
ಹೈದರಾಬದ್ : .29 ರಿಂದ ಅಕ್ಟೋಬರ್ 2 ರವರೆಗೆ ನವದೆಹಲಿಯ ಕೊಲ್ಕೋತ್ತಾ ಸ್ಟೇಡಿಯಂನಲ್ಲಿ ನಡೆದ 6 ನೇ ಅಖಿಲ ಭಾರತ ಅಂಡರ್ವಾಟರ್ ಫಿನ್ಸ್ ಈಜು ಫೆಡರೇಶನ್ ಕಪ್‌ನಲ್ಲಿ ಸುಧೀಕ್ಷಾ ಕೃಷ್ಣಾ , ವೈಯಕ್ತಿಕ ಮತ್ತು ರಿಲೇ ಸೇರಿದಂತೆ 7 ಪದಕಗಳನ್ನು ಪಡೆದುಕೊಂಡಿದ್ದಾರೆ. ಅವರು ಖಜನ್ ಸಿಂಗ್ ಸ್ವಿಮ್ಮಿಂಗ್ ಕ್ಲಬ್, ಹೈದರಾಬಾದ್ ~ 1) ಶ್ರೀ ವಿಜಯ್ ಸಿಂಗ್ ಅಡಿಯಲ್ಲಿ ತರಬೇತಿ ಪಡೆದಿದ್ದರು.
1)ವೈಯಕ್ತಿಕ ಸ್ಪರ್ಧೆಯಲ್ಲಿ ಪಡೆದ ಪದಕಗಳು
a)2-ಬೆಳ್ಳಿ
i)200 Mts. ಬೈ-ಫಿನ್ಸ್ – 2 ನೇ ಸ್ಥಾನ
ii)400 Mts. ಬೈ-ಫಿನ್ಸ್ – 2 ನೇ ಸ್ಥಾನ
b)2-ಕಂಚಿನ
i)50 Mts. – ಮೊನೊಫಿನ್ಸ್ – 3 ನೇ ಸ್ಥಾನ
ii)100 Mts. – ಮೊನೊಫಿನ್ಸ್ – 3 ನೇ ಸ್ಥಾನ
ಸಿ) 4 ನೇ ಸ್ಥಾನ
i) 100 Mts. – ದ್ವಿ-ಫಿನ್ಸ್
2)ರಿಲೇ:
a)3-ಚಿನ್ನ
i)4×100 Mts. – ದ್ವಿ-ಫಿನ್ಸ್ – ಮಿಶ್ರ ರಿಲೇ
ii)4×50 Mts. – ದ್ವಿ ಫಿನ್ಸ್ – ಮಿಶ್ರ ರಿಲೇ
iii)4×50 Mts. – ಬಹು ಮಿಶ್ರಿತ ರಿಲೇ
ಕುಮಾರಿ ಸುದೀಕ್ಷಾ ಕೃಷ್ಣಾ ಅವರು ಈ ರೀತಿಯಲ್ಲಿ ಅನೇಕ ಸಾಧನೆ ಮಾಡಿ ವಲಯ ಮಟ್ಟದಿಂದ ರಾಜ್ಯ ಮಟ್ಟದ ವರೆಗೆ ಸಾಧನೆ ಮಾಡಿದ್ದು ನಮ್ಮ ಕನ್ನಡದ ಹುಡುಗಿ ಸುಧೀಕ್ಷಾ ಎಂದರೆ ತಪ್ಪಾಗಲಾರದು. ನಮ್ಮ ಸುದ್ದಿ ವಾಹಿನಿಯೊಂದಿಗೆ ಮಾಹಿತಿ ಹಂಚಿಕೊಂಡ ಸುಧೀಕ್ಷಾ ಕೃಷ್ಣ ಇದು ನನ್ನ ಪ್ರಯಾಣದ ಆರಂಭವಷ್ಟೇ, ಮತ್ತು ಮುಂದಿನ ಮಹತ್ವದ ಹೆಜ್ಜೆಗೆ ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ ಎಂದಳು

