
ಅಮೀನಗಡ: ಹುನಗುಂದ ತಾಲೂಕಿನ ಅಮೀನಗಡ ನಗರದ ಕರ್ನಾಟಕ ಬಿದಿಬದಿ ವ್ಯಾಪಾರಿಗಳ ಸಂಘದಿಂದ ನಗರದ ಕಾರ್ಯಾಲಯದಲ್ಲಿ ೭೫ ನೇ ಸ್ವಾತಂತ್ರ್ರೋತ್ಸದ ದಿನಾಚರಣೆಯನ್ನು ಈ ಸಂಘದ ಜಿಲ್ಲಾ ಅಧ್ಯಕ್ಷ ರಾದ,ಶ್ರೀ ರೀಯಾಜಬಾಯ್ ಮಕಾಂದರ ಧ್ವಜಾರೋಹಣ ನೇರವೇರಿಸಿದರು.

ಈ ಸಂಧರ್ಭದಲ್ಲಿ ಅಮೀನಗಡ ನಗರ ಘಟಕದ ಅಧ್ಯಕ್ಷರಾದ ಶ್ರೀ ದಾವಲಸಾಬ ಬಾಗೇವಾಡಿ ಅವರು ಅಧ್ಯಕ್ಷತೆ ವಹಿಸಿದ್ದರು, ಇಲಕಲ್ಲ ನಗರದ ತಾಲೂಕು ಅಧ್ಯಕ್ಷರಾದ ಶ್ರೀ ಪವಾಡೆಪ್ಪ ಚಲವಾದಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಇದೊಂದು ಸುದಿನ ಇವತ್ತು ೭೫ ನೇ ವರ್ಷದ ಈ ಸ್ವಾತಂತ್ರ್ಯ ದಿನಾಚರಣೆಯನ್ನು ಆಚನೆ ಮಾಡುತ್ತಿರುವುದು ನಮ್ಮ ಸೌಭಾಗ್ಯ,ಎಲ್ಲಾ ಬಿದಿಬದಿ ವ್ಯಾಪಾರಿಗಳು ಈ ದೇಶದ ಘನತೆಯನ್ನು ಎತ್ತಿ ಹಿಡಿಯಬೇಕು ನಾವೆಲ್ಲ ಭಾರತೀಯರು ಹಿಂದೂ – ಮುಸ್ಲಿಂ ಭಾವೈಕ್ಯಯ ಈ ರಾಷ್ಟ್ರದ ಬಗ್ಗೆ ನಾವೆಲ್ಲ ಇಡಿ ವಿಶ್ವಕ್ಕೆ ಮಾದರಿಯಾಗಬೇಕು,ಒಂದೇ ಮಾತರಂ,ಎಂದು ದೇಶದ ಸಮಗ್ರ ಅಭಿವೃದ್ಧಿಗೆ ನಾವು ಶ್ರಮಿಸಬೇಕು ಎಂದರು. ಈ ಸಂಧರ್ಭದಲ್ಲಿ ಇಲಕಲ್ಲ ತಾಲ್ಲೂಕು ಅಧ್ಯಕ್ಷರಾದ ಪವಾಡೆಪ್ಪ ಚಲವಾದಿಯವರು ವ್ಯಾಪಾರಿಗಳನ ಉದ್ದೇಶಿಸಿ ನಾವು ಬಡವರೇ ಇರಬಹುದು ಆದರೆ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕು.ಈ ಮಕ್ಕಳು ಈ ದೇಶದ ಆಸ್ತಿ ಇಡಿ ವಿಶ್ವದಲ್ಲಿ ಭಾರತ ತರುಣರ ನಾಡು ನಮ್ಮ ದೇಶದಲ್ಲಿ ಇರುವಷ್ಟು ಯುವಕರ ಪಡೆ ಬೇರೆ ಯಾವ ದೇಶಗಳಲ್ಲಿ ಇಲ್ಲ ಹೀಗಾಗಿ ನಾವು ನಮ್ಮ ಮಕ್ಕಳಲ್ಲಿ ಉತ್ತಮ ಶಿಕ್ಷಣ ನೀಡಿ ಈ ದೇಶದ ಸಮಗ್ರ ಅಭಿವೃದ್ಧಿ ಹಾಗೂ ಉತ್ತಮ ವೈಚಾರಿಕ ವಿಷಯಗಳಿಂದ ದೇಶ ಪ್ರೇಮ ಮೂಡಿಸಬೇಕು.

ಬಡತನ ಬದಿಗೊತ್ತಿ ನಮ್ಮ ಉಧ್ಯಮದ ಜೊತೆಗೆ ಮಕ್ಕಳು ಕೂಡ ಶಿಕ್ಷಣ ಕಲಿಯಬೇಕು ನಿಮ್ಮೊಂದಿಗೆ ನಮ್ಮ ಸಂಘಟನೆ ಇದೆ ಏನೇ ಸಹಾಯ ,ಸಹಕಾರ ಬೇಕಾದರೂ ನಿಮಗೆ ಒದಗೊಸಲು ಸಿದ್ದ ಎಂದರು. ಈ ಸರಳ ಧ್ವಜಾರೋಹಣ ಕಾರ್ಯಕ್ರಮದಲ್ಲಿ ನಗರ ಘಟಕದ ಸಂಘದ ಅಧ್ಯಕ್ಷರಾದ ಶ್ರೀ ದಾವಲಸಾಬ ಬಾಗಲಕೋಟೆ ಅವರು ಮುದ್ದು ಮಕ್ಕಳಿಗೆ ಫೆನ್ನು ಹಂಚಿಕೆ ಮಾಡಿದರು,ಅಲ್ಲದೆ ಸಂಘದ ಗೌರವ ಅಧ್ಯಕ್ಷೆ ಶ್ರೀಮತಿ ಚಾಂದಬಿ ಜಂಗಿ ಹಾಗೂ ಮಮತಾಜಬೇಗಂ ಅಂಬಲಗಿ, ಕಾರ್ಯದರ್ಶಿ ಶ್ರೀ ಮಲ್ಲಿಕಾರ್ಜುನ ನಿಡಗುಂದಿ ,ಸಹಕಾರ್ಯದರ್ಶಿ ಶ್ರೀ ಹನಮಂತ ಕತ್ತಿ,ಸಂಘದ ಸದಸ್ಯರಾದ ಗಣೇಶ ಸಿಂಹಾಸನ,ಲಕ್ಷ್ಮವ್ವ ಭಜಂತ್ರಿ

ಹಾಗೂ ದಾವಲಸಾಬ ಮುಲ್ಲಾ, ಶ್ರೀಮತಿ ಅಂಬವ್ವ ಪಡತೇಲಿ, ಅಂದಾನೆಪ್ಪ ನೀರಂಜನಮಠ ,ರಾಜೇಸಾಬ ಭಾಗವಾನ,ಮಹಮ್ಮದ್ ರಫೀಕ ಗೂಡುರು,ಜಿಲ್ಲಾ ಸಮಿತಿ ಸದಸ್ಯರಾದ ಮುತ್ತಪ್ಪ ಮುಂದಿನಮನಿ, ರಾಘವೇಂದ್ರ ಮಬ್ರುಮಕರ, ಕೋಮಣ್ಣ ರಾಠೊಡ ಹಾಗೂ ಸರ್ವಸದಸ್ಯರು ಹಾಜರಿದ್ದರು.