ಅಮೀನಗಡ : ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದಲ್ಲಿ ವಾರ್ಡ ನಂಬರ ೦೯ ರಲ್ಲಿ MPS ಕನ್ನಡ ಶಾಲೆ ಪಕ್ಕದಲ್ಲಿರುವ ನಾಗಪ್ಪನ ಕಟ್ಟೆಯಲ್ಲಿ ಪ್ರತಿಷ್ಟಾಪನೆಗೊಂಡ ನಾಗಮೂರ್ತಿ ಹಾಗೂ ಹನುಮ ದೇವರಿಗೆ ಇಂದು ಸೀಗೆಹುಣ್ಣಿಮೆ ನಿಮಿತ್ತವಾಗಿ ಮಹಾ ರುದ್ರಾಭಿಶೇಖ ಧಾರ್ಮಿಕ ಪೂಜಾ ಕಾರ್ಯಕ್ರಮ ಪ್ರತಿ ವರ್ಷದಂತೆ ಈ ವರ್ಷವೂ ನಡೆಯುತ್ತಿದೆ, ಎಂದು ಈ ನಾಗಪ್ಪನ ಕಟ್ಟೆ ಜೀರ್ನೋದ್ದಾರ ಸೇವಾ ಸಮಿತಿ ಅಧ್ಯಕ್ಷರಾದ ಶ್ರೀ ಯಮನಪ್ಪ ದ್ಯಾವಪ್ಪ ಗಾಳಿ ಅವರು ತಿಳಿಸಿದರು ಈ ಸಲಹಾ ಸಮಿತಿಯ ಸದಸ್ಯರಾದ ಅಶೋಕ ಪಲ್ಲೆದ

ಅವರು ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಯಮನಪ್ಪ ಗಾಳಿ ಅವರು ಸ್ವತಃ ಈ ನಾಗಪ್ಪನ ಕಟ್ಟೆ ಜೀರ್ನೋದ್ದಾರ ಮಾಡಿ ನಿತ್ಯ ಪೂಜೆ ಮಾಡುತ್ತಾ ಇದರ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ, ಪ್ರತಿ ವರ್ಷ ಅಂದರೆ ಇದು ೨ ನೇ ವರ್ಷ ಈ ಸೀಗೆಹುಣ್ಣಿಮೆ ದಿನ ಇಲ್ಲಿ ಮಹಾ ರುದ್ರಾಭಿಶೇಖ ಪೂಜೆ ಮಾಡಿಸಿ ನೂರಾರು ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗುವುದು ,ಇಂದು ಈ ೦೯ ವಾರ್ಡಿನ ಎಲ್ಲಾ ಭಕ್ತರು ಹಾಗೂ ಗ್ರಾಮದ ಗುರು- ಹಿರಿಯರು ಬಂದು ಇಂದು ಸಾಯಂಕಾಲ ೦೭ ಗಂಟೆಗೆ ಮಹಾ ಪ್ರಸಾದ ಪ್ರಾರಂಭ ಮಾಡಲಾಗುವುದು ಎಲ್ಲರೂ ಬಂದು ಪ್ರಸಾದ ಮಾಡಲು ವಿನಂತಿಸಿದರು.

ಈ ಓನಿಯ ಹಿರಿಯರಾದ ಶ್ರೀ ಯಮನಪ್ಪ ಗೂಳಪ್ಪ ಘಂಟಿ ಅವರು ಮಾತನಾಡಿ ಈ ಓನಿಯಲ್ಲಿ ಈ ನಾಗಮೂರ್ತಿ ಹಾಗೂ ಹನುಮ ದೇವರ ಮೂರ್ತಿ ಪ್ರತಿಷ್ಟಾಪನೆ ಆದ ಮೇಲೆ ಇಲ್ಲಿ ಶಾಂತಿ ನೆಲೆಸಿದೆ, ಪ್ರತಿ ವರ್ಷ ಹೀಗೆ ಉತ್ತಮ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಯಲಿ ಯಮನಪ್ಪ ಗಾಳಿ ಅವರ ಶ್ರಮದಿಂದ ಇಲ್ಲಿ ಇಂತಹ ಧಾರ್ಮಿಕ ಕಾರ್ಯಕ್ಕೆ ಸಾಕ್ಷಿಯಾಗಿದೆ ಎಂದರು.

ಸಮಿತಿ ಅಧ್ಯಕ್ಷರಾದ ಶ್ರೀ ಯಮನಪ್ಪ ಗಾಳಿ ಅವರು ಮಾತನಾಡಿ ನನ್ನ ಕೈಲಾದ ಮಟ್ಟಿಗೆ ನಾನು ಕೆಲಸ ಮಾಡಿದಿನಿ ಪ್ರತಿ ವರ್ಷ ಭಕ್ತರು ಹೆಚ್ಚು ಹೆಚ್ಚಾಗಿ ಇಲ್ಲಿ ನಡೆದುಕೊಳ್ಳುತ್ತಿದಾರೆ, ಇದಕ್ಕೆ ಸಮಿತಿ ರಚನೆ ಮಾಡಲಾಗಿದೆ, ನಿರಂತರವಾಗಿ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದಿನ ದಿನಮಾನದಲ್ಲಿ ನಡೆಸಲು ಎಲ್ಲರ ಸಹಕಾರ ಅವಶ್ಯಕವಾಗಿದೆ, ಎಲ್ಲರೂ ಆಯಂಕಾಲ ೦೭ ಗಂಟೆಗೆ ಪ್ರಸಾದ ಮಾಡಿಕೊಂಡು ಹೋಗಲು ನಮ್ಮ ವಿನಂತಿ ಎಂದರು. ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಶ್ರೀಧರ ಒಡ್ಡೊಡಗಿ,ನೀಲನಗೌಡ ಕೋಟೆಕಲ್ಲ,ರವಿ ಭೂಳ್ಳಾ, ಶಂಕ್ರಪ್ಪ ಕತ್ತಿ, ಶಂಕ್ರಪ್ಪ ಜನಿವಾರದ,ರವೀಂದ್ರ ಧೂಪದ,ಯಲ್ಲಪ್ಪ ಉಡೆದ, ಬಸವರಾಜ ಕೆಂಚನಗೌಡರ, ಶ್ರೀಮತಿ ಸಾವಿತ್ರಿ ಬ,ಕೆಂಚನಗೌಡರ ಸಿದ್ದನಗೌಡ ಪಾಟೀಲ ಹಾಗೂ ಅರ್ಚಕರಾದ ಮಹಾಂತಯ್ಯ ಹಿರೇಮಠ ಉಪಸ್ಥಿತಿ ಇದ್ದರು
