
ಅಮೀನಗಡ : ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದಲ್ಲಿ ಇಂದು ಗ್ರಾಮದ ಆರಾಧ್ಯದೈವ ಶ್ರೀ ಕಾಳಿಕಾದೇವಿ ಕಾರ್ತೀಕೋತ್ಸ ಅದ್ದೂರಿಯಾಗಿ ಜರುಗಿತು,
ಗ್ರಾಮದ ಎಲ್ಲಾ ಸದ್ಬಕ್ತರು ಹಣತೆಗಳಗೆ . ದೀಪಹಚ್ಚಿ ದೇವಿಗೆ ನಮಿಸಿದರು.
ಅರ್ಚಕರಾದ ಪೂಜ್ಯ ಮೌನೇಶ ಅವರು ದೇವಿಗೆ ವಿಶೇಷ ಅಲಂಕಾರ ಹಾಗೂ ಮಹಾ ಮಂಗಳಾರತಿ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಪ್ರಮುಖರಾದ ಮನೋಹರ ಕಮ್ಮಾರ,ಗಣೇಶ ಕಮ್ಮಾರ, ಸಂಗಮೇಶ ಕಮ್ಮಾರ,ಗಂಗಾಧರ ಕಮ್ಮಾರ, ನಾಗೇಶ ಗಂಜಿಹಾಳ ,ಸಂಗಯ್ಯ ಮರಳಯ್ಯಮಠ, ಹಾಗೂ ಸಮಿತಿಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು. ಅತ್ಯಂತಹ ಸಢಗರ ಸಂಭ್ರಮದಿಂದ ಸಂಪನ್ನವಾಗಿ ಕಾರ್ತಿಕೋತ್ಸವ ನಡೆಯಿತು.


