ನವನಗರದಲ್ಲಿ ಭೋವಿ ಜನಾಂಗದ ಗುರು ಕುಟೀರವನ್ನು ಹಾಗೂ ಶ್ರೀ ಶರಣಬಸವ ಸ್ವಾಮಿಗಳ ಗದ್ದುಗೆ ಶಿಲಾನ್ಯಾಸ ಭೋವಿ ಸಮಾಜದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ಸಿದ್ದರಾಮೇಶ್ವ ಮಹಾ ಸ್ವಾಮಿಗಳು ನೇರ ನಿಷ್ಠುರ ವಚನಕಾರರು, ಅವರು ನೀಡಿದ ಅನೇಕ ಸಂದೇಶಗಳು ಈ ಸಮಾಜದ ಪ್ರತಿಯೊಬ್ಬರು ಶರಣರ ತತ್ವ ಸಿದ್ದಾಂತಗಳನ್ನು ನಾವು ಅಳವಡಿಸಿಕೊಳ್ಳಬೇಕು, ಶರಣರು ದಯವೇ ಧರ್ಮದ ಮೂಲವಯ್ಯ ಎಂದು ಸಾರಿದರು. ಮನುಷ್ಯರಿಗಾಗಿ ಧರ್ಮ, ಧರ್ಮಕ್ಕಾಗಿ ಮನುಷ್ಯರಲ್ಲ ಎಂದು ನಾವೆಲ್ಲರೂ ಅರ್ಥ ಮಾಡಿಕೊಂಡು ಶರಣರ ಚಿಂತನೆಗಳನ್ನು ಅಳವಡಿಸಿಕೊಂಡು ಸೌಹಾರ್ದತೆಯಿಂದ ಬಾಳಬೇಕು ಎಂದರು.
ನಾನು ಯಾವತ್ತು ನಿಮ್ಮ ಸಮಾಜದ ಜೊತೆಗೆ ಇದ್ದೇನೆ, ನಿಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇನೆ, ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಕಳೆದ ಅವಧಿಯಲ್ಲಿ ಭೋವಿ ಅಭಿವೃದ್ಧಿ ನಿಗಮ ಸ್ಥಾಪಿಸಿದರು, ಈ ಭಾರಿ ಭೋವಿ ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು, KPSC ಸದಸ್ಯನಾಗಿ ಸಮಾಜದ ವ್ಯಕ್ತಿಯನ್ನು ಆಯ್ಕೆ ಮಾಡಬೇಕು, ತುಂಬಾ ಆರ್ಥಿಕವಾಗಿ ಹಿಂದುಳಿದ ಸಮಾಜಕ್ಕೆ ಹೆಚ್ಚಿನ ಅನುದಾನ ನೀಡಿ ಸಮಾಜದ ಅಭಿವೃದ್ಧಿಗೆ ಒತ್ತು ಕೊಡಬೇಕು ನಮ್ಮ ಸಮಾಜ ಯಾವತ್ತು ನಿಮ್ಮೊಂದಿಗೆ ಇದೆ ಎಂದು ಮನವಿ ಮಾಡಿಕೊಂಡರು. ಅಲ್ಲದೆ ನಮ್ಮ ಸಮಾಜದ ವ್ಯಕ್ತಿಗೆ ಯಾವುದಾದರೂ ಇಂದು ಕ್ಷೇತ್ರದಲ್ಲಿ ಈ ಬರುವ ಲೋಕಸಭಾ ಚುನಾವಣೆಗೆ ಟೀಕೆಗೆ ನೀಡಬೇಕು ಎಂದು ಒತ್ತಾಯ ಮಾಡಿದರು. ನಂತರ ಮಾತನಡಿದ ಹುನಗುಂದ ಮತಕ್ಷೇತ್ರದ ಶಾಸಕ ಡಾ: ವಿಜಯಾನಂದ. ಕಾಶಪ್ಪನವರ ನಮ್ಮ ಕ್ಷೇತ್ರದಲ್ಲಿ ಇರುವ ಭೋವಿ ಜನಾಂಗದವರು, ನಾವು ಸಹೋದರತ್ವ ಹೊಂದಿದ್ದೇವೆ ಇದರ ಹಿನ್ನಲೆ ಹೇಳಬೇಕು ಅಂಧರೆ, ಶ್ರೀ ಶರಣಬಸವೇಶ್ವರ ಬಸವ ಮಹಾಸ್ವಾಮಿಗಳಿಗೆ ಇಲಕಲ್ಲನ ಲಿ, ಶ್ರೀ ಡಾ: ಮಹಾಂತ ಶಿವಯೋಗಿಗಳು ಲಿಂಗದಿಕ್ಷೆಯನ್ನು ನೀಡಿದ್ದಾರೆ, ಅಂದಿನಿಂದ ಅವರ ಆ ಬಾಂದವ್ಯ ಇಂದಿಗೂ ಸಹ ಮುಂದೆ ವರೆದಿದೆ, ಈ ಭೋವಿ ಸಮಾಜ ಎಲ್ಲರ ಪ್ರೀತಿಗೆ ಪಾತ್ರರಾದ ಸಮಾಜ, ಭೋವಿ ಸಮಾಜದವರು ಕಟ್ಟಿದ ದೇವರ ಪೂಜಾ ಮನೆ ಅವರಿಗೆ ಬೇಕು ಆದರೆ ಆ ಸಮಾಜದ ವ್ಯಕ್ತಿಗಳು ಬೇಡ ಇಂತ ಭ್ರಷ್ಟರು, ನಮ್ಮ ಮಧ್ಯ ಇದ್ದಾರೆ, ನಿಮ್ಮ ಸಮಾಜದ ಬಗ್ಗೆ ನಮಗೆ ಹೆಮ್ಮೆ ಇದೆ, ಯಾವತ್ತೂ ಸರಕಾರ ನಿಮ್ಮ ಜನಾಂಗದ ಅಭಿವೃದ್ಧಿ ಬದ್ದ ಇದೆ, ಎಂದರು. ಈ ಸಮಾರಂಭದಲ್ಲಿ ,ಮಾನಪ್ಪ ವಜ್ಜಲ, ಸಂಸದ ಪಿ,ಸಿ,ಗದ್ದಿಗೌಡರ, ಸಚಿವರಾದ ಶಿವರಾಜ ತಂಗಡಗಿ, ಅಭಕಾರಿ ಸಚಿವ ಆರ್,ಬಿ,ತಿಮ್ಮಾಪೂರ, ಪಾವಗಡ ಶಾಸಕ ವೆಂಕಟೇಶ ಬಾಗಲಕೀಟೆ ಶಾಸಕ ಎಚ್,ವೈ,ಮೇಟಿ, ಬದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಬೀಳಗಿ ಶಾಸಕ ಶ್ರೀ ಜೆ,ಟಿ ಪಾಟೀಲ, ಜಿಲ್ಲಾ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಶ್ರೀ ಎಸ್, ಜಿ, ನಂಜಯ್ಯನಮಠ,ಮಾಜಿ ಜಿ,ಪ ಅಧ್ಯಕ್ಷ ಶ್ರೀಮತಿ ವೀಣಾ ವ್ಹಿ ಕಾಶಪ್ಪನವರ, ಶ್ರೀ ಸಿದ್ದು,ಕೊಣ್ಣೂರ, ಜಿ,ಪ, ಮಾಜಿ ಅಧ್ಯಕ್ಷ ಬಾಯಕ್ಕ ಮೇಟಿ,ಶ್ರೀ ಅಶೋಕ ಲಿಂಬಾವಳಿ ಶ್ರೀ ಸಿದ್ದು ಬಂಡಿ, ಶ್ರೀ ಮಹೇಶ ಹೋಸಗೌಡರ,ಶ್ರೀಮತಿ ಗೀತಾ ಭರತ್ ಈಟಿ, ಶ್ರೀ ರಾಜೇಂದ್ರ ದೇಶಪಾಂಡೆ, ಶ್ರೀ ರಮೇಶ ಮುರಾಳ , ಹಾಗೂ ಅನೇಕ ನಾಯಕರು ಹಾಗೂ ಕಾಂಗ್ರೇಸ್ ಪಕ್ಷದ ಅಪಾರ ಕಾರ್ಯಕರ್ತರು, ಭೋವಿ ಸಮಾಜದ ಮುಖಂಡರು, ಉಪಸ್ಥಿತಿ ಇದ್ದರು.
