ಇಂದು ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಪೊಲೀಸ್ ಇಲಾಖೆ ಹಾಗೂ ಪಟ್ಟಣ ಪಂಚಾಯತ ಆಡಳಿತ ಮಂಡಳಿ ಸಹಯೋಗದಲ್ಲಿ ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬದ ನಿಮಿತ್ಯ, ಸಾರ್ವಜನಿಕವಾಗಿ ಬಹಿರಂಗ ಶಾಂತಿಪಾಲನಾ ಸಭೆಯನ್ನು ಇಂದು ಹುನಗುಂದ ತಾಲೂಕಿನ ವೃತ್ತ ನೀರಿಕ್ಷಕರಾದ ಸಿಪಿಐ ಶ್ರೀ ಅಯ್ಯನಗೌಡ ಪಾಟೀಲ್, ಪಿಎಸ್ಐ ಬಸವರಾಜ ತಿಪರಡ್ಡಿ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಐ.ಜಿ.ಕೊಣ್ಣೂರ ಇವರ ಉಪಸ್ಥಿತಿಯಲ್ಲಿ ಸಭೆ ಜರುಗಿತು, ಸಭಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ ಶ್ರೀ ಅಯ್ಯನಗೌಡ ಪಾಟೀಲ್ ಅವರು ಈ ವರ್ಷ ಕೋವಿಡ್- 19 ಕೋರೋಣಾ ಪ್ರಕರಣಗಳು ರಾಜ್ಯದ ಮೂಲೆ ಮೂಲೆಗಳಲ್ಲಿಯೊ ಪ್ರತಿ ದಿನ 7 ಸಾವಿರ ಪ್ರಕರಣಗಳು ಕಂಡು ಬರುತ್ತಿರುವುದರಿಂದ ಸರಕಾರ ಸಂಪೂರ್ಣವಾಗಿ ಈ ವರ್ಷ ಗಣೇಶ ಚತುರ್ಥಿ ಹಾಗೂ ಮೋಹರಂ ಮತ್ತು ಯಾವುದೇ ಸಾರ್ವಜನಿಕ ಹಬ್ಬ ಹರಿದಿನಗಳು ಜಾತ್ರಾ ಮಹೋತ್ಸಗಳು ಮತ್ತು ಸಾರ್ವಜನಿಕ ಪ್ರಸಾದ ಕಾರ್ಯಕ್ರಮಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ, ಹೀಗಾಗಿ ಅಮೀನಗಡ ನಗರದ ಗಜಾನನ ಯುವಕ ಮಂಡಳಿಯವರು ಈ ವರ್ಷ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನನ್ನು ಪ್ರತಿಷ್ಟಾಪಿಸುವಂತಿಲ್ಲ ಮತ್ತು ಪ್ರಸಾದ ಮಾಡುವಂತಿಲ್ಲ ಹಾಗೆ ಮುಸ್ಲಿಂ ಭಾಂದವರು ಕೂಡಾ ಮೋಹರಂ ಹಬ್ಬವನು ಆಚರಿಸುವಂತಿಲ್ಲಾ, ದಯಮಾಡಿ ಸಾರ್ವಜನಿಕರು ಹಾಗೂ ನಗರದ ಪ್ರಮುಖರು ನಮ್ಮ ಇಲಾಖೆಯೊಂದಿಗೆ ತಾವು ಕೈ ಜೋಡಿಸಿ ನಗರದಲ್ಲಿ ಕಾನೂನು ಸುವ್ಯವಸ್ಥಿತೆ ಉಲ್ಲಂಘನೆ ಯಾಗದಂತೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ತಿಳಿಸಿದರು.
ಈ ಶಾಂತಿಪಾಲನಾ ಸಭೆಯಲ್ಲಿ ನಗರದ ಅಂಜುಮನ್ ಇಸ್ಲಾಂ ಕಮೀಟಿ ಅಧ್ಯಕ್ಷರಾದ ಶ್ರೀ ಅಜಮೀರ ಮುಲ್ಲಾ, ಹಾಗೂ ತಾಲೂಕ ಪಂಚಾಯತ ಮಾಜಿ ಅಧ್ಯಕ್ಷರಾದ ಹುಸೇನಫೀರಾ ಖಾದ್ರಿ, ಪಂ.ಪಂ ಸದಸ್ಯರಾದ ಗುರುನಾಥ ಚಳ್ಳಮರದ, ಮನೋಹರ ರಕ್ಕಸಗಿ, ವಿಷ್ಣು ಗೌಡರ, ಬಸು ನಿಡಗುಂದಿ, ಅಮರೇಶ ಮಡ್ಡಕಟ್ಟಿ, ಪುನೀತ್ ರಾಠೋಡ್, ಹಾಸಿಂಫೀರಾ ಪೀರಜಾದೆ, ಡಿ.ಪಿ ಅತ್ತಾರ, ಸಂತೋಷ ವ್ಯಾಪಾರಿಮಠ, ಸಿಬ್ಬಂದಿಗಳಾದ ರಮೇಶ ಸಮಗಾರ, ಲೋಕೆಶ್ ವಂದಗನೂರ, ನಗರದ ಗಜಾನನ ಯುವಕ ಮಂಡಳಿ ಪ್ರತಿನಿಧಿಗಳು ಹಾಗೂ ಅಂಜುಮನ್ ಇಸ್ಲಾಂ ಕಮೀಟಿ ಸರ್ವ ಸದಸ್ಯರು ಶಾಂತಿ ಪಾಲನ ಸಂಭೆಯಲ್ಲಿ ಪಾಲ್ಗೊಂಡಿದ್ದರು.