
ಮದುವೆ ಸಂಪ್ರದಾಯಗಳು ವಿಚಿತ್ರ ಹಾಗು ವಿಭಿನ್ನ ರೀತಿಯಾಗಿರುತ್ತದೆ. ಜಗತ್ತಿನ ಬಹುತೇಕ ಕಡೆಗಳಲ್ಲಿ ಇದನ್ನೆಲ್ಲಾ ಚಾಚೂ ತಪ್ಪದೇ ಪಾಲಿಸುತ್ತಾರೆ. ಇದಕ್ಕೆಲ್ಲಾ ಅದರದ್ದೇ ಆದಂತಹ ತರ್ಕವಿದೆ. ವಿವಾಹದ ನಂತರ ಎಲ್ಲಾ ಕಡೆ ನವ ವಧು-ವರರಿಗೆ ಮೊದಲ ರಾತ್ರಿ(ಫಸ್ಟ್ ನೈಟ್) ಆಯೋಜನೆ ಮಾಡುವುದು ಸಾಮಾನ್ಯ. ಆದರೆ ಇಂಟ್ರಸ್ಟಿಂಗ್ ವಿಷಯ ಏನಂದ್ರೆ, ಮೊದಲ ರಾತ್ರಿ ವಧು-ವರರೊಂದಿಗೆ ವಧುವಿನ ತಾಯಿ ಕೂಡ ಅವರೊಂದಿಗೆ ಮಲಗುವಂತಹ ವಿಚಿತ್ರ ಸಂಪ್ರದಾಯವೊಂದಿದೆ. ಆಫ್ರಿಕನ್ ಖಂಡದ ಅನೇಕ ದೇಶಗಳಲ್ಲಿ ಇಂತಹ ವಿಚಿತ್ರ ಆಚರಣೆ ಈಗಲೂ ಇದೆ.

ಆಫ್ರಿಕನ್ ಖಂಡದ ಕೆಲವು ಬುಡಕಟ್ಟು ಪ್ರದೇಶಗಳಲ್ಲಿ ವಿವಾಹದ ನಂತರ ಹುಡುಗಿಯ ತಾಯಿ ಕೂಡ ನವ ದಂಪತಿಗಳೊಂದಿಗೆ ಮೊದಲ ರಾತ್ರಿ(ಫಸ್ಟ್ ನೈಟ್) ಮಲಗುತ್ತಾಳೆ. ಇಂತಹ ಸಂಪ್ರದಾಯ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಂತಹ ವಿಚಿತ್ರ ಆಚರಣೆಯನ್ನು ಅಲ್ಲಿನ ನಿವಾಸಿಗಳೆಲ್ಲರೂ ಈಗಲೂ ಚಾಚೂ ತಪ್ಪದೇ ಪಾಲಿಸುತ್ತಾರೆ. ವಧು-ವರರು ಒಬ್ಬರಿಗೊಬ್ಬರು ಹೊಸಬರಾದ ಕಾರಣ ನವ ದಂಪತಿಗಳಿಗೆ ಸಲಹೆಗಳನ್ನು ನೀಡಲು ಅವರೊಂದಿಗೆ ಮೊದಲ ರಾತ್ರಿ ವಧುವಿನ ತಾಯಿ ಕೂಡ ಇರುತ್ತಾರೆ ಅನ್ನೋದು ಅಲ್ಲಿನ ಜನರ ವಾದ.


ವಿವಾಹದ ನಂತರ ಹೇಗೆ ಸಂತೋಷದ ಜೀವನವನ್ನು ನಡೆಸಬೇಕು.? ಅದಕ್ಕಾಗಿ ಏನೆಲ್ಲಾ ಮಾಡಬೇಕು ಎನ್ನುವುದು ನವ ದಂಪತಿಗಳಿಗೆ ವಧುವಿನ ತಾಯಿ ಹೇಳಿಕೊಡುತ್ತಾಳಂತೆ. ಮರುದಿನ ವಧುವಿನ ತಾಯಿ ನವದಂಪತಿಗಳ ಮೊದಲ ರಾತ್ರಿ ಹೇಗಿತ್ತು.? ಅವರು ಸಂತೋಷವಾಗಿದ್ದರೋ, ಇಲ್ಲವೋ ಅನ್ನುವುದನ್ನು ಕುಟುಂಬದ ಇತರ ಸದಸ್ಯರಿಗೆ ಹೇಳುತ್ತಾಳೆ. ವಿಷಯ ತಿಳಿಯಲು ಕುಟುಂಬದ ಸದಸ್ಯರು ಕೂಡ ಕಾಯುತ್ತಿರುತ್ತಾರೆ. ಇಂತಹ ಆಚರಣೆ ಚೀನಾದ ಕೆಲವು ಪ್ರದೇಶಗಳಲ್ಲಿ ಕೂಡ ಪಾಲಿಸುತ್ತಾರೆ. ಇಲ್ಲಿ ವಧು ಹಾಗೂ ಆಕೆಯ ಕುಟುಂಬದವರು ವಿವಾಹದ ಮುನ್ನ ವರನೊಂದಿಗೆ ಸಮಯವನ್ನು ಕಳೆಯುತ್ತಾರಂತೆ.
