ನವದೆಹಲಿ: ಒಂದು ರೂಪಾಯಿಗೆ ಏನು ಬರುತ್ತೆ ಎಂದು ಕೇಳುವ ಜನರಿದ್ದಾರೆ. ಆದ್ರೆ ಇಲ್ಲೊಬ್ಬರು ಒಂದು ರೂಪಾಯಿಯಲ್ಲಿ ಒಬ್ಬ ವ್ಯಕ್ತಿಗೆ ಒಂದು ಹೊತ್ತಿನ ಹೊಟ್ಟೆ ತುಂಬಿಸುತ್ತಿದ್ದಾರೆ. ಈ ಮೂಲಕ ಜನ ಸೇವೆಯನ್ನು ಮಾಡುತ್ತಾ ಆ ಪ್ರದೇಶದಲ್ಲಿ ಯಾರೂ ಹಸಿವಿನಿಂದ ಇರದಂತೆ ನೋಡಿಕೊಂಡಿದ್ದಾರೆ.

ನಂಗ್ಲೋಯಿನ ಶಿವ ಮಂದಿರ ಬಳಿಯ ‘ಶ್ಯಾಮ್ ರಸೋಯಿ’ ಎಂಬ ರೆಸ್ಟೋರೆಂಟ್, ಜನರಿಗೆ 1 ರೂಪಾಯಿಗೆ ಒಂದು ಹೊತ್ತಿನ ಊಟ ನೀಡುತ್ತಿದೆ. ಈ ಬಗ್ಗೆ ಸಂಸ್ಥೆಯ ಮಾಲೀಕ ಪ್ರವೀಣ್ ಗೋಯಲ್ ಮಾತನಾಡಿ ನಾವು ಜನರಿಗೆ ಈ ಸೇವೆ ಮಾಡಲು ಕೆಲವು ದಾನಿಗಳು ಆರ್ಥಿಕವಾಗಿ ಹಾಗೂ ಇತರ ರೀತಿಯಲ್ಲಿ ಸಹಾಯ ಮಾಡುತ್ತಾರೆ. ಮೊದಲು ನಮ್ಮ ಸಂಸ್ಥೆಯಲ್ಲಿ 10 ರೂಪಾಯಿಗೆ ಊಟ ನೀಡಲಾಗುತ್ತಿತ್ತು. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸಲು ಅದನ್ನು ಕಡಿಮೆ ಮಾಡಿ 1ರೂಪಾಯಿಗೆ ಇಳಿಸಿದ್ದೇವೆ. ಪ್ರತಿನಿತ್ಯ 1000 ಮಂದಿ ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ.