ಅಮೀನಗಡ : ಅಮೀನಗಡ : ಗೃಹ ರಕ್ಷಕದಳ ಹಾಗೂ ಪೊಲೀಸ್ ಇಲಾಖೆ ಒಂದೇ ಮುಖದ ಎರಡು ನಾಣ್ಯ , ಇದ್ದ ಹಾಗೆ ಪೊಲೀಸ್ ಹಾಗೂ ಗೃಹರಕ್ಷಕರು ನಾವು ಈ ಸಮಾಜದ ಶಾಂತಿ ಪಾಲನೆಗಾಗಿ ಒಂದೊಂದು ಸಲ ನಮಗಿಂತ ಹೆಚ್ಚಿನ ಕೆಲಸ ಮಾಡುತ್ತಿರಿ ಮೊನ್ನೆ ದಿನ ನಮ್ನ ಠಾಣೆಗೆ ಐಜಿ ಸಾಹೇಬರು ಬಂದಾಗ ನಮ್ಮ ಠಾಣೆಯ ಹೊರಾಂಗಣ ಗಾರ್ಡನ್ ಹಾಗೂ ಮೈದಾನ ,ಮತ್ತು ಠಾಣೆಯಲ್ಲಿ ಶಿಸ್ತು ಕಾಯ್ದುಕೊಂಡ ಕಾರಣ ಉತ್ತಮ ಪ್ರಶೌಂಸೆ ವ್ಯಕ್ತಪಡಿದರು, ಆ ಕ್ರೇಡಿಟ್ ತಮಗೆ ಸಲ್ಲುತ್ತದೆ. ಹೀಗೆ ತಾವು ಉತ್ತಮ ಕರ್ತವ್ಯ ಮಾಡುವ ಮೂಲಕ ಗ್ರಾಮದ ಕೀರ್ತಿ ಹೆಚ್ಚಿಸಬೇಕು ಕಾರ್ಯಾಲಯಕ್ಕೆ ನಾನು ಕೂಡ ಏನರ ಅಗತ್ಯತೆಗಳು ಇದ್ರೆ ಹೇಳಿ ಎಂದು PSI ಜ್ಯೋತಿ ವಾಲಿಕಾರ್,ಅವರು ಇಂದು ಸೂಳೇಭಾವಿ ಗ್ರಾಮದಲ್ಲಿ ಗೃಹ ರಕ್ಷಕ ದಳ ಸೂಳೇಭಾವಿ ಘಟಕದ ವೇದಿಕೆ ಉದ್ಘಾಟನೆ ಮಾಡಿ ಮಾತನಾಡಿದರು.
ನಂತರ ಗ್ರಾನ ಪಂಚಾಯತಿ ಅಧ್ಯಕ್ಷ ಪಿಡ್ಡಪ್ಪ ಕುರಿ ಅವರು ಹಾಗೂ ಗದಗಯ್ಯ ನಂಜಯ್ಯನಮಠ ,ಖಾಸೀಮಸಾಬ ಬೂದಿಹಾಳ ,ಮಹಾಂತಯ್ಯ ನಂಜಯ್ಯನಮಠ ಅವರು ಸೇರಿ ಕಾರ್ಯಾಲಯ ಉದ್ಘಾಟಿಸಿದರು.

ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಗದಗಯ್ಯ ನಂಜಯ್ಯನಮಠ ಗ್ರಾಮದ ಪರವಾಗಿ ನಮ್ಮ ಸಹೋದರರ ಪರವಾಗಿ ಎಲ್ಲಾ ಸಹಕಾರ ನೀಡುತ್ತೇವೆ,ತಮ್ಮ ಕರ್ತವ್ಯದ ಮೂಲಕ ಗ್ರಾಮಕ್ಕೆ ಉತ್ತಮ ಹೆಸರು ತರಲು ವಿನಂತಿಸುತ್ತೇನೆ. ಎಂದರು
ಜಿಲ್ಲಾ ಸಹಾಯಕ ಬೋದಕರಾದ ಶ್ರೀ ರಾಕೇಶ ಗೋನಾಳ ,ಠಾಣಾ ಅಧಿಕಾರಿ PSI ಜ್ಯೋತಿ ವಾಲಿಕಾರ, ಗ್ರಾಮ,ಪಂ, ಅಧ್ಯಕ್ಷ ಪಿಡ್ಡಪ್ಪ ಕುರಿ, ಸೂಳೇಭಾವಿ ಘಟಕಾಧಿಕಾರಿ, ಶ್ರೀ ಲೋಕೇಶ ರಾಮದುರ್ಗ, , ಶ್ರೀ ಬಸವರಾಜ ತುಂಬರಮಟ್ಟಿ, ಶ್ರೀ .ಪಾಂಡು ರಾಮದುರ್ಗ, ಶ್ರೀಮತಿ ವಿಜಯಲಕ್ಷ್ಮೀ ಬೆಲ್ಲದ ,ಶ್ರೀ ಮಹಾಂತಯ್ಯ ನಂಜಯ್ಯನಮಠ, ಗ್ರಾಂ,ಸದಸ್ಯರು,

ಅಮೀನಗಡ ಪೋಲಿಸ್ ಠಾಣಾ ಅಧಿಕಾರಿ ಎಸ್ ಐ ಶ್ರೀಮತಿ ಜ್ಯೋತಿ ವಾಲಿಕಾರ ಅವರಿಗೆ ಗೌರವ ಸನ್ಮಾನ .
ಶ್ರೀ ಡಿ,ಬಿ, ವಿಜಯಶಂಕರ್, ಜಿಲ್ಲಾ ಅಧ್ಯಕ್ಷರು ಕರ್ನಾಟಕ ಪತ್ರಕರ್ತರ ಸಂಘ, ಬಾಗಲಕೋಟೆ, ಶ್ರೀ ಯಮನಪ್ಪ ಭಜಂತ್ರಿ, ಅಮೀನಗಡ ಘಟಕಾಧಿಕಾರಿ, ಶ್ರೀ ಬಸವರಾಜ್ ತುಂಬರಮಟ್ಟಿ ಸೇರಿದಂತೆ ಹಲವರು ಉಪಸ್ಥಿತಿ ಇದ್ದರು. ಜಿಲ್ಲಾ ಭೋಧಕರಾದ ಶ್ರೀ ಎ,ಎಲ್ ಸವುಕಾರ್ ಇವರ ಮಾರ್ಗದರ್ಶನದಲ್ಲಿ ಅಮೀನಗಡ ಘಟಕಾಧಿಕಾರಿ, ಯಮನಪ್ಪ ಭಜಂತ್ರಿ, ಸೂಳೇಭಾವಿ ಘಟಕಾಧಿಕಾರಿ ಶ್ರೀ

ಲೋಕೇಶ ರಾಮದುರ್ಗ, ಸಾಜೇಂಟ್ ಶ್ರೀ ರಾಜೇಶಾಬ ನದಾಫ್ , ಶ್ರೀ ಬಸವರಾಜ್ ರಾಮದುರ್ಗ, ಶ್ರೀ ಯಮನಪ್ಪ ವಡ್ಡೊಡಗಿ, ಶ್ರೀ ರವಿ ಧೂಪದ, ಸುರೇಶ ವಾಲ್ಮೀಕಿ, ಮುಂದಾದವರು,ಯಶಸ್ವಿಯಾಗಿ ಕಾರ್ಯಕ್ರಮ ನೇರೆವೇರಿಸಿದರು.ಈ ಸಂದರ್ಭದಲ್ಲಿ ಅಮೀನಗಡ,ಗುಡೂರು,ಹುನಗುಂದ ಇಲಕಲ್ಲ ಸೇರಿದಂತೆ ವಿವಿಧ ಗ್ರಾಮದ ಸಿಬ್ಬಂದಿಗಳು ಉಪಸ್ಥಿತಿ ಇದ್ದರು.





ಸಭೆ ಉದ್ದೇಶಿಸಿ ಜಿಲ್ಲಾ ಸಹಾಯಕ ಬೋದಕರಾದ ಶ್ರೀ ರಾಕೇಶ್ ಅವರು ಮಾತನಾಡಿದರು.

ಸಂಗಪ್ಪ ಹಡಪದ ದಂಪತಿಗಳಿಂದ ಪ್ರಾರ್ಥನೆ ಗೀತೆ ಹಾರಿಸಲಾಯಿತು, ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕರಾದ ಶ್ರೀ ಕಲ್ಯಾಣಿ ಗುಳೇದಗುಡ್ಡ ಅವರು ನಡೆಸಿಕೊಟ್ಟರು.

ವರದಿ : ಕಿರಣ ಕಾಳಗಿ