
ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ಸಣ್ಣ ಸಮಾಜ ಇಷ್ಟೊಂದು ಅದ್ದೂರಿಯಾಗಿ ದೇವಿ ಪುರಾಣ ಪ್ರವಚನ ಮಾಡುತ್ತಿರುವುದು ಬಹಳ ಸಂತೋಷವಾಗಿ,ತಾವು ಈ ಧಾರ್ಮಿಕ ಕಾರ್ಯಗಳನ್ನು ಮಾಡುತ್ತ ಎಲ್ಲರಿಗೂ ಮಾದರಿ ಆಗಬೇಕು,ಒಗ್ಗಟ್ಟಿನಿಂದ ಸಮಾಜವನ್ನು ಬಲಪಡಿಸಬೇಕು,
ಇದರೊಂದಿಗೆ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು,ನಾನು ಬಡತನದಲ್ಲಿ ಬೆಳೆದು ನಮ್ಮ ಮನೆಯಲ್ಲಿ ೬ ಜನ ಇಂಜಿನಿಯರ್, ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನಾವು ಆರ್ಥಿಕವಾಗಿ ಬೆಳೆತ್ತಾ ನಮ್ಮ ಸಮಾಜವನ್ನು ಬಲಾಢ್ಯಾ ಮಾಡಬೇಕು,ನಿರಂತರ ೨೨ ವರ್ಷ ಈ ಧಾರ್ಮಿಕ ಪ್ರವಚನದ ಮಾರ್ಗದರ್ಶನ ನೀಡಿದ ಸಮಾಜದ ಎಲ್ಲಾ ಹಿರಿಯರಿಗೆ ನಾನು ಅಭಿನಂದಿಸುತ್ತೇನೆ,ಎಂದರು,ಮುಖ್ಯ ಸ್ಥಾನ ವಹಿಸಿ ನಂತರ ಮಾತನಾಡಿದ ಶ್ರೀ ನಾಗೇಶ ಎನ್ ಗಂಜಿಹಾಳ ಅವರು ಈ ಧಾರ್ಮಿಕ ಪ್ರವಚನವನ್ನು ಬಹಳ ಸಂತೋಷ & ಸಡಗರದಿಂದ ಮಾಡುತ್ತಿರುವುದು ನೋಡಿ ನನಗೂ ಖುಷಿ ಆಗಿದೆ,ಇದೊಂದು ಅಣ್ಣ ಸಮಾಜದ ಕಾರ್ಯ ಶ್ಲಾಘನೀಯ, ಇದರಿಂದ ಸಮಾಜದಲ್ಲಿ ಉತ್ತಮ ಸಂಸ್ಕಾರ ಹಾಗೂ ಜೀವನದ ಸತ್ಯದ ಮಾರ್ಗ ಅರ್ಥವಾಗುತ್ತದೆ,ಮಕ್ಕಳಿಗೆ ಹಾಗೂ ಇಂದಿನ ಯುವ ಪಿಳಿಗೆಗೆ ಧಾರ್ಮಿಕ ಭಾವಣೆಯ ಅವಶ್ಯಕತೆ ಇದೆ, ಇದರೊಂದಿಗೆ ಇನ್ನೂ ಮಕ್ಕಳಿಗೆ ಹೆಚ್ಚು ಹೆಚ್ಚು ಶಿಕ್ಷಣದ ಅರಿವು ಮೂಡಿಸಿ ಎಂದರು.ಈ ಧಾರ್ಮಿಕ ಪ್ರವಚನ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಶ್ರೀ ಯಮನಪ್ಪ ಫಕೀರಪ್ಪ ಭಜಂತ್ರಿ, ಮುಖ್ಯ ಅಥಿತಿ ಗಳಾಗಿ ಶ್ರೀಮತಿ ಸರೋಜಾ ಕೆ,ವಡ್ಡರ , ಶ್ರೀ ಸಂತೋಷ ಐಹೊಳ್ಳಿ,ಶ್ರೀ ವಾಯ್,ಬಿ,ಭಜಂತ್ರಿ, ಶ್ರೀ ಜಗದೇಶ ಪಾಟೀಲ, ಶ್ರೀ ಗ್ಯಾನಪ್ಪ ಗೋನಾಳ ಶ್ರೀ ಹನಮಂತ ಸರಗಂಟಿ (ಮಾಗಿ) ಶ್ರೀ ಹನಮಂತ ಹಿರೇಮನಿ,ಶ್ರೀ ಭೋಜಪ್ಪ ಭಜಂತ್ರಿ, ರೊಮಣ್ಣ ದೊ ಭಜಂತ್ರಿ, ರಾಮಣ್ಣ ಮೆಲ್ದಿ,ಶ್ರೀ ಡಿ,ಬಿ,ವಿಜಯಶಂಕರ್, ಪ್ರಾಸ್ತಾವಿಕ ನುಡಿ ಹೇಳಿದರು,ಶ್ರೀ T,B,ಭಜಂತ್ರಿ ಹಾಗೂ ಎಚ್,ಎಚ್, ಭಜಂತ್ರಿ ಅವರು ಕಾರ್ಯಕ್ರಮ ನಿರೂಪನೆ ಮಾಡಿದರು.


