ಚಾಲುಕ್ಯರ ನಾಡು ಬಾದಾಮಿ ನಗರದ ಶ್ರೀಮತಿ ಭಾರತಿ ಎನ್ ಕಾಚಟ್ಟಿ ಇವರಿಂದ ಗೌರಿ ಹಬ್ಬದ ಸಂಭ್ರಮ
vijay_shankar November 30, 2023ನಮ್ಮೂರ ಸುದ್ದಿComments Off on ಚಾಲುಕ್ಯರ ನಾಡು ಬಾದಾಮಿ ನಗರದ ಶ್ರೀಮತಿ ಭಾರತಿ ಎನ್ ಕಾಚಟ್ಟಿ ಇವರಿಂದ ಗೌರಿ ಹಬ್ಬದ ಸಂಭ್ರಮ185 Views
ಚಾಲುಕ್ಯರ ನಾಡಲ್ಲಿ ಗೌರಿ ಹುಣ್ಣಿಮೆ ಸಂಭ್ರಮ ಜೊರಾಗಿತ್ತು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ಆನಂದ ನಗರದ ಶ್ರೀ ಗಣೇಶ ಮಂದಿರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗೌರಿ ಹುಣ್ಣುಮೆ ನಿಮಿತ್ತವಾಗಿ ಕಾಲೊಣಿಯ ಎಲ್ಲಾ ಮಹಿಳೆಯರು ಸೇರಿ ನಮ್ಮ ಹಿಂದೂ ಭಾರತದ ಕಲೆ, ಹಾಗೂ ಜಾನಪದ ಪರಂಪರೆಯ ಘತಕಾಲದ ಸಂಸ್ಕ್ರತಿಯನ್ನು ಜನಪದ ಸೊಗಡನ್ನು ಇಲ್ಲಿ ನೈಜವಾಗಿ ಕಾಣಬಹುದು, ಹೌದು ಸ್ನೇಹಿತರೆ ಆನಂದ ನಗರದ ಶ್ರೀಮತಿ ಭಾರತಿ ಎನ್ ಕಾಚಟ್ಟಿ, ಹಾಗೂ ಶ್ರೀಮತಿ ಬಸಮ್ಮ ಕಾರುಡಗಿಮಠ ಇವರ ನೇತೃತ್ವದಲ್ಲಿ ಗೌರಿ ಹುಣ್ಣುಮೆ ದಿನ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಆನಂದ ನಗರದ ಮಹಿಳೆಯರು ವಿವಿಧ ಬಣ್ಣಗಳ ಸಕ್ಕರೆ ಗೊಂಬೆಗಳನ್ನು ತಂದು ಸಾಮೂಹಿಕವಾಗಿ ಗೌರಿಪದ ಹಾಡುಗಳನ್ನು ಹಾಡಿ ಆರತಿ ಬೆಳಗುತ್ತಾ ಸಂಭ್ರಮ ಆಚರಿಸಿದರು.
ಗೆ ಬಗೆಯ ತಿಂಡಿ, ತಿನಿಸುಗಳನ್ನು ಮಾಡಿ ಗೌರಿಗೆ ನೈವೇದ್ಯ ಮಾಡಿ ಹುಣ್ಣಿಮೆಯ ಬೆಳದಿಂಗಳಲ್ಲಿ ನಮ್ಮ ಜಾನಪದ ಗೀತಿಗಳನ್ನು ಹಾಡಿ ಗ್ರಾಮೀಣ ಸೊಗಡು ಹೆಚ್ಚಿಸಿದರು. ಈ ಗೌರಿ ಹುಣ್ಣುಮೆಯ ಬೆಳದಿಂಗಳಲ್ಲಿ ಆನಂದ ನಗರದ ಮಹಿಳೆಯರು ವಿವಿಧ ಬಗೆಯ ಹಬ್ಬದೂಟ ಮಾಡಿ ಸಂಭ್ರಮದಿಂದ ಹಳೆಯ ಗೌರಿಪದ ಹಾಡಿದ ಮಹಿಳೆಯರಿಗೆ ಆರತಿ ತಟ್ಟೆ, ಹಾಗೂ ಸಕ್ಕರೆ ಗೊಂಬೆಗಳನ್ನು ಬಹುಮಾನ ರೂಪದಲ್ಲಿ ನೀಡಿ ಗೌರವಿಸಿದರು. ಈ ಗೌರಿ ಹುಣ್ಣುಮೆ ಸಂಭ್ರಮದಲ್ಲಿ ಆನಂದ ನಗರದ ಶ್ರೀಮತಿ ಶರಣಮ್ಮ ಪಟ್ಟಣಶೆಟ್ಟಿ, ಶ್ರೀಮತಿ ವಿಜಯಲಕ್ಷ್ಮಿ ಬಡ್ಡಿ, ಶ್ರೀಮತಿ ಸುವರ್ಣ ಚೌಕಿಮಠ, ಶ್ರೀಮತಿ ರೆವಡಿ, ಶ್ರೀಮತಿ ಕಸ್ತೂರಿ ಕಾಚಟ್ಟಿ, ಶ್ರೀಮತಿ ಲೀಲಾವತಿ ಪಟ್ಟಣಶೆಟ್ಟಿ, ಅನೇಕ ಮಹಿಳೆಯರು ಭಾಗವಹಿಸಿದ್ದರು.ಈ ಕಾರ್ಯಕ್ರಮವನ್ನು ಶ್ರೀಮತಿ ಭಾರತಿ ಹಿರೇಮಠ ನಡೆಸಿ ಕೊಟ್ಟರು.