
ಶೂಲೇಭಾವಿ: ಗ್ರಾಮದಲ್ಲಿ ಸುಮಾರು ೭ – ೮ ನೇ ಶತಮಾನದಲ್ಲಿ ನಿರ್ಮಾಣಗೊಂಡ ಐತಿಹಾಸಿಕ ಪುರಾತನ ಶಿವ ದೇವಾಲಯವು ಇತ್ತಿಚ್ಚಿಗೆ ಕಳೆದ೨ ವರ್ಷದಲ್ಲಿ ಪುನರ್ನಿರ್ಮಾಣಗೊಂಡು ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ಮೂಲಕ ಗ್ರಾಮದಲ್ಲಿ ಜನಾಕರ್ಷಣೆಯನ್ನು ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ,ಕಳೆದ ವಾರ ಈ ಶಿವಾಲಯದ ಜೀರ್ನೋದ್ದಾರ ಸೇವಾ ಸಮಿತಿ ರಚನೆಗೊಂಡು ಪ್ರತಿ ಸೋಮವಾರ ಮಹಾ ರದ್ರಾಭಿಶೇಖ,ಪ್ರತಿ ಅಮವಾಸ್ಯೆ ತ್ರಿಕಾಲ ಮಹಾ ರದ್ರಾಭಿಶೇಖ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಕಳೆದ ೫ ತಿಂಗಳಿಂದ ಶಿವಾಲಯದಲ್ಲಿ ನಡೆಯುತ್ತಿದ್ದೆ, ಅಸಂಖ್ಯಾತ ಭಕ್ತರು ಈ ಶಿವಾಲಯಕ್ಕೆ ವಿವಿಧ ರೀತಿಯಲ್ಲಿ ದೇಣಿಗೆ ನೀಡುತ್ತಿದ್ದಾರೆ.

ಅದರಲ್ಲಿ ಮುಖ್ಯವಾಗಿ ಗ್ರಾಮದ ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕರಾದ ಶ್ರೀ ಯಮನಪ್ಪ ರಾಮಪ್ಪ ಹಾಲವರ ಅವರು ಈ ಶಿವಾಲಯಕ್ಕೆ ೨೬ ಸಾವಿರ ವೆಚ್ಚದಲ್ಲಿ UPS ಬ್ಯಾಟರಿ (ವಿದ್ಯುತ್) ದೇಣಿಗೆ ನೀಡಿದ್ದಾರೆ. ಗ್ರಾಮದಲ್ಲಿ ವಿದ್ಯುತ್ ಇದ್ದರು ಸಹ ಶಿವಾಲಯದಲ್ಲಿ ಸಾಯಂಕಾಲ ೦೭ ಗಂಟೆ ವರೆಗೆ ಕರೆಂಟ್ ಇರುತ್ತಿರಲಿಲ್ಲ ಅದು ತ್ರ ಫೀಜ್ ಇರುವುದರಿಂದ ಅಲ್ಲಿ ನಮ್ಮ ಧರ್ಮಿಕ ಪೂಜಾ ಕಾರ್ಯಕ್ರಮಕ್ಕೆ ತುಂಬಾ ಅನಾನು ಕೂಲತೆಯಾಗುತ್ತಿತ್ತು.

