಸ್ಥಾನದ ಆಸ್ತಿ ಹಾಗೂ ದೇವಸ್ಥಾನದ ಒಟ್ಟು ವಿಸ್ತೀರ್ಣ, ಒಟ್ಟು ಚಾಕರಿ ಭೂಮಿ ಎಷ್ಟು ಎಂಬುದನ್ನು ದಾಖಲು ಮಾಡಿ ಸಾರ್ವಜನಿಕ ಧಾರ್ಮಿಕ ಉತ್ಸವಕ್ಕೆ ಶಾಂತಿಯ ತೋಟವಾಗಿ ದೇವಸ್ಥಾನ ಬೆಳೆಯಲಿ ಎಂಬುದು ನಮ್ಮ ಪತ್ರಿಕೆಯ ಉದ್ದೇಶವಾಗಿದೆ.

ಈಗಾಗಲೇ ರಾಜ್ಯದಲ್ಲಿ ಒತ್ತಿ ಉರಿಯುತ್ತಿರುವ ವಕ್ತ್ ಮಂಡಳಿ ಅಕ್ರಮ ಆಸ್ತಿ ಕಬಳಿಕೆಗೆ ಈ ದೇವಸ್ಥಾನ ಅವರ ಕೈ ವಶ ಆಗದಿರಲಿ, ಎಷ್ಹೊ ಮಠ ಮಂದಿರಳನ್ನು ಈ ವಕ್ತ್ ಮಂಡಳಿ ನುಂಗಿ ಹಾಕಿದೆ ರಾಜ್ಯದಲ್ಲಿ ಇದರ ಹೋರಾಟ ಈಗ ಜೋರಾಗಿದೆ ಮುಂದೆ ಇಂತಹ ಸ್ಥಿತಿ ಈ ದೇವಸ್ಥಾನಕ್ಕೆ ಬಾರದಿರಲಿ, ಈ ದೇವಸ್ಥಾನದ ಆಡಳಿತ ಮಂಡಳಿ ಕಣ್ಮಚ್ವಿ ಕುಳಿತ್ತಿದ್ದಾರೆ. ಗ್ರಾಮಸ್ಥರು ಇನ್ನಾದರೂ ಈ ವಿಚಾರದಲ್ಲಿ ಪ್ರಶ್ನೆ ಮಾಡಲು ಮುಂದಾಗಬೇಕು ಆಗ ಮಾತ್ರ ಉತ್ತಮ ಅಭಿವೃದ್ಧಿ ಹಾಗೂ ಸ್ವಚ್ಚ ಆಡಳಿತ ಪಡೆಯಲು ಸಾಧ್ಯ. ಹಾಗೆ ಈ ದೇವಸ್ಥಾನದ ಒಟ್ಟಾರೆ ಅಧಿಕೃತ ಆಸ್ತಿ ಘೋಷಣೆ ಆಗಲಿ. ಹಾಗೂ ಅಧಿಕೃತ ಮೊತ್ತ ,ಠೇವಣಿ, ಬಹಿರಂಗ ಸಾರ್ವಜನಿಕ ಸಭೆ ಮೂಲಕ ಅಧಿಕಾರಿಗಳು ಸ್ಪಷ್ಟ ಪಡಿಸಬೇಕು, ಹಾಗೆ ಉತ್ತಮ ಆಡಳಿತ ನೀಡಲು ನಮ್ಮ BB News Web Channal ಬಯಸುತ್ತದೆ.
ವರದಿ: ಅನಾಮಿಕ /