
ಅಮೀನಗಡ : ಅಮೀನಗಡ ಪೊಲೀಸ್ ಠಾಣೆಯಲ್ಲಿ ಕಳೆದ ೭ ವರ್ಷಗಳಿಂದ ಪೊಲೀಸ್ ಕಾನ್ಸಟೇಬಲ ಆಗಿ ಕರ್ತವ್ಯವನ್ನು ನಿಭಾಯಿಸಿ ಇತ್ತಿಚ್ಚಿಗೆ ಬಾಗಲಕೋಟೆ ಗ್ರಾಮೀಣ ಠಾಣೆಗೆ ವರ್ಗಾವಣೆ ಹೊಂದಿರುವ ಶ್ರೀ ಸಂಗಮೇಶ ತೋಟದ ಅವರಿಗೆ ಶೂಲೇಭಾವಿ ಗ್ರಾಮ ಪಂಚಾಯತಿ ಸದಸ್ಯರಿಂದ ಗೌರವ ಸನ್ಮಾನ ಮಾಡಿ ಬಿಳ್ಕೋಡಲಾಯಿತು,ಇವರ ಉತ್ತಮ ಕರ್ತವ್ಯವನ್ನು ಮೆಚ್ಚಿ ಅಪಾರ ಯುವಕರಿಗೆ ಸಿಗಂ,ಎಂದೆ ಕಮತಗಿ ನಗರದಲ್ಲಿ ಖ್ಯಾತಿ ಪಡೆದಿದ್ದರು, ಅಮೀನಗಡ ಠಾಣೆಯಲ್ಲಿ ಇದ್ದಷ್ಟು ದಿನ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ಮಾಡಿ ಜನಮಾನಸದಲ್ಲಿ ಉಳಿದ ಸಂಗಮೇಶ ಅವರ ಜನ ಸೇವೆ ಅನನ್ಯ,ಅವರು ಎಲ್ಲೆ ಇದ್ದರು ನೊಂದವರ ಧ್ವನಿಯಾಗಿ ಉತ್ತಮ ಕೆಲಸ ಮಾಡಲಿ ಎಂದು ಗ್ರಾಂ,ಪ,ಮಾಜಿ ಅಧ್ಯಕ್ಷ ಪಿಡ್ಡಪ್ಪ ಕುರಿ ಶುಭ ಹಾರೈಸಿದರು,ಈ ಸರಳ ಸನ್ಮಾನ ಸಮಾರಂಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಮತಿ ಗ್ಯಾನವ್ವ ಮಾದರ, ಉಪಾಧ್ಯಕ್ಷ ಶ್ರೀಮತಿ ಜ್ಯೋತಿ ಜ ಪೂಜಾರ,ಯಮನಪ್ಪ ಶಿಲ್ಪಿ,ಹನಮಂತ ಮಿಣಜಗಿ, ಪಿಡ್ಡಪ್ಪ ಕುರಿ ,ದುರಗಪ್ಪ ಮಾದರ,ಗ್ಯಾನಪ್ಪ ಗೋನಾಳ ಜಂಹಗೀರಸಾಬ ಜಾಗೀರದಾರ, ಆನಂದ ಪರಾಳದ ,ಶ್ರೀಮತಿ ಇಂದ್ರವ್ವ ಮಡಿವಾಳರ,ಹಾಗೂ ಸರ್ವ ಸದಸ್ಯರು ಸೇರಿದಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀ ಎಮ್,ಎ,ದಖನಿ ಉಪಸ್ಥಿತಿ ಇದ್ದರು.