ಅಮೀನಗಡ : ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದಲ್ಲಿ ವಾರ್ಡ ನಂಬರ್ ೪ ರಲ್ಲಿ ಸಾರ್ವಜನಿಕ ರಸ್ತೆ ಮೇಲೆ ಬೋರವೆಲ್ ಹಾಕಿಸಿದ ಶ್ರೀಕಾಂತ ಧೂಪದ ಅವರು ಆಗ ಇದು ಸಂಪೂರ್ಣವಾಗಿ ರಸ್ತೆ ಮೇಲೆ ಇದೆ ಎಂದು ಅನೇಕರು ವಿರೋಧ ಮಾಡಿದರೂ ಸಹ ಉದ್ದಟತನ ಮೆರೆದಿದ್ದರು. ಈಗ ಮನೆ ಬಾರ್ಡಡರ್ ಸುತ್ತಳತೆ ಬಾಂಡ್ರಿ ಪಿಕ್ಸ್ ಮಾಡಿ ಕಂಪೌಂಡ್ ಕಟ್ಟುತ್ತಿದ್ದಾರೆ, ಆಗ ಯಾರ ಮಾತಿಗೂ ಕಿವಿ ಕೊಡದ ಶಿಕ್ಷಕ ಶ್ರೀಕಾಂತ್ ಅವರು ಮಾಡಿದ ತಪ್ಪಿಗೆ ಎದುರು ಮನೆ ನಿವಾಸಿ ಪುಂಡಲೀಕ ಗಾಡಿ ಅವರು ನಡು ರಸ್ತೆ ಮೇಲೆ ರೆಡಿಮೆಟ್ ಶೌಚಾಲಯ ನಿರ್ಮಿಸಿ ಹಿಂದೆ ತರ ತಗೆದು ಮನೆ ಕಟ್ಟಡಕ್ಕೆ ಅಡಿಪಾಯ ಹಾಕುತ್ತಿದ್ದಾರೆ. ಇವರಿಬ್ಬರ ಮುಟ್ಟಾಳತನದಿಂದ ಸಾರ್ವಜನಿಕರಿಗೆ ಏನ್ ತೊಂದರೆ ಆಗತಾ ಇದೆ ಅನ್ನೊ ಸಣ್ಣ ತಿಳುವಳಿಗೆ ಇಬ್ಬರಿಗೂ ಇಲ್ಲ ಇರುವ ೧೦ ಪುಟು ರಸ್ತೆ ಇಬ್ಬರು ನುಂಗಿ ಕೆವಲ ೨ ಪುಟ ಬಿಟ್ಟಿದ್ದಾರೆ , ಇವರಿಬ್ಬರ ಮನೆ ಸುತ್ತಳತೆ ಜಾಗ ಸಂಪೂರ್ಣ ಒತ್ತುವರಿಯಾಗಿದ್ದು ಗ್ರಾಮ ಪಂಚಾಯತಿ ಆಡಳಿತ ಅಧಿಕಾರಿಗಳು ಮೌನ ವಹಿಸಿದ್ದಾರೆ.೪ನೇ ವಾರ್ಡಿನ ಸದಸ್ಯರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ವಾರ್ಡಿನಲ್ಲಿ ಇದೆ ತರ ಸಾರ್ವಜನಿಕ ರಸ್ತೆಗಳನ್ನು ಹೀಗೆ ಒತ್ತುವರಿ ಮಾಡುತ್ತಾ ಹೋದರೆ ಮುಂದೆ ಈ ಪಂಚಾಯತ ಆಡಳಿತ ಅವ್ಯವಸ್ಥೆ ಬಗ್ಗೆ ಜನರಿವೆ ನಂಬಿಕೆ ಒರಟು ಹೋಗುತ್ತದೆ. ಈ ತಕ್ಷಣ ವಾರ್ಡಿನ ಎಲ್ಲಾ ಸದಸ್ಯರು ಸೇರಿ ಇವರಿಬ್ಬರೂ ಈಗಾಗಲೇ ಒತ್ತುವರಿ ಮಾಡಿದ ಜಾಗವನ್ನು ತೆರವು ಮಾಡಿ ಇಷ್ಟು ದಿನ ಸಾರ್ವಜನಿಕ ಸಂಚಾರಕ್ಕೆ ಅಡತಡೆ ಮಾಡಿದ ವಿಚಾರದಲ್ಲಿ ಇವರ ಮೇಲೆ ಪ್ರಕರಣ ದಾಖಲು ಮಾಡಿ ವಾರ್ಡಿನ ಜನತೆಗೆ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ವಾರ್ಡಿನ ಜನತೆ ನಮ್ಮ BB News ನೊಂದಿಗೆ ಅಳಲು ತೊಡಗಿಕೊಂಡರು.

ಇವರನ್ನು ನೋಡಿ ಉಳಿದ ಜನ ಇವರಂತೆ ಎಲ್ಲಾ ರಸ್ತೆ ಅಕ್ರಮವಾಗಿ ಒತ್ತುವರಿ ಮಾಡುತ್ತಾರೆ, ಈ ಬಗ್ಗೆ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಇವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ವಿಪರ್ಯಾಸವೆಂದರೆ ಇದೆ ವಾರ್ಡಿನಲ್ಲಿ ಉಪಾಧ್ಯಕ್ಷರಿದ್ದು ಯಾಕೆ ಮೌನವಾಗಿದ್ದಾರೆ ? ಈ ಬಗ್ಗೆ ವಾರ್ಡಿನ ಜನತೆಗೆ ಉತ್ತರಿಸಲಿ! ಸಮಾಜದಲ್ಲಿ ಈ ರಸ್ತೆ ಒತ್ತುವರಿ ಮಾಡಿದ ಶಿಕ್ಷಕ ಶ್ರೀಕಾಂತ್ ಅವರು ನಾಗರಿಕ ಸಮಾಜದಲ್ಲಿ ಗುರುವಿನ ಸ್ಥಾನವನ್ನು ಅಲಂಕರಿಸಿ ಅನಾಗರಿಕರಂತೆ ಉದ್ದಟತನ ನಡೆ ಅವರಿಗೆ ಶೊಬೆ ತರದು, ತಕ್ಷಣ ಮೊದಲು ರಸ್ತೆ ಮೇಲಿನ ಕಂಪೌಂಡ್ ತೆಗೆದು ಬೋರ ಮುಚ್ಚಿ ರಸ್ತೆಗೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದರೆ ವಾಡಿನ ಜನ ನಿರ್ದಾಕ್ಷಿಣ್ಯವಾಗಿ ಇಬ್ಬರ ಮೇಲೆಯೂ ಕಾನೂನು ಹೋರಾಟ ಮಾಡಬೇಕಾಗುತ್ತದೆ. ಎಂದು ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಡಿ ಬಿ ವಿಜಯಶಂಕರ್ ಅವರು ಕಿಡಿ ಕಾರಿದರು.