ಇದರ ಸಮಸ್ಯೆಯನ್ನು ನಾವು ಹಾಲವರ ಅವರಲ್ಲಿ ವಿನಂತಿಸಿದಾಗ ಕೆವಲ ೨೪ ಗಂಟೆಯಲ್ಲಿ ಶಿವಾಲಯಕ್ಕೆ ಬೆಳಕು ಕಲ್ಪಿಸಿದ ಕಿರ್ತಿ ಅವರಿಗೆ ಸಲ್ಲುತ್ತದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದಲ್ಲಿ ಇದರಿಂದ ಶಿವಾಯಕ್ಕೆ ತುಂಬಾ ಅನುಕೂಲ ಆಗಿದ್ದು ಅವರ ಈ ಸರಳ ಸಜ್ಜನಿಕೆ ಹಾಗೂ ಸರಳ ವ್ಯಕ್ತಿತ್ವವನ್ಬು ಕಂಡು ಇಂದು ಶಿವಾಲಯದಲ್ಲಿ ಸೋಮವಾರ ವಿಶೇಷವಾಗಿ ಮಹಾ ರದ್ರಾಭಿಶೇಖ ಹಾಗೂ ಮಹಾ ಮಂಗಳಾರತಿ ಸಮಯದಲ್ಲಿ ಇಂದು ಗೋದೂಳಿ ಸಮಯದಲ್ಲಿ ಶ್ರೀ ವಾಯ್,ಆರ್ ಹಾಲವರ ಅವರನ್ನು ಕೆರೆಹಿಸಿ ಶ್ರೀ ಶೂಲೇಶ್ವರ ಜೀರ್ನೋದ್ದಾರ ಸೇವಾ ಸಮಿತಿಯಿಂದ ಅವರ ಈ ಸೇವೆಯನ್ನು ಮೆಚ್ಚಿ ಅತ್ಯಂತಹ ಗೌರವ ಪೂರ್ವಕವಾಗಿ ಗ್ರಾಮದ ಮಾಜಿ ಶಾಸಕರು ಹಾಗೂ ಜಿಲ್ಲಾ KPCC ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶ್ರೀ ಎಸ್,ಜಿ,ನಂಜಯ್ಯನಮಠ ಅವರು ಸನ್ಮಾನ ಮಾಡಿ ಹರ್ಷ ವ್ಯಕ್ತ ಪಡಿಸಿದರು,ನಿಮ್ಮಂತ ದಾನಿಗಳು ಈ ಸಮಾಜಕ್ಕೆ ಅವಶ್ಯಕ ಎಂದರು.

ಈ ಸಂಧರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಯಮನಪ್ಪ ,ಆರ್,ಹಾಲವರ ಅವರು ಸಾರ್ವಜಕ ಪುರಾತನ ದೇವಾಲಯದ ಜೀರ್ನೋದ್ದಾರ ಸಲುವಾಗಿ ನಾವೆಲ್ಲರೂ ಇದರ ಕಲ್ಯಾಣಕ್ಕಾಗಿ ಒಂದು ಜವಾಬ್ದಾರಿಯುತ ಕಾರ್ಯಾಲಯ ಮಾಡಿ ಉತ್ತಮ ಧಾರ್ಮಿಕ ಕಾರ್ಯಕ್ರಮಗಳನ ನೋಡಿ ಇಂತಹ ಪುರಾತನ ಐತಿಹಾಸಿಕ ಶಿವ ದೇವಾಲಯಕ್ಕೆ ಬೆಳಕು ಕಲ್ಪಿಸುವ ಭಾಗ್ಯ ನನಗೆ ಸಿಕ್ಕಿರೊದು ಪುಣ್ಯ ಯಾವತ್ತು ನಿಮ್ಮೊಂದಿಗೆ ನಾನು ಒಬ್ಬ ನಾನು ಈ ಗ್ರಾಮದಲ್ಲಿ ಇರೊವರೆಗೂ ಯಾವುದೆ ಸಂಧರ್ಭದಲ್ಲಿ ತಾವು ಏನೆ ಕೆಳಿದರು ಸಹ ನನ್ನಿಂದ ಒದಗಬಹುದಾದ ಸಹಾಯ – ಸಹಕಾರ ಮಾಡುತ್ತೆನೆಂದು ಭರವಸೆ ನೀಡಿದರು.

ಈ ಸರಳ ಸನ್ಮಾನ ಸಮಾರಂಭದಲ್ಲಿ ಸಮಿತಿ ಅಧ್ಯಕ್ಷ ದೇವರಾಜ ಕಮತಗಿ, ಉಪಾಧ್ಯಕ್ಷ ನಾಗೇಶ ಗಂಜಿಹಾಳ,ಸಮಿತಿ ಸದಸ್ಯರಾದ ಮಹಾಂತೇಶ ಭದ್ರಣ್ಣನವರ,ಗ್ಯಾನಪ್ಪ ಗೋನಾಳ,ಮಾಂತಪ್ಪ ಹಂಗರಗಿ ಗ್ರಾಂ,ಪಂ,ಸದಸ್ಯರು, ಯಮನಪ್ಪ ಬಾರಕೇರ,ಪಾಂಡು ಸಾಲಮನಿ,ಸತೀಶ ಪಾಟೀಲ,ಶ್ರೀಧರ ಒಡ್ಡೊಡಗಿ, ನಾರಾಣಪ್ಪ ಲಾಯದಗುಂದಿ ,ಈರಣ್ಣ ಧೂಪದ ಹಾಗೂ ಕಾರ್ಯದರ್ಶಿ ಶ್ರೀ ಎಸ್,ಡಿ,ಭಜಂತ್ರಿ ಉಪಸ್ಥಿತರಿದ್ದರು.
