
ಗುಳೇದಗುಡ್ಡ : ಸಮಿಪದ ಸು ಕ್ಷೇತ್ರ ಆಸಂಗಿ ಗ್ರಾಮದ ಪ್ರಸಿದ್ಧ ಶ್ರೀ ಮಾರುತೇಶ್ವರ ದೇವಸ್ಥಾನದ ಸಣ್ಣ ಜಾತ್ರೆ ಇಂದು ಅದ್ದೂರಿಯಾಗಿ ನೆರವೇರಿತು . ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಆಸಂಗಿ ಗ್ರಾಮದ ಸುತ್ತ ಹಳ್ಳಿಗಳಾದ ಕೊಟ್ನಳ್ಳಿ, ಕಟೀಗಿನಳ್ಳಿ. ಲಾಯಿದಗುಂದಿ,ನಿಂಬಲಗುಂದಿ,ಪಾದನಕಟ್ಟಿ,ಅಲ್ಲೂರು,ಹಳದೂರು, ಬೂದನಗಡ, ಸೇರಿದಂತೆ ಎಲ್ಲಾ ಗ್ರಾಮದ ಗುರು ಹಿರಿಯರು ಸೇರಿ ಇಂದು ವಾರದಿಂದ ನಿರಂತರ ಆಸಂಗೇಶ್ವರನಿಗೆ ( ಮಾರುತಿ) ಜಲಾಭಿಶೇಖ ಮಾಡಿ ನಿನ್ನೆ ರಾತ್ರಿ ಇಡಿ ಸುಮಾರು ೧೫ ಕ್ಕೂ ಹೆಚ್ಚು ಭಜನಾ ತಂಡಗಳಿಂದ ನೀರಂತರ ಭಜನೆ ,ಕೀರ್ತನೆ ಮಾಡಿ ಇಂದು ವಿಶೇಷವಾದ ಪೂಜೆ ತಳಿರು ತೋರಣ ಬಾಳೆ ಕಂಬಗಳಿಂದ ಅಲಂಕಾರ ಮಾಡಿ ಮಾರುತಿಗೆ ಇಂದು ವಿಶೇಷವಾಗಿ ಮಡಿ ಮೈಲಿಗೆಯಿಂದ ಬಿಳಿ ಜೋಳದ ನುಚ್ಚಿನ ಅಣ್ಣದ ನೈವೇದ್ಯ ಮಾಡಲಾಗುತ್ತದೆ. ವರ್ಷ ದಲ್ಲಿ ಈ ದಿನ ಮಾತ್ರ ಶ್ರೀ ಆಸಂಗೇಶ್ವರ ,ಶ್ರೀ ವೀರಾಂಜನೇಯ ಪ್ರಭು ಇಂದು ಭೋಜನ ಮಾಡುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿ ಇದೆ. ಊರಿನ ಗೌಡರ ಮನೆಯಿಂದ ಹೊಸದಾದ ಮಣ್ಣಿನ ದೊಡ್ಡ ಅರಿವೆ ತಂದು ಅದರಲ್ಲಿ ಜೋಳದ ನುಚ್ಚು ಮಾಡಿಕೊಂಡು ಬಂದು ನೈವೇದ್ಯ ಮಾಡುವುದು ವಿಶೇಷವಾಗಿದೆ, ನೂರಾರು ಜನ ಭಕ್ತರು ಕೂಡ ಮನೆಯಿಂದ ನುಚ್ವು, ಅಣ್ಣ, ಬೆಲ್ಲದ ನೈವೇದ್ಯ ಮಾಡಿಕೊಡು ಬಂದು ನೈವೇದ್ಯವನ್ನು ಅರ್ಪಿಸುತ್ತಾರೆ. ಇದು ಆ ಮಾರುತಿ ಸ್ವತಃ ತಾನೆ ಇಂದು ಪ್ರಸಾದ ಸ್ವೀಕರಿ ಊಟ ಮಾಡುತ್ತಾನೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿ ಇದೆ .
ಸುಮಾರು ೧೧ ಚೀಲ ಜೋಳದ ನುಚ್ಚಿನ ಅಣ್ಣ ಮಾಡಿ ಸುಮಾರು ೫ ರಿಂದ ೬ ಸಾವಿರ ಜನಕ್ಕೆ ಮಹಾ ಪ್ರಾಸಾದ ಮಾಡಿ ಬಂದ ಪ್ರತಿಯೊಬ್ಬ ಭಕ್ತರಿಗೆ ಪ್ರಸದ ತೆಗೆದುಕೊಂಡು ಹೋಗುವ ವ್ಯವಸ್ಥೆ ಇಲ್ಲಿ ಪ್ರಸಿದ್ದಿ ಪಡೆದಿದೆ. ಈ ಜಾತ್ರೆಯ ವಿಶೇಷತೆ ಇನ್ನೂ ಹೆಚ್ಚು ಪ್ರಚಾರ ಪಡೆಯಬೇಕಿದೆ.

ಸಾರ್ವಜನಿಕರಿಗೆ ಮನೆಗೆ ಪ್ರಸಾದ ಒಯ್ಯಲು ನೀಡುತ್ತಿದ್ದಾರೆ.
ಗ್ರಾಮದ ಗುರುಹಿರಿಯರು ಈ ಧಾರ್ಮಿಕ ಜಾತ್ರಾ ಮಹೋತ್ಸವನ್ನು ಯಶಸ್ವಿಯಾಗಿ ನೇರವೇರಿಸಿದ
ಶ್ರೀ ಬಾಲಪ್ಪ ಬಗಲಿ –
ಶ್ರೀ ಅರ್ಜನಪ್ಪ ಮುತ್ತಲಮನಿ,ಶ್ರೀ ಹನಮಂತ ಡೋಳ್ಳಿನ ಶ್ರೀ ಶಂಕ್ರಗೌಡ ಗೌಡರ ಶ್ರೀ ರಾಮಣ್ ಬಗಲಿ, ಶ್ರೀ ರಾಮಣ್ಣ ಮುತ್ತಲದಿನ್ನಿ ಶ್ರೀ ಯವ್ವನೆಪ್ಪ ತಳವಾರ ,ಶ್ರೀ ಜಟ್ಟೆಪ್ಪ ಗೌಡರ, ಆಸಂಗೆಪ್ಪ ನಕ್ಕರಗುಂದಿ, ಶ್ರೀ ರಮಯ್ಯ ಮ ಜಂಗಮರ, ಶ್ರೀ ರಾಮಲಿಂಗಯ್ಯ ಜಂಗಮರ, ಶ್ರೀ ಮಹಾಂತಯ್ಯ ತೆ ಜಂಗಮರ, ರಾಯಪ್ಪ ಗೋಡಿ ,ಶ್ರೀ ರತ್ನಪ್ಪ ನಾಗರಾಳ , ಶ್ರೀ ಮಲ್ಲಪ್ಪ ಕೊಚಲ, ಶ್ರೀ ಅಡಿವೆಪ್ಪ ಮಾದರ, ಶ್ರೀ ಮಂಗಳಪ್ಪ ಮಾದರ, ಶ್ರೀ ಪರಪ್ಪ ಮಾದರ, ಶ್ರೀ ಭೀಮಣ್ಣ ಡೊಳ್ಳಿನ ಶ್ರೀ ಅರ್ಚಕರು ಬಾಲಪ್ಪ ಪೂಜಾರ, ಶ್ರೀ ದಯಾನಂದ ಬಗಲಿ ಅನೇಕ ಗುರುಹಿರಿರು ,ಯುವಕರು ಉತ್ಸಾಹದಿಂದ ಸೇವೆ ಮಾಡಿದರು.