
ಅಮೀನಗಡ: ಇಂದು ಅಮೀನಗಡ ನಗರದಲ್ಲಿ ಗ್ರಾಮೀಣ ಪತ್ರಕರ್ತರಿಗೆ ಶ್ರೀ ಮಂಜುನಾಥ ಸ್ವಾಮಿ ದೀಪೋತ್ಸವ ನಿಮಿತ್ತವಾಗಿ ಗ್ರಾಮೀಣ ಶ್ರೀ ಕ್ಷೇತ್ರ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಿಂದ ಅವರ ಕಾರ್ಯಾಲಯದಲ್ಲಿ ಸ್ಥಳೀಯ ಪತ್ರಕರ್ತರರಿಗೆ ಉಚಿತ ಬ್ಯಾಗ್ ನೀಡಿದರು.




ಸಾಬೂನು,ಆ್ಯಂಡ್ ವಾಶ್ ಲಿಕ್ವೀಡ್ ,ಟವೇಲ್, ಉದುಬತ್ತಿ, ಇತರೆ ಸಾಮಗ್ರಿಗಳನ್ನು ಉಚಿತವಾಗಿ ನೀಡಿ ಪತ್ರಕರ್ತರ ಸಮಾಜ ಸೇವೆ ಅನನ್ಯ ಹೀಗಾಗಿ ನಿಮ್ಮೊಂದಿಗೆ ನಾವು ಸದಾ ಇದ್ದೇವೆ ತಮ್ಮೆಲ್ಲರಿಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೀಪೋತ್ಸವದ ಹಾರ್ದಿಕ ಶುಭಾಶಯ ಕೋರಿ ಜಿಲ್ಲಾ ನಿರ್ದೆಶಕರಾದ ಶ್ರೀ ಚನ್ನಕೇಶವ ಅವರು ಪ್ರಜಾವಾಣಿ ಪತ್ರಿಕೆ ವರದಿಗಾರ ಬಸವರಾಜ್ ನಿಡಗುಂದಿ ಅವರಿಗೆ ಹಾಗೂ ಉದಯವಾಣಿ ಪತ್ರಿಕೆಯ ವರದಿಗಾರ ಅಂದಾನೆಪ್ಪ ಸುಂಕದ ಅವರಿಗೂ ಸಿಹಿಕಹಿ ದಿನಪತ್ರಿಕೆ ಸಂಪಾದಕರು, ಹಿರಿಯ ಪತ್ರಕರ್ತನಾದ ಮಾರುತಿ ಹೊಸಮನಿ ,ಚಕ್ರವ್ಯೂಹ ದಿನ ಪತ್ರಿಕೆ ಪ್ರಧಾನ ಸಂಪಾದಕ ಹನಮಂತ ಹಿರೇಮನಿ, ಸಾಮಾಜಿ ಕ್ರಾಂತಿ ದಿನಪತ್ರಿಕೆ ವರದಿಗಾರ ದೇವರಾಜ್ ಕಮತಗಿ, ಸೇರಿದಂತೆ ಅನೇಕರಿಗೆ ಚನ್ನಕೇಶವ ಹಾಗೂ ಸಂತೋಷ ಅವರು ಬ್ಯಾಗ್ ವಿತರಣೆ ಮಾಡಿ ಶುಭಾಶಯ ಕೋರಿದರು ಈ ಸಂದರ್ಭದಲ್ಲಿ ಜಿಲ್ಲಾ ನಿದೇಶಕರಾದ ಶ್ರೀ ಚನ್ನಕೇಶವ ಹಾಗೂ ಶ್ರೀಮತಿ ಲತಾ ಜಿಲ್ಲಾ ವೀಚಕ್ಷಣಾ ಅಧಿಕಾರಿಗಳು ಹಾಗೂ ತಾಲೂಕು ಯೋಜನಾಧಿಕಾರಿ ಶ್ರೀ ಸಂತೋಷ ಹಾಗೂ ಅಮೀನಗಡ ವಲಯ ಮೇಲ್ವಿಚಾರಕರಾದ ಶ್ರೀಮತಿ ಪವಿತ್ರ ಅವರು ಹಾಗೂ ಸಿಬ್ಬಂದಿ ಉಪಸ್ಥಿತಿ ಇದ್ದರು
