ಹುನಗುಂದ ತಾಲೂಕಿನ ಧನ್ನೂರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ನಿನ್ನೆಯ ದಿನ ಎಮ್ಮಟ್ಟಿ ಗ್ರಾಮದ ಸಿದ್ರಾಮಪ್ಪ ಗೌಡರ ( ದೇಸಾಯಿ) ಆಯ್ಕೆಯಾದರು. ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ನೂತನ ಗ್ರಾಮ ಪಂಚಾಯತಿ ಅಧ್ಯಕ್ಷ ಸಿದ್ರಾಮಪ್ಪ ದೇಸಾಯಿ.
ಧನ್ನೂರ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರ ಗ್ರಾಮ ಪಂಚಾಯತಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ನಿನ್ನೆಯ ದಿನ ಎಮ್ಮಟ್ಟಿ ಗ್ರಾಮದ ಸಿದ್ರಾಮಪ್ಪ ಗೌಡರ ( ದೇಸಾಯಿ) ಇವರು ಕಾಂಗ್ರೆಸ್ ಭದ್ರಕೋಟೆಯನ್ನು ಛಿಧ್ರಗೋಳಿಸಿ ೪೮ ವರ್ಷಗಳಿಂದ ಕಾಂಗ್ರೆಸ್ ಮುಷ್ಠಿಯಲ್ಲಿದ್ದ ಧನ್ನೂರ ಗ್ರಾಮ ಪಂಚಾಯತಿ ಇತಿಹಾಸದಲ್ಲಿ ಯಾರೂ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಗಳು ಅಧ್ಯಕ್ಷರಾಗಿದ್ದಿಲ್ಲ ನಿನ್ನೆಯ ಈ ಐತಿಹಾಸಿಕ ಗೆಲವನ್ನು ಬಿಜೆಪಿ ಸಾಧಿಸಿದೆ, ಈ ಪಕ್ಷದ ದಿಮಂತ ನಾಯಕರಾದ ಶ್ರೀ ಸಿದ್ರಾಮಪ್ಪ ದೇಸಾಯಿ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ನಮ್ಮ BB News ಜೊತೆಗೆ ಮಾತನಾಡಿದ ಅವರು ಈ ದೀಪಾವಳಿ ಹಬ್ಬದ ಮುಂದೆ ನನಗೆ ಅಧಿಕಾರ ಕೊಟ್ಟ ನನ್ನೂರಿನ ಸಮಸ್ತ ಹಿರಿಯರಿಗೆ ಹಾಗೂ ಈ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಐದು ಹಳ್ಳಿಯ ಗುರು – ಹಿರಿಯರಿಗೆ ನಮ್ಮ ಪಕ್ಷದ ಎಲ್ಲಾ ಗೌರವಾನ್ವಿತ ಮುಖಂಡರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ .ಹಾಗೆ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರುತ್ತೇನೆ. ಈ ಐದು ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ತಾವೆಲ್ಲರೂ ಸಹಕಾರ ನೀಡಬೇಕು ಎಂದರು . ಮತ್ತು ಜನಪ್ರಿಯ ಶಾಸಕರಾದ ಸನ್ಮಾನ್ಯ ದೊಡ್ಡನಗೌಡ ಜಿ ಪಾಟೀಲ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಹಾಗೆ ಈ ನೂತನ ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟನೆ ಮಾಡಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.