, ಮುಂಬರುವ 6ನೇ ಏಷ್ಯನ್ ಜೂನಿಯರ್ ಫಿನ್ಸ್ ಈಜು ಸ್ಪರ್ಧೆ 2023ರಲ್ಲಿ ನಾನು ಭಾರತವನ್ನು ಪ್ರತಿನಿಧಿಸಲಿದ್ದೇನೆ. ನವೆಂಬರ್ 24 ರಿಂದ ನವೆಂಬರ್ 28 ರವರೆಗೆ ಥಾಯ್ಲೆಂಡ್‌ನ ಫುಕೆಟ್‌ನಲ್ಲಿ ಆರಂಭಗೊಳ್ಳುತ್ತದೆ
ಈ ಹಂತದ ಹಾದಿಯು ಸುಲಭವಲ್ಲ, ಲೆಕ್ಕವಿಲ್ಲದಷ್ಟು ಸವಾಲುಗಳು ಮತ್ತು ಅಡೆತಡೆಗಳಿಂದ ತುಂಬಿದೆ. ಆದಾಗ್ಯೂ, ನನ್ನ ಸಮರ್ಪಿತ ತರಬೇತಿದಾರರಾದ, ನನ್ನ ಸ್ಪೂರ್ತಿದಾಯಕ ಶಿಕ್ಷಕರು ಮತ್ತು ನನ್ನ ಪ್ರೀತಿಯ ತಂದೆ/ತಾಯಿ/ ಅಜ್ಜ/ ನನ್ನ ಕುಟುಂಬದ ಅಚಲ ಬೆಂಬಲವಿಲ್ಲದೆ ಇವು ಯಾವುದೂ ಸಾಧ್ಯವಾಗುತ್ತಿರಲಿಲ್ಲ ಎಂಬುದನ್ನು ನಾನು ಒಪ್ಪಿಕೊಳ್ಳಲೇಬೇಕು.
ಅವರ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ನನ್ನ ಸಾಮರ್ಥ್ಯದ ಮೇಲಿನ ನಂಬಿಕೆ ನನ್ನ ಹಿಂದಿನ ಪ್ರೇರಕ ಶಕ್ತಿಯಾಗಿದೆ ಶ್ರೇಷ್ಠತೆಯ ಪಟ್ಟುಬಿಡದ ಅನ್ವೇಷಣೆ. ಹೆಚ್ಚಿನ ಸಾಧನೆಗಳಿಗಾಗಿ ಮತ್ತು ನನ್ನ ಕನಸುಗಳನ್ನು ತಲುಪಲು ನಾನು ಶ್ರಮಿಸುವುದನ್ನು ಮುಂದುವರಿಸಿದಾಗ, ಅವರ ಬೆಂಬಲವು ನನ್ನಲ್ಲಿ ತುಂಬಿದ ಆಳವಾದ ಕೃತಜ್ಞತೆ ಮತ್ತು ನಿರ್ಣಯವನ್ನು ನಾನು ನನ್ನೊಂದಿಗೆ ಒಯ್ಯುತ್ತೇನೆ.

ಮುಂದಿನ ತಿಂಗಳು ನಡೆಯವ ಅಂತರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆ ನವೆಂಬರ್ 24 ರಿಂದ ನವೆಂಬರ್ 28 ರವರೆಗೆ ಥಾಯ್ಲೆಂಡ್‌ನ ಫುಕೆಟ್‌ನಲ್ಲಿ ಆರಂಭಗೊಳ್ಳುತ್ತದೆ ,ಇದಕ್ಕಾಗಿ ನಾನು ಭಾರತದಿಂದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೇನೆ, ನನ್ನ ಗೆಲುವಿಗಾಗಿ ಸದಾ ನನಗೆ ಪ್ರೋತ್ಸಾಹ ನೀಡಿ ಬೆಂಬಲಿಸಿದ ತಮ್ಮೆಲ್ಲರಿಗೂ ಕೃತಜ್ಞತೆಗಳು ಎಂದು ಸುಧೀಕ್ಷಾ ಹೇಳಿದಳು. ನವಂಬರ್ 24 ರಿಂದ 28ರ ವರೆಗೆ ಥಾಯ್ಲೆಂಡ್ನಲ್ಲಿ ನಡೆಯುವ ಈ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಜಯ ಗಳಿಸಿ ಭಾರತದ ಕೀರ್ತಿಯನ್ನು ತರಲು ಕುಟುಂಬದ ತಂದೆ ಕೃಷ್ಣಾ, ತಾಯಿ ಜ್ಯೋತಿ, ಅಜ್ಜ ನಾಗಪ್ಪ ಕುರಿ, ಹಾಗೂ ಕುರಿ ಬಂದುಗಳು ಅಭಿನಂದನೆ ಸಲ್ಲಿಸಿದರು.

ಮೂಲತಹ ನಮ್ಮ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದ ನಿವೃತ್ತ ಪೊಲೀಸ್ ಅಧಿಕಾರಿ ಶ್ರೀ ನಾಗಪ್ಪ ಕುರಿ ಅವರ ಮೊಮ್ಮಗಳು ಕುಮಾರಿ ಸುಧೀಕ್ಷಾ ಕೃಷ್ಣಾ ಅವರು ಕಳೆದ ೩೦ ವರ್ಷಗಳಿಂದ ಹೈದ್ರಾಬಾದ್ ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ನೆಲೆಸಿದ್ದಾರೆ. ನಮ್ಮ ಕನ್ನಡದ ಕರ್ನಾಟಕದ ಹುಡುಗಿ ಈ ಸಾಧನೆ ಮಾಡುತ್ತಿದ್ದು ಸೂಳೇಭಾವಿ ಗ್ರಾಮಕ್ಕೆ ಸಂದ ಗೌರವ ಈ ವಿಚಾರವಾಗಿ ಗ್ರಾಮದ ಮಾಜಿ ಶಾಸಕರು ಜಿಲ್ಲಾ ಕಾಂಗ್ರೆಸ್ ಪಕ್ಷದ ಅದ್ಯಕ್ಷರಾದ ಶ್ರೀ ಎಸ್, ಜಿ, ನಂಜಯ್ಯನಮಠ , ಹಾಗೂ ಸಹಕಾರಿ ಧುರೀಣ / ಮಾಜಿ KHDC ನಿ, ಅಧ್ಯಕ್ಷಕರಾದ ಶ್ರೀ ಆರ್, ಪಿ,ಕಲಬುರ್ಗಿ ಗ್ರಾಂ,ಪ, ಅಧ್ಯಕ್ಷರಾದ ಶ್ರೀ ಪಿಡ್ಡಪ್ಪ ಕುರಿ ಮಾಜಿ, ಗ್ರಾಂ,ಪ, ಅಧ್ಯಕ್ಷರಾದ ಶ್ರೀ ಮಹಾಂತಪ್ಪ ಭದ್ರಣ್ಣನವರ, ಜಿಲ್ಲಾ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಡಿ,ಬಿ,ವಿಜಯಶಂಕರ್ ಹಾಗೂ ಸೂಳೇಭಾವಿ ಸರ್ವ ಗ್ರಾಮ,ಪಂ, ಸದಸ್ಯರು ಕುಮಾರಿ ಸುಧೀಕ್ಷಾ ಕೃಷ್ಣಾ ಅವರಿಗೆ ಭಾರತದ ಕೀರ್ತಿ ವಿಶ್ವ ಮಟ್ಟದಲ್ಲಿ ಬೆಳಗಲು ಶುಭ ಕೋರಿದರು